AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಬೈಕ್ ಕದ್ದು ಆಂಧ್ರದಲ್ಲಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

ಬೆಂಗಳೂರು: ನೈಟ್ ಬೀಟ್ ವೇಳೆ ಆರ್.ಟಿ.ನಗರ ಠಾಣೆ ಪೊಲೀಸರು ಕೈಗೆ ಬೈಕ್ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಶೇಕ್ ಅಬ್ರಾರ್, ಸೈಫುಲ್ಲಾ ಬಾಷಾ, ಅತೀಕ್ ಹುಸೇನ್, ಮುಫೀದ್ ವುಲ್ಲಾಖಾನ್‌ನನ್ನು ಬಂಧಿತ ಆರೋಪಿಗಳು. ಬಂಧಿತರಿಂದ ₹28 ಲಕ್ಷ ಮೌಲ್ಯದ 20 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಬಂಧಿತ ಶೇಖ್ ಅಬ್ರಾರ್ ಮೆಡಿಕಲ್ ನಲ್ಲಿ ಕೆಲಸ ಮಾಡುತಿದ್ದಾನೆ. ಈ ಹಿಂದೆ 2018ರಲ್ಲಿ ರಾಬರಿ ಪ್ರಕರಣದಲ್ಲಿ ಜೈಲು ಸೇರಿದ್ದ. ನಂತರ ಜಾಮೀನು ಮೇಲೆ ಹೊರ ಬಂದು ಮತ್ತದೇ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಸೈಫುಲ್ಲಾಖಾನ್, ಆಂಧ್ರದ ಪೂಂಗನೂರಿನಲ್ಲಿ ಚಿಕನ್ […]

ಬೆಂಗಳೂರಿನಲ್ಲಿ ಬೈಕ್ ಕದ್ದು ಆಂಧ್ರದಲ್ಲಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್
ಆಯೇಷಾ ಬಾನು
|

Updated on: Oct 04, 2020 | 2:53 PM

Share

ಬೆಂಗಳೂರು: ನೈಟ್ ಬೀಟ್ ವೇಳೆ ಆರ್.ಟಿ.ನಗರ ಠಾಣೆ ಪೊಲೀಸರು ಕೈಗೆ ಬೈಕ್ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಶೇಕ್ ಅಬ್ರಾರ್, ಸೈಫುಲ್ಲಾ ಬಾಷಾ, ಅತೀಕ್ ಹುಸೇನ್, ಮುಫೀದ್ ವುಲ್ಲಾಖಾನ್‌ನನ್ನು ಬಂಧಿತ ಆರೋಪಿಗಳು. ಬಂಧಿತರಿಂದ ₹28 ಲಕ್ಷ ಮೌಲ್ಯದ 20 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ.

ಬಂಧಿತ ಶೇಖ್ ಅಬ್ರಾರ್ ಮೆಡಿಕಲ್ ನಲ್ಲಿ ಕೆಲಸ ಮಾಡುತಿದ್ದಾನೆ. ಈ ಹಿಂದೆ 2018ರಲ್ಲಿ ರಾಬರಿ ಪ್ರಕರಣದಲ್ಲಿ ಜೈಲು ಸೇರಿದ್ದ. ನಂತರ ಜಾಮೀನು ಮೇಲೆ ಹೊರ ಬಂದು ಮತ್ತದೇ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಸೈಫುಲ್ಲಾಖಾನ್, ಆಂಧ್ರದ ಪೂಂಗನೂರಿನಲ್ಲಿ ಚಿಕನ್ ಅಂಗಡಿ ಹೊಂದಿದ್ದಾನೆ‌. ಮುಫೀದ್ ವುಲ್ಲಾ ಖಾನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಮತ್ತೊಬ್ಬ ಆರೋಪಿ ಅತೀಕ್ ಹುಸೇನ್ ಬೆಂಗಳೂರು ನಿವಾಸಿಯಾಗಿದ್ದಾನೆ.

