ನಕಲಿ ರೈಸ್ ಪುಲ್ಲಿಂಗ್ ಮೂಲಕ ವಂಚನೆ: ಐವರು ಅರೆಸ್ಟ್
ಮೈಸೂರು: ನಕಲಿ ರೈಸ್ ಪುಲ್ಲಿಂಗ್ ಸಾಮಗ್ರಿಗಳನ್ನು ತೋರಿಸಿ ವಂಚನೆ ಮಾಡುತ್ತಿದ್ದ ಐವರನ್ನು ಮೈಸೂರು ದೇವರಾಜ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ತಮಿಳುನಾಡಿನ ಚಂದ್ರಮೋಹನ್(57), ಕೇರಳದ ಟಿ.ವಿ.ಇಬ್ರಾಹಿಂ (50), ಬೆಂಗಳೂರಿನ ಕೆ.ಆರ್.ಗಿರಿನಾಥನ್(49), ಎಂ.ಗೋಪಿ(40),ಚಾಮರಾಜನಗರದ ಇರ್ಷದ್ ಖಾನ್ ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮೈಸೂರಿನ ಹೋಟೆಲೊಂದರಲ್ಲಿ ಕುಳಿತು ಪ್ಲಾನ್ ಮಾಡುತ್ತಿದ್ದ ದಂಧೆ ಕೋರರನ್ನು ಬಂಧಿಸಿದ್ದಾರೆ. ಹಾಗೂ ನಕಲಿ ರೈಸ್ ಪುಲ್ಲಿಂಗ ಸಾಮಾಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಇವರು ಶ್ರೀಮಂತರನ್ನ ಟಾರ್ಗೆಟ್ ಮಾಡಿ ಸಾಮಾಗ್ರಿಗಳನ್ನು ಮಾರಾಟ ಮಾಡುತ್ತಿದ್ದರು. ಖರೀದಿಸಲು ನಿರಾಕರಿಸಿದ್ರೆ […]
ಮೈಸೂರು: ನಕಲಿ ರೈಸ್ ಪುಲ್ಲಿಂಗ್ ಸಾಮಗ್ರಿಗಳನ್ನು ತೋರಿಸಿ ವಂಚನೆ ಮಾಡುತ್ತಿದ್ದ ಐವರನ್ನು ಮೈಸೂರು ದೇವರಾಜ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ತಮಿಳುನಾಡಿನ ಚಂದ್ರಮೋಹನ್(57), ಕೇರಳದ ಟಿ.ವಿ.ಇಬ್ರಾಹಿಂ (50), ಬೆಂಗಳೂರಿನ ಕೆ.ಆರ್.ಗಿರಿನಾಥನ್(49), ಎಂ.ಗೋಪಿ(40),ಚಾಮರಾಜನಗರದ ಇರ್ಷದ್ ಖಾನ್ ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮೈಸೂರಿನ ಹೋಟೆಲೊಂದರಲ್ಲಿ ಕುಳಿತು ಪ್ಲಾನ್ ಮಾಡುತ್ತಿದ್ದ ದಂಧೆ ಕೋರರನ್ನು ಬಂಧಿಸಿದ್ದಾರೆ. ಹಾಗೂ ನಕಲಿ ರೈಸ್ ಪುಲ್ಲಿಂಗ ಸಾಮಾಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಇವರು ಶ್ರೀಮಂತರನ್ನ ಟಾರ್ಗೆಟ್ ಮಾಡಿ ಸಾಮಾಗ್ರಿಗಳನ್ನು ಮಾರಾಟ ಮಾಡುತ್ತಿದ್ದರು. ಖರೀದಿಸಲು ನಿರಾಕರಿಸಿದ್ರೆ ಮನೆಗೆ ಏಳಿಗೆಯಾಗುತ್ತೆ ಎಂದು ನಂಬಿಸಿ ಮಾರಾಟ ಮಾಡುತ್ತಿದ್ದರು.