AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Watch ಅಮೆರಿಕನ್ ಏರ್‌ಲೈನ್ಸ್‌ ವಿಮಾನದಲ್ಲಿ ಸಿಬ್ಬಂದಿ ಜತೆ ಜಗಳವಾಡಿ ಹಲ್ಲೆ ನಡೆಸಿದ ಪ್ರಯಾಣಿಕ

ಯುಎಸ್ ನ್ಯಾಯ ಇಲಾಖೆ ನೀಡಿದ ಪ್ರಕಟಣೆ ಪ್ರಕಾರ ಹಲ್ಲೆ ನಡೆಸಿದವನು ಕ್ಯಾಲಿಫೋರ್ನಿಯಾದ ನಿವಾಸಿ 33 ವರ್ಷದ ಅಲೆಕ್ಸಾಂಡರ್ ತುಂಗ್ ಕುಯು ಲೆ ಎಂದು ಗುರುತಿಸಲಾಗಿದೆ. ವಿಮಾನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ...

Watch ಅಮೆರಿಕನ್ ಏರ್‌ಲೈನ್ಸ್‌ ವಿಮಾನದಲ್ಲಿ ಸಿಬ್ಬಂದಿ ಜತೆ ಜಗಳವಾಡಿ ಹಲ್ಲೆ ನಡೆಸಿದ ಪ್ರಯಾಣಿಕ
ವಿಮಾನದ ಸಿಬ್ಬಂದಿ ಮೇಲೆ ಪ್ರಯಾಣಿಕನ ಹಲ್ಲೆ
TV9 Web
| Edited By: |

Updated on:Sep 23, 2022 | 6:43 PM

Share

ಅಮೆರಿಕನ್ ಏರ್‌ಲೈನ್ಸ್‌ನಲ್ಲಿ (American Airlines) ಮೆಕ್ಸಿಕೊದ ಲಾಸ್ ಕ್ಯಾಬೋಸ್‌ನಿಂದ ಲಾಸ್ ಏಂಜಲೀಸ್‌ಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಫ್ಲೈಟ್ ಅಟೆಂಡೆಂಟ್ ಮೇಲೆ ದಾಳಿ ಮಾಡಿದ ಘಟನೆ ವರದಿ ಆಗಿದೆ. ಇದಾದ ಪ್ರಯಾಣಿಕನ್ನು ಬಂಧಿಸಿದ್ದು ಅವರಿಗೆ ಆಜೀವ ನಿಷೇಧ ವಿಧಿಸಲಾಗಿದೆ. ಬುಧವಾರ ಅಮೆರಿಕನ್ ಏರ್‌ಲೈನ್ಸ್ ಫ್ಲೈಟ್ 377ರಲ್ಲಿ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯವನ್ನು ಮತ್ತೊಬ್ಬ ಪ್ರಯಾಣಿಕರು ಸೆರೆ ಹಿಡಿದಿದ್ದಾರೆ.ಈ ವಿಡಿಯೊ ವೈರಲ್ ಆಗಿತ್ತು. ವಾಷಿಂಗ್ಟನ್ ಪೋಸ್ಟ್ ಪ್ರಕಾರ, ವಿಮಾನವು ಲಾಸ್ ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 3.30 ರ ನಂತರ (ಸ್ಥಳೀಯ ಸಮಯ) ಇಳಿದಿದ್ದು, ಪ್ರಯಾಣಿಕನನ್ನು ತಕ್ಷಣವೇ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (FBI) ಅಧಿಕಾರಿಗಳು ಬಂಧಿಸಿದ್ದಾರೆ. ಟ್ವಿಟರ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಿದಾಡುತ್ತಿರುವ   33 ಸೆಕೆಂಡುಗಳ ವಿಡಿಯೊದಲ್ಲಿ ಪುರುಷ ಅಟೆಂಡೆಂಟ್ ಪ್ರಯಾಣಿಕನಲ್ಲಿ “ನೀವು ನನಗೆ ಬೆದರಿಕೆ ಹಾಕುತ್ತಿದ್ದೀರಾ?” ಎಂದು ಕೇಳುತ್ತಿದ್ದಾನೆ. ಆಗ ಕಿತ್ತಳೆ ಬಣ್ಣದ ಫ್ಲೋರಲ್ ಶರ್ಟ್ ಧರಿಸಿದ ಪ್ರಯಾಣಿಕನು ಹಿಂದಿನಿಂದ ಓಡಿಹೋಗಿ ವಿಮಾನದ ಸಿಬ್ಬಂದಿಯ ತಲೆಗೆ ಹೊಡೆಯುತ್ತಿರುವುದು ಕಾಣಿಸುತ್ತದೆ.

ಇತರ ಪ್ರಯಾಣಿಕರು “ಓ ಮೈ ಗಾಡ್” ಎಂದು ಕಿರುಚುವುದು ಕೇಳಿಸುತ್ತದೆ. ಒಬ್ಬ ಪ್ರಯಾಣಿಕನು, “ನೀವು ಏನು ಮಾಡುತ್ತಿದ್ದೀರಿ?” ಎಂದು ಹೇಳುತ್ತಿರುವುದೂ ವಿಡಿಯೊದಲ್ಲಿದೆ.

