ಅಮೆರಿಕ: ಪ್ರಮೋಶನ್ಗಾಗಿ ಹೆಸರು ಶಿಫಾರಸ್ಸು ಮಾಡದ ಬಾಸ್ನ ಇಡೀ ಕುಟುಂಬವನ್ನೇ ನಿರ್ನಾಮ ಮಾಡಿದ ಕೊಲೆಗಡುಕ 8 ವರ್ಷಗಳ ನಂತರ ಸೆರೆಸಿಕ್ಕ!
ಫ್ಯಾಂಗ್ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಅವನ ಬಾಸ್ ಆಗಿದ್ದ ಮೋಯೆ ಬಡ್ತಿಗೆ ತನ್ನ ಹೆಸರನ್ನು ಶಿಫಾರಸ್ಸು ಮಾಡಲಿಲ್ಲ ಎಂಬ ಕಾರಣಕ್ಕೆ ಅವನು ಇಡೀ ಕುಟುಂಬವನ್ನೇ ಹೊಸಕಿ ಹಾಕಿದ ಎಂದು ಪತ್ರಿಕೆ ವರದಿ ಮಾಡಿದೆ. ಫ್ಯಾಂಗ್ ಈಗ 58 ವರ್ಷದವನಾಗಿದ್ದಾನೆ.
ಅಮೆರಿಕದ ಹೌಸ್ಟನ್ ನಲ್ಲಿ (Houston) ತನ್ನ ಬಾಸ್ ಇಡೀ ಕುಟುಂಬವನ್ನು ಕೊಂದು ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬನನ್ನು 8 ವರ್ಷಗಳ ನಂತರ ಬಂಧಿಸಲಾಗಿದೆ. ಹೌಸ್ಟನ್ ಕ್ರಾನಿಕಲ್ ಪತ್ರಿಕೆಯ ವರದಿಯೊಂದರ ಪ್ರಕಾರ ಫಗ್ ಲು (Fang Lu) ಎಂದು ಗುರುತಿಸಲಾಗಿರುವ ವ್ಯಕ್ತಿಯನ್ನು ಸೆಪ್ಟೆಂಬರ್ 11ರಂದು ಅವನು ಚೀನಾದಿದ ಕ್ಯಾಲಿಫೋರ್ನಿಯಾ ಗೆ ಬಂದಿಳಿಯುತ್ತಿದ್ದಂತೆಯೇ ಬಂಧಿಸಲಾಯಿತು. ವರದಿಯಲ್ಲಿ ಉಲ್ಲೇಖಿಸಿರುವ ಹಾಗೆ ಜನೆವರಿ 30, 2014 ರಂದು ಮೋಯೆ ಸುನ್ 50 (Maoye Sun,), ಮೆಕ್ಸೀ ಸುನ್ 49, ತಿಮೋಥಿ ಸುನ್ 9, ಟೈಟಸ್ ಸುನ್ 7 ಅವರ ಬುಲೆಟ್ ಗಳಿಂದ ಜರ್ಝರಿತ ದೇಹಗಳು ಮೇಯೋ ಮನೆಯ ಬೇರೆ ಬೇರೆ ಬೆಡ್ ರೂಮ್ಗಳಲ್ಲಿ ಸಿಕ್ಕಾಗ ಅವನು ನಡೆಸಿದ ಮಾರಣಹೋಮ ಬೆಳಕಿಗೆ ಬಂದಿತ್ತು. ಸಾಮೂಹಿಕ ಕೊಲೆಗಳನ್ನು ಅವನು ಯಾಕೆ ಮಾಡಿದ ಅನ್ನೋದನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.
ಫ್ಯಾಂಗ್ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಅವನ ಬಾಸ್ ಆಗಿದ್ದ ಮೋಯೆ ಬಡ್ತಿಗೆ ತನ್ನ ಹೆಸರನ್ನು ಶಿಫಾರಸ್ಸು ಮಾಡಲಿಲ್ಲ ಎಂಬ ಕಾರಣಕ್ಕೆ ಅವನು ಇಡೀ ಕುಟುಂಬವನ್ನೇ ಹೊಸಕಿ ಹಾಕಿದ ಎಂದು ಪತ್ರಿಕೆ ವರದಿ ಮಾಡಿದೆ. ಫ್ಯಾಂಗ್ ಈಗ 58 ವರ್ಷದವನಾಗಿದ್ದಾನೆ.
ಪೊಲೀಸರು ನ್ಯಾಯಾಲಯಕ್ಕೆ ಒದಗಿಸಿರುವ ದಾಖಲೆಗಳ ಪ್ರಕಾರ ಫ್ಯಾಂಗ್ ಗೆ ತಾನು ಕೆಲಸ ಮಾಡುತ್ತಿದ್ದ ಕಂಪನಿಯ ರೀಸರ್ಚ್ ಮತ್ತು ಡೆವಲಪ್ ಮೆಂಟ್ ವಿಭಾಗಕ್ಕೆ ವರ್ಗಾವಣೆ ಹೊಂದುವ ಬಯಕೆಯಿತ್ತು ಮತ್ತು ಅದಕ್ಕಾಗಿ ಮೇಲಾಧಿಕಾರಿಗಳಿಗೆ ತನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ನೀಡುವಂತೆ ಮೋಯೆಗೆ ಮನವಿ ಮಾಡಿಕೊಂಡಿದ್ದ.
