‘ಮೊನ್ನೆ HDK ಶಿರಾದಲ್ಲಿ ಅಳುತ್ತಿದ್ರಂತೆ.. ದೇವೇಗೌಡರ ಕಾಲದಿಂದಲೂ ಈ ಡ್ರಾಮಾ ನಡ್ಕೊಂಡು ಬಂದಿದೆ’

ಬೆಂಗಳೂರು: ಈ ಬಾರಿಯ ಉಪಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಎರಡನ್ನೂ ಸೋಲಿಸಬೇಕು. ಜೆಡಿಎಸ್ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುವ ಸಾಮರ್ಥ್ಯ ಹೊಂದಿಲ್ಲ. ಬೇರೆಯವರ ಬೆಂಬಲ ಪಡೆದು ಸರ್ಕಾರ ಮಾಡಲು ಹವಣಿಸುವ ಪಕ್ಷ ಅಂದರೆ ಅದು ಜೆಡಿಎಸ್ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಜೆಡಿಎಸ್ ಒಂದು ರಾಜಕೀಯ ಪಕ್ಷವೇ ಅಲ್ಲ. ಮೊನ್ನೆ ಕುಮಾರಸ್ವಾಮಿ ಶಿರಾದಲ್ಲಿ ಕಣ್ಣೀರು ಹಾಕಿದ್ದಾರಂತೆ. ಯಾಕೆ ಕಣ್ಣೀರು ಹಾಕಿದ್ರೋ ನನಗೆ ಗೊತ್ತಾಗಲಿಲ್ಲ. ದೇವೇಗೌಡರ ಕಾಲದಿಂದಲೂ ಈ ಡ್ರಾಮಾ ನಡೆದುಕೊಂಡು ಬಂದಿದೆ. ಆದರೆ, ಜನರು […]

‘ಮೊನ್ನೆ HDK ಶಿರಾದಲ್ಲಿ ಅಳುತ್ತಿದ್ರಂತೆ.. ದೇವೇಗೌಡರ ಕಾಲದಿಂದಲೂ ಈ ಡ್ರಾಮಾ ನಡ್ಕೊಂಡು ಬಂದಿದೆ’
Follow us
KUSHAL V
|

Updated on: Oct 04, 2020 | 2:10 PM

ಬೆಂಗಳೂರು: ಈ ಬಾರಿಯ ಉಪಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಎರಡನ್ನೂ ಸೋಲಿಸಬೇಕು. ಜೆಡಿಎಸ್ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುವ ಸಾಮರ್ಥ್ಯ ಹೊಂದಿಲ್ಲ. ಬೇರೆಯವರ ಬೆಂಬಲ ಪಡೆದು ಸರ್ಕಾರ ಮಾಡಲು ಹವಣಿಸುವ ಪಕ್ಷ ಅಂದರೆ ಅದು ಜೆಡಿಎಸ್ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಜೆಡಿಎಸ್ ಒಂದು ರಾಜಕೀಯ ಪಕ್ಷವೇ ಅಲ್ಲ. ಮೊನ್ನೆ ಕುಮಾರಸ್ವಾಮಿ ಶಿರಾದಲ್ಲಿ ಕಣ್ಣೀರು ಹಾಕಿದ್ದಾರಂತೆ. ಯಾಕೆ ಕಣ್ಣೀರು ಹಾಕಿದ್ರೋ ನನಗೆ ಗೊತ್ತಾಗಲಿಲ್ಲ. ದೇವೇಗೌಡರ ಕಾಲದಿಂದಲೂ ಈ ಡ್ರಾಮಾ ನಡೆದುಕೊಂಡು ಬಂದಿದೆ. ಆದರೆ, ಜನರು ಇದಕ್ಕೆ ಮರುಳಾಗಬೇಡಿ ಎಂದು ಸಿದ್ದಾರಮಯ್ಯ ಟಾಂಗ್​ ಕೊಟ್ಟಿದ್ದಾರೆ.

ಜನಸೇವೆ ಮಾಡ್ತೀನೆಂದು ಮತ ಕೇಳಬೇಕು. ಇದನ್ನು ಬಿಟ್ಟು ಅಳುತ್ತಾ ಏಕೆ ಮಾತನಾಡಬೇಕೆಂದು ಮಾಜಿ ಸಿಎಂ ಕುಮಾರಸ್ವಾಮಿ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಹಿಂದಿನಿಂದಲೂ ಇವರು ಹೀಗೆ ಎಂದು ಹೇಳಿದ್ದಾರೆ.

TB ಜಯಚಂದ್ರ ಶಿರಾದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಜೆಡಿಎಸ್​ನವರು ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಳ್ತಾರೆ. ಕಾರ್ಯಕರ್ತರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ದಾರೆ.