ಬೆಂಗಳೂರು: ಌಂಕರ್ ಅನುಶ್ರೀ ಪ್ರಕರಣದ ವಿಚಾರವಾಗಿ ಕೇಳಿಬರುತ್ತಿರುವ ಪ್ರಭಾವಿ ನಾಯಕರ ಹೆಸರಲ್ಲಿ ಯಾವ ಮಾಜಿ ಸಿಎಂ ಇದ್ದಾರೆ ಅಂತಾ ಜನರು ತಿಳಿದುಕೊಳ್ಳಬೇಕು ಎಂದು ಮಾಜಿ ಸಿಎಂ HD ಕುಮಾರಸ್ವಾಮಿ ಹೇಳಿದ್ದಾರೆ.
ನಾನು ಸರ್ಕಾರಕ್ಕೆ, ಸಿಎಂಗೆ ಮತ್ತು ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಲ್ಲಿ ಸತ್ಯಾಸತ್ಯತೆ ಏನು ಅನ್ನೋದು ಗೊತ್ತಾಗಬೇಕಿದೆ. ಯಾರು ಮಾಹಿತಿ ಕೊಟ್ಟಿದ್ದಾರೆ? ಯಾರು ಇದ್ದಾರೆ? ಯಾವ ಮಾಜಿ ಸಿಎಂ ಇದ್ದಾರೆ ಅನ್ನೋ ಸತ್ಯ ಗೊತ್ತಾಗಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
CCB ನೋಟಿಸ್ ಬಂದ ದಿನವೇ ಮೂವರಿಗೆ ಅನುಶ್ರೀಯಿಂದ ಕಾಲ್: ಯಾರು ಗೊತ್ತಾ ಆ ಪ್ರಭಾವಿಗಳು?
ಡ್ರಗ್ಸ್ ವಿಚಾರದಲ್ಲಿ ನಾನು ಮೊದಲೇ ಹೇಳಿದ್ದೆ. ಇದು ಹಳ್ಳ ಹಿಡಿಯುತ್ತೆ ಎಂದು ಹೇಳಿದ್ದೆ. ದಿನಕ್ಕೊಂದು ಕಪೋಲಕಲ್ಪಿತ ವರದಿಗಳು ಬರುತ್ತಿವೆ. ಕೆಲವು ಮಾಧ್ಯಮಗಳು ಅದರದ್ದೇ ಆದ ರೀತಿಯ ವರದಿಗಳನ್ನು ಮಾಡುತ್ತಿವೆ.
ಌಂಕರ್ ಅನುಶ್ರೀ ವಿಚಾರದಲ್ಲಿ ಕೂಡಾ ಇಂಥದ್ದೇ ವರದಿಗಳು ಬರ್ತಿವೆ. ಕೆಲವು ಪ್ರಭಾವಿ ರಾಜಕಾರಣಿಗಳ ಕೈವಾಡವಿದೆ. ಆಕೆಯ ಕಾಲ್ ಲಿಸ್ಟ್ನಲ್ಲಿ ಎರಡು ಬಾರಿ ಸಿಎಂ ಆಗಿದ್ದವರು ಎಂದೆಲ್ಲಾ ವರದಿಗಳು ಬರ್ತಿವೆ ಎಂಬುದನ್ನೂ ಕುಮಾರಸ್ವಾಮಿ ಪ್ರಸ್ತಾಪಿಸಿದರು.
ನಾನು SM ಕೃಷ್ಣ, ಜಗದೀಶ್ ಶೆಟ್ಟರ್ ಮತ್ತು ಸಿದ್ದರಾಮಯ್ಯ ಸೇರಿ ಆರು ಜನ ಇದ್ದೇವೆ. ಯಾರು ಆ ಮಾಜಿ ಮುಖ್ಯಮಂತ್ರಿ ಎಂಬ ಹೆಸರನ್ನಾದರೂ ಹೇಳಬೇಕಲ್ಲ? ಯಾರು ಈ ವರದಿ ಕೊಟ್ಟಿದ್ದಾರೋ, ಆ ವರದಿಗಾರರ ಬಳಿ ನಾನು.. ಬೇರೆ ಮೂಲದಿಂದ ತಿಳಿದುಕೊಂಡೆ. ಆತನ ಬಳಿ ಯಾರೋ ಶಿವಪ್ರಕಾಶ್ ಎಂಬ ಅಧಿಕಾರಿ ಮಾತನಾಡಿರುವ ಸಾಧ್ಯತೆ ಇದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಆ ಮಾಜಿ ಮುಖ್ಯಮಂತ್ರಿ ಯಾರು ಎಂಬುದನ್ನು ಸರ್ಕಾರ ಹೊರ ತರಬೇಕು. ಆ ಮಾಜಿ ಮುಖ್ಯಮಂತ್ರಿ ಯಾರು ಎಂಬುದನ್ನು ಮಾಧ್ಯಮಗಳಿಗೆ ಮಾಹಿತಿ ಕೊಟ್ಟವರು ಯಾರು? ಜೊತೆಗೆ, ಮಾಜಿ ಸಿಎಂ ಮಗ ಎಂದೂ ವರದಿಗಳು ಬರ್ತಿವೆ. ಈ ರೀತಿಯ ಕಪೋಲಕಲ್ಪಿತ ವರದಿಗಳನ್ನು ಸುಮ್ಮನೆ ಬಿಡಬಾರದು. ನಾನಂತೂ ಇದನ್ನು ತನಿಖೆಗೆ ಒತ್ತಾಯ ಮಾಡುತ್ತೇನೆ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
Published On - 2:45 pm, Sat, 3 October 20