ಅಷ್ಟೊತ್ತಿಗೆ ಒಬ್ಬ ಗಗನಸಖಿಯು ಕೆಳಗೆ ಬಿದ್ದ ಫ್ಲೈಟ್ ಅಟೆಂಡೆಂಟ್‌ನ ರಕ್ಷಣೆಗೆ ಬರುತ್ತಿರುವುದು ಕಾಣಿಸುತ್ತದೆ. ಪ್ರತ್ಯಕ್ಷದರ್ಶಿಯೊಬ್ಬರು ನ್ಯೂಯಾರ್ಕ್ ಪೋಸ್ಟ್‌ನಿಂದ ಉಲ್ಲೇಖಿಸಿದಂತೆ, ಹಲ್ಲೆ ನಡೆಸಿದ ಪ್ರಯಾಣಿಕನ್ನು ವಿಮಾನದಿಂದ ಕೆಳಗಿಳಿಸುವವರೆಗೆ ಇತರ ಪ್ರಯಾಣಿಕರು ಆತನನ್ನು ತಡೆದು ಹಿಡಿದುಕೊಂಡಿದ್ದಾರೆ. ಯುಎಸ್ ನ್ಯಾಯ ಇಲಾಖೆ ನೀಡಿದ ಪ್ರಕಟಣೆ ಪ್ರಕಾರ ಹಲ್ಲೆ ನಡೆಸಿದವನು ಕ್ಯಾಲಿಫೋರ್ನಿಯಾದ ನಿವಾಸಿ 33 ವರ್ಷದ ಅಲೆಕ್ಸಾಂಡರ್ ತುಂಗ್ ಕುಯು ಲೆ ಎಂದು ಗುರುತಿಸಲಾಗಿದೆ. ವಿಮಾನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪ ಈತನ ಮೇಲೆ   ಹೊರಿಸಲಾಗಿದೆ. ಅವರು ತಪ್ಪಿತಸ್ಥರಾದರೆ 20 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ.

ಫ್ಲೈಟ್ 377 ಲಾಸ್ ಕ್ಯಾಬೋಸ್ ವಿಮಾನ ನಿಲ್ದಾಣದಿಂದ ಹೊರಟ 20 ನಿಮಿಷಗಳ ನಂತರ ಈ ಘಟನೆ ನಡೆದಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ. ಎಫ್‌ಬಿಐ ಸಲ್ಲಿಸಿದ ಅಫಿಡವಿಟ್ ಪ್ರಕಾರ ಲೆ, ಆಹಾರ ಮತ್ತು ಪಾನೀಯಗಳನ್ನು ಒದಗಿಸುತ್ತಿದ್ದಾಗ ಫ್ಲೈಟ್ ಅಟೆಂಡೆಂಟ್‌ನ ಭುಜವನ್ನು ಹಿಡಿದು ಕಾಫಿ ಕೇಳಿದರು. ನಂತರ ಅವರು ಮುಂದೆ ನಡೆದು ಪ್ರಥಮ ದರ್ಜೆ ಕ್ಯಾಬಿನ್ ಬಳಿ ಕುಳಿತರು. ಆಗ ಮತ್ತೊಬ್ಬ ಸಿಬ್ಬಂದಿ ದಯವಿಟ್ಟು ನಿಮ್ಮ ಸೀಟಿಗೆ ಮರಳಿ ಎಂದು ಹೇಳಿದಾಗ ಲೆ ಹಲ್ಲೆ ಮಾಡಿದ್ದಾರೆ. ತಕ್ಷಣವೇ ವಿಮಾನ ಸಿಬ್ಬಂದಿ ಪ್ರಯಾಣಿಕನ ವಿರುದ್ಧ ಪೈಲಟ್ ಗೆ ದೂರು ನೀಡಿದ್ದಾರೆ.

ಅಮೆರಿಕನ್ ಏರ್‌ಲೈನ್ಸ್ ನಂತರ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು ನಮ್ಮ ತಂಡದ ಸದಸ್ಯರ ವಿರುದ್ಧದ ಹಿಂಸಾಚಾರದ ಕೃತ್ಯಗಳನ್ನು ಅಮೆರಿಕನ್ ಏರ್‌ಲೈನ್ಸ್ ಸಹಿಸುವುದಿಲ್ಲ. ಈ ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಯನ್ನು ಭವಿಷ್ಯದಲ್ಲಿ ನಮ್ಮೊಂದಿಗೆ ಪ್ರಯಾಣಿಸಲು ಎಂದಿಗೂ ಅನುಮತಿಸುವುದಿಲ್ಲ ಎಂದು ಹೇಳಿದೆ.

Published On - 6:35 pm, Fri, 23 September 22