ನಾನವನಲ್ಲ ನಾನವನಲ್ಲ; ಸತ್ಯಾಸತ್ಯತೆ ಹೊರ ಬರಲಿ: ಟಿವಿ 9ಗೆ ಮಾಜಿ ಸಿಎಂ HDK ಹೇಳಿದ್ದೇನು?

ಬೆಂಗಳೂರು: ಌಂಕರ್​ ಅನುಶ್ರೀ ವಿಚಾರವಾಗಿ ಸತ್ಯಾಸತ್ಯತೆ ಹೊರಗೆ ಬರಬೇಕೆಂಬುದು ನಾನು ಕೇಳುತ್ತೇನೆ ಎಂದು ಟಿವಿ9ಗೆ ಮಾಜಿ ಸಿಎಂ HD ಕುಮಾರಸ್ವಾಮಿ ಹೇಳಿದ್ದಾರೆ. ಹಾಗೆ ಕರೆ ಮಾಡಿದ್ದರೆ.. ಅವರೊಬ್ಬ ದೇಶದ್ರೋಹಿ ಆಷ್ಟೇ ರಾಜ್ಯದ ಜನರಿಗೆ ಸತ್ಯಾಸತ್ಯತೆ ತಿಳಿಯಬೇಕು. ಯಾವ ಮಾಜಿ ಸಿಎಂ ಒತ್ತಡ ಹಾಕಿದ್ದಾರೆಂದು ತಿಳಿಯಲಿ. ಹೀಗೆ, ಒತ್ತಡ ಹಾಕಿದ್ದರೆ ಅವರೊಬ್ಬ ಸಮಾಜದ್ರೋಹಿ, ದೇಶದ್ರೋಹಿ ಆಷ್ಟೇ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ನಾನು ಇಂತಹ ಪ್ರಕರಣಗಳಲ್ಲಿ ಯಾರಿಗೂ ರಕ್ಷಣೆ ಕೊಡಲ್ಲ. ನಮ್ಮ ಪಕ್ಷದವರೇ ಆದರೂ ನಾನು ರಕ್ಷಣೆ ಕೊಡುವುದಿಲ್ಲ. ಬೇರೆ […]

ನಾನವನಲ್ಲ ನಾನವನಲ್ಲ; ಸತ್ಯಾಸತ್ಯತೆ ಹೊರ ಬರಲಿ: ಟಿವಿ 9ಗೆ ಮಾಜಿ ಸಿಎಂ HDK ಹೇಳಿದ್ದೇನು?
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Oct 03, 2020 | 3:30 PM

ಬೆಂಗಳೂರು: ಌಂಕರ್​ ಅನುಶ್ರೀ ವಿಚಾರವಾಗಿ ಸತ್ಯಾಸತ್ಯತೆ ಹೊರಗೆ ಬರಬೇಕೆಂಬುದು ನಾನು ಕೇಳುತ್ತೇನೆ ಎಂದು ಟಿವಿ9ಗೆ ಮಾಜಿ ಸಿಎಂ HD ಕುಮಾರಸ್ವಾಮಿ ಹೇಳಿದ್ದಾರೆ.

ಹಾಗೆ ಕರೆ ಮಾಡಿದ್ದರೆ.. ಅವರೊಬ್ಬ ದೇಶದ್ರೋಹಿ ಆಷ್ಟೇ ರಾಜ್ಯದ ಜನರಿಗೆ ಸತ್ಯಾಸತ್ಯತೆ ತಿಳಿಯಬೇಕು. ಯಾವ ಮಾಜಿ ಸಿಎಂ ಒತ್ತಡ ಹಾಕಿದ್ದಾರೆಂದು ತಿಳಿಯಲಿ. ಹೀಗೆ, ಒತ್ತಡ ಹಾಕಿದ್ದರೆ ಅವರೊಬ್ಬ ಸಮಾಜದ್ರೋಹಿ, ದೇಶದ್ರೋಹಿ ಆಷ್ಟೇ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ನಾನು ಇಂತಹ ಪ್ರಕರಣಗಳಲ್ಲಿ ಯಾರಿಗೂ ರಕ್ಷಣೆ ಕೊಡಲ್ಲ. ನಮ್ಮ ಪಕ್ಷದವರೇ ಆದರೂ ನಾನು ರಕ್ಷಣೆ ಕೊಡುವುದಿಲ್ಲ. ಬೇರೆ ಪಕ್ಷಗಳ ನಾಯಕರ ಬಗ್ಗೆ ನನಗೆ ಮಾಹಿತಿ ಇಲ್ಲ ಅಂತಾ HD ಕುಮಾರಸ್ವಾಮಿ ಹೇಳಿದ್ದಾರೆ.

ಅನುಶ್ರೀಯನ್ನು ನಾನು ಯಾವತ್ತೂ ನೋಡಿಲ್ಲ ಅನುಶ್ರೀಯನ್ನು ನನ್ನ ಜೀವನದಲ್ಲಿ ಯಾವತ್ತೂ ನೋಡಿಲ್ಲ. 2-3 ತಿಂಗಳ ಹಿಂದೆ ಒಂದು ಸಂದರ್ಶನ ಮಾಡಿದ್ದಾರೆ. ನನ್ನ ಪುತ್ರನ ಜೊತೆ ಒಂದು ಸಂದರ್ಶನ ಮಾಡಿದ್ದಾರೆ. ಅದನ್ನು ಹೊರತುಪಡಿಸಿದರೆ ನನ್ನ ಮಗನಿಗೂ ಆಕೆಯ ಸಂಪರ್ಕ ಇಲ್ಲ. ಸುಮ್ಮನೆ ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಬೇಡ. ಯಾರು ಆರೋಪ ಮಾಡಿದ್ದಾರೋ ಅವರೇ ಸ್ಪಷ್ಟನೆ ನೀಡಲಿ ಎಂದು ಹೇಳಿದ್ದಾರೆ.

ಅನುಶ್ರೀ ಏನು ತಪ್ಪು ಮಾಡಿದ್ದಾರೆಂದು ನನಗೆ ಗೊತ್ತಿಲ್ಲ. ಅನುಶ್ರೀ ತಪ್ಪು ಮಾಡಿದ್ದರೆ ಅವರ ವಿರುದ್ಧ ಕ್ರಮಕೈಗೊಳ್ಳಲಿ. ಇದಕ್ಕೆ ಒತ್ತಡ ಹಾಕಿದವರ ಹೆಸರನ್ನು ಬಹಿರಂಗಪಡಿಸಲಿ. ರಾಜ್ಯ ಸರ್ಕಾರ ಕೂಡಲೇ ಇದನ್ನು ಬಹಿರಂಗಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ HD ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Published On - 3:28 pm, Sat, 3 October 20

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್