ಬೆಂಗಳೂರು: ಈ ಬಾರಿಯ ಉಪಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಎರಡನ್ನೂ ಸೋಲಿಸಬೇಕು. ಜೆಡಿಎಸ್ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುವ ಸಾಮರ್ಥ್ಯ ಹೊಂದಿಲ್ಲ. ಬೇರೆಯವರ ಬೆಂಬಲ ಪಡೆದು ಸರ್ಕಾರ ಮಾಡಲು ಹವಣಿಸುವ ಪಕ್ಷ ಅಂದರೆ ಅದು ಜೆಡಿಎಸ್ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಜನಸೇವೆ ಮಾಡ್ತೀನೆಂದು ಮತ ಕೇಳಬೇಕು. ಇದನ್ನು ಬಿಟ್ಟು ಅಳುತ್ತಾ ಏಕೆ ಮಾತನಾಡಬೇಕೆಂದು ಮಾಜಿ ಸಿಎಂ ಕುಮಾರಸ್ವಾಮಿ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಹಿಂದಿನಿಂದಲೂ ಇವರು ಹೀಗೆ ಎಂದು ಹೇಳಿದ್ದಾರೆ.
TB ಜಯಚಂದ್ರ ಶಿರಾದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಜೆಡಿಎಸ್ನವರು ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಳ್ತಾರೆ. ಕಾರ್ಯಕರ್ತರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ದಾರೆ.