ಮರುದಿನ ಅವನು ಕಚೇರಿಗೆ ಹೋದಾಗ ಸಹೊದ್ಯೋಗಿಗಳು ತನ್ನೊಂದಿಗೆ ಭಿನ್ನವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ. ಮೋಯೆ ತನ್ನ ಬಗ್ಗೆ ಅವಹೇಳನಕಾರಿ ಸಂಗತಿಗಳನ್ನು ಹೇಳಿರಬಹುದು ಹಾಗಾಗೇ, ಅವರೆಲ್ಲ ತನ್ನೊಂದಿಗೆ ಹಾಗೆ ವರ್ತಿಸುತ್ತಿದ್ದಾರೆಂದು ಅವನು ಭಾವಿಸಿದ್ದ.
ತನಗೆ ಪ್ರಮೋಶನ್ ಸಿಗದಿರುವುದಕ್ಕೂ ಅದೇ ಕಾರಣ ಎಂಬ ಖಚಿತ ಅಭಿಪ್ರಾಯ ಅವನಲ್ಲಿ ಮೂಡಿಬಿಟ್ಟಿತ್ತು, ಎಂದು ಪೊಲೀಸರು ಸಲ್ಲಿಸಿದ ದಾಖಲೆಗಳ ಪ್ರತಿಗಳನ್ನು ಸಂಗ್ರಹಿಸಿ ಹೌಸ್ಟನ್ ಕ್ರಾನಿಕಲ್ ಪತ್ರಿಕೆ ವರದಿ ಮಾಡಿದೆ.
ಪೊಲೀಸರು ತಮ್ಮ ತನಿಖೆಯನ್ನು ಫ್ಯಾಂಗ್ ಮೇಲೆ ಕೇಂದ್ರೀಕರಿಸಿ ಅದನ್ನು ಚುರುಕುಗೊಳಿಸಿದ ಬಳಿಕ ಅವನು ಗನ್ ಬಗ್ಗೆ ತದ್ವಿರುದ್ಧವಾದ ಹೇಳಿಕೆಗಳನ್ನು ನೀಡಿದಾಗ ಅವರ ಶಂಕೆ ಬಲಗೊಂಡಿತ್ತು.
ಫ್ಯಾಂಗ್ ಹೆಂಡತಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ಪ್ರಮೋಶನ್ ಕುರಿತಂತೆ ಮೋಯೆಯೊಂದಿಗೆ ತನ್ನ ಗಂಡ ಜಗಳ ಕಾದಿದ್ದ ಅಂತ ಹೇಳಿದ್ದಳು. ಫ್ಯಾಂಗ್ ಪಿಸ್ಟಲ್ ಒಂದನ್ನು ಖರೀದಿಸಿದ ಬಗ್ಗೆ ಹೇಳಿದಾಗ ಅವಳು ದಿಗ್ಭ್ರಮೆ ವ್ಯಕ್ತಪಡಿಸಿದ್ದಳು.
ಡಿ ಎನ್ ಎ ವಿಶ್ಲೇಷಣೆ ಫ್ಯಾಂಗ್ ದೋಷಿ ಅನ್ನೋದನ್ನು ನಿರೂಪಿಸಿತು!
ಮೋಯೆ ಜೊತೆ ಜಗಳ ಮಾಡಿದ್ದನ್ನು ಫ್ಯಾಂಗ್ ಒಪ್ಪಿಕೊಂಡನಾದರೂ ಕೊಲೆಗಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಅಂತ ಸಾಧಿಸಿದ.
ಫೊರೆನ್ಸಿಕ್ ತಜ್ಞರ ತಂಡ ಸುನ್ ಕುಟುಂಬ ಮನೆ ಪರಿಶೀಲಿಸಿದಾಗ ಅವರಿಗೆ ಮಹಿಳೆಯರು ಉಪಯೋಗಿಸುವ ಕೌಚ್ ಪರ್ಸೊಂದರಲ್ಲಿ ಡಿ ಎನ್ ಎ ಮಿಕ್ಸ್ಚರ್ ಗಳು ಸಿಕ್ಕವು. ಸದರಿ ಸ್ಯಾಂಪಲ್ ಗಳು ಫ್ಯಾಂಗ್ ಡಿ ಎನ್ ಎ ನೊಂದಿಗೆ ಹೋಲಿಕೆಯಾದವು. ಅದರೆ ಡಿ ಎನ್ ಎ ವಿಶ್ಲೇಷಣೆ ವರದಿಗಳು ಪೊಲೀಸರಿಗೆ ಲಭ್ಯವಾದಾಗ ಫ್ಯಾಂಗ್ ತನ್ನ ಸ್ವದೇಶ ಚೀನಾಗೆ ಹೋಗಿಬಿಟ್ಟಿದ್ದ.
ಇನ್ನು ಅವನು ನಮ್ಮ ಕೈಗೆ ಸಿಕ್ಕಲಾರ ಅಂತ ಪೊಲೀಸರು ಅಂದಿಕೊಂಡಿದ್ದಾಗಲೇ ಸೆಪ್ಟೆಂಬರ್ 11 ರಂದು ಅವನು ಚೀನಾದಿಂದ ಕ್ಯಾಲಿಫೋರ್ನಿಯಾ ವಿಮಾನ ನಿಲ್ದಾಣದಲ್ಲಿ ಬಂದಿಳಿದ. ಅವನನ್ನು ಕೂಡಲೇ ಬಂಧಿಸಲಾಯಿತು.