ರಾಮನ ವಿಗ್ರಹಕ್ಕಿಂತ ಡಾ. ಅಂಬೇಡ್ಕರ್​ ವಿಗ್ರಹಗಳೇ ಜಾಸ್ತಿ ಇವೆ: DK ಶಿವಕುಮಾರ್​

ಧಾರವಾಡ: ಜೀವನದಲ್ಲಿ ಹೋರಾಟ, ಸಂಘರ್ಷ ಇವೆಲ್ಲಾ ಬೇಕು. ರಾಮನ ಬಗ್ಗೆ ನಮಗೆ ಗೌರವಿದೆ. ಹಿಂದೂ ಧರ್ಮ ಯಾರ ಮನೆ ಆಸ್ತಿಯಲ್ಲ ಎಂದು ಹುಬ್ಬಳ್ಳಿಯ ಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ KPCC ಅಧ್ಯಕ್ಷ DK ಶಿವಕುಮಾರ್​ ಹೇಳದ್ದಾರೆ. ಹಿಂದೂ ಧರ್ಮ ಯಾರ ಮನೆ ಆಸ್ತಿಯಲ್ಲ. ಹಿಂದೂ ಧರ್ಮ ನಮ್ಮೆಲ್ಲಾ ಭಾರತೀಯರ ಆಸ್ತಿ. ಅವರವರ ಧರ್ಮ ಅವರವರಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ. ನೊಂದವರ ಮತ್ತು ತುಳಿತಕ್ಕೆ ಒಳಗಾದವರಿಗಾಗಿ ಡಾ. ಬಿ ಆರ್ ಅಂಬೇಡ್ಕರ್ ಸಂವಿಧಾನ ರಚಿಸಿದರು. ನಮ್ಮ ದೇಶದಲ್ಲಿ ರಾಮನ ವಿಗ್ರಹಕ್ಕಿಂತ […]

ರಾಮನ ವಿಗ್ರಹಕ್ಕಿಂತ ಡಾ. ಅಂಬೇಡ್ಕರ್​ ವಿಗ್ರಹಗಳೇ ಜಾಸ್ತಿ ಇವೆ: DK ಶಿವಕುಮಾರ್​
ಡಿ.ಕೆ.ಶಿವಕುಮಾರ್​
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Oct 03, 2020 | 5:28 PM

ಧಾರವಾಡ: ಜೀವನದಲ್ಲಿ ಹೋರಾಟ, ಸಂಘರ್ಷ ಇವೆಲ್ಲಾ ಬೇಕು. ರಾಮನ ಬಗ್ಗೆ ನಮಗೆ ಗೌರವಿದೆ. ಹಿಂದೂ ಧರ್ಮ ಯಾರ ಮನೆ ಆಸ್ತಿಯಲ್ಲ ಎಂದು ಹುಬ್ಬಳ್ಳಿಯ ಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ KPCC ಅಧ್ಯಕ್ಷ DK ಶಿವಕುಮಾರ್​ ಹೇಳದ್ದಾರೆ. ಹಿಂದೂ ಧರ್ಮ ಯಾರ ಮನೆ ಆಸ್ತಿಯಲ್ಲ. ಹಿಂದೂ ಧರ್ಮ ನಮ್ಮೆಲ್ಲಾ ಭಾರತೀಯರ ಆಸ್ತಿ. ಅವರವರ ಧರ್ಮ ಅವರವರಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.

ನೊಂದವರ ಮತ್ತು ತುಳಿತಕ್ಕೆ ಒಳಗಾದವರಿಗಾಗಿ ಡಾ. ಬಿ ಆರ್ ಅಂಬೇಡ್ಕರ್ ಸಂವಿಧಾನ ರಚಿಸಿದರು. ನಮ್ಮ ದೇಶದಲ್ಲಿ ರಾಮನ ವಿಗ್ರಹಕ್ಕಿಂತ ಡಾ. BR ಅಂಬೇಡ್ಕರ್ ಅವರ ವಿಗ್ರಹಗಳೇ ಜಾಸ್ತಿ ಇದೆ ಎಂದು DK ಶಿವಕುಮಾರ್​ ಹೇಳದ್ದಾರೆ.

ಜೊತೆಗೆ, ಹಸ್ತ ಇದ್ದರೆ ಅದು ಕಾಂಗ್ರೆಸ್ ಪಕ್ಷ. ಇಂಥ ಧ್ವಜ ಹಾಕಿಕೊಳ್ಳುವುದೇ ಒಂದು ಹೆಮ್ಮೆ. ಹಾಗೆಯೇ, ಕಾಂಗ್ರೆಸ್ ಪಕ್ಷದ ಧ್ವಜದಲ್ಲಿ ಚಕ್ರ ಹಾಕಿದರೆ ಅದು ರಾಷ್ಟ್ರಧ್ವಜವಾಗುತ್ತದೆ. ಹಾಗಾಗಿ, ನೀವು ಮಾತ್ರ ದೇಶದ ಧ್ವಜ ಹಾಕಿಕೊಳ್ಳಲು ಸಾಧ್ಯ. BJP ಯವರು ಈ ಧ್ವಜ ಹಾಕಿಕೊಳ್ಳಲು ಸಾಧ್ಯವಿಲ್ಲ ಎಂದು ಹುಬ್ಬಳ್ಳಿಯಲ್ಲಿ ಶಿವಕುಮಾರ್​ ಹೇಳಿದ್ದಾರೆ.