ಬೀಟ್​ನಲ್ಲಿದ್ದ ಪೊಲೀಸರಿಗೆ ಬೈಕ್ ಕಳ್ಳರು‌ ಅನುಮಾನಾಸ್ಪದವಾಗಿ ಓಡಾಡುತಿದ್ದದ್ದು ಕಣ್ಣಿಗೆ ಬಿದ್ದಿದೆ. ಅವರನ್ನು ಕರೆದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ನಂತರ ಅವರನ್ನು ಹಿಡಿದು ವಿಚಾರಿಸಿದಾಗ ಅವರು ಕಳ್ಳರು ಎಂಬುವುದು ಬಹಿರಂಗವಾಗಿದೆ. ನಂತರ ಮಾಹಿತಿ ಆಧರಿಸಿ ತನಿಖೆ ನಡೆಸಿದಾಗ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಹಾಗೂ 20 ಬೈಕ್​​ಗಳು ಪತ್ತೆಯಾಗಿವೆ. ಸೆಪ್ಟೆಂಬರ್ 28ರಂದು ಈ ಘಟನೆ ನಡೆದಿದೆ.

ಕಳ್ಳತನದ ಪ್ಲಾನ್ ಕೇಳಿ ಪೊಲೀಸರು ಶಾಕ್: ಕಳ್ಳರ ಕೃತ್ಯದ ಕಥೆ ಕೇಳಿ ಪೊಲೀಸರು ಶಾಕ್ ಆಗಿದ್ದಾರೆ. ಈ ಗ್ಯಾಂಗ್ ಪಕ್ಕ ಪ್ಲ್ಯಾನ್ ಮಾಡಿ ಕೆಲಸ ಶುರು ಮಾಡುತ್ತಿದ್ದರು. ಅತೀಕ್ ಎಂಬುವವನು ನಗರದಲ್ಲಿ ಓಡಾಡೊ ಬೈಕ್​ಗಳನ್ನು ಟಾರ್ಗೆಟ್ ಮಾಡುತಿದ್ದ. ನಂತರ ಬೈಕ್ ನಿಲ್ಲಿಸುವ ಜಾಗ ನೋಡಿಕೊಂಡು ಲೊಕೇಶ್​ನನ್ನು ಶೇರ್ ಮಾಡುತ್ತಿದ್ದ. ನಂತರ ಶೇಕ್ ಅಬ್ರಾರ್, ಸೈಫುಲ್ಲಾಖಾನ್ ಸ್ಥಳಕ್ಕೆ ಎಂಟ್ರಿ ಕೊಟ್ಟು ಹಗಲು ಬೈಕ್​ ನೋಡಿಕೊಂಡು ರಾತ್ರಿ ಕಳ್ಳತನಕ್ಕೆ ಪ್ಲಾನ್ ಮಾಡುತ್ತಿದ್ದರು.

ಮೊದಲು ಓಲಾ ಅಥವ ಉಬರ್ ಮಾಡಿಕೊಂಡು ಬೈಕ್ ಇರುವ ಜಾಗಕ್ಕೆ ಬರುತ್ತಿದ್ದರು. ನಂತರ ಬೈಕ್ ಕದ್ದು ಅದರಲ್ಲೇ ಎಸ್ಕೇಪ್ ಆಗುತಿದ್ದರು. ಕದ್ದ ಬೈಕನ್ನು ಸೀದ ಆಂಧ್ರಗೆ ತೆಗೆದುಕೊಂಡು ಪರಾರಿಯಾಗುತ್ತಿದ್ದರು. ಆಂಧ್ರದಲ್ಲಿ ಪೂಂಗನೂರಿನ ಮುಫೀದ್ ವುಲ್ಲಾಖಾನ್ ಮನೆಯಲ್ಲಿ ಉಳಿದುಕೊಳ್ಳುತಿದ್ರು. ಬಳಿಕ ಮುಫೀದ್ OLXನಲ್ಲಿ ಹಾಕಿದ ಬೈಕ್​ಗಳ ನಂಬರ್ ಕದ್ದು ಅದನ್ನು ಕದ್ದ ಬೈಕ್​ಗಳಿಗೆ ಅಂಟಿಸುತ್ತಿದ್ದ. ನಂತರ ನಕಲಿ ನಂಬರ್ ವುಳ್ಳ ಕದ್ದ ಬೈಕ್​ಗಳನ್ನು ಆಂಧ್ರದಲ್ಲಿ ಮಾರಾಟ ಮಾಡುತ್ತಿದ್ದರು. ಇದೇ ರೀತಿ ಇಪ್ಪತ್ತಕ್ಕೂ ಅಧಿಕ ಬೈಕ್​ಗಳನ್ನು ಮಾರಾಟ ಮಾಡಿದ್ದಾರೆ.