IMAದಿಂದ 400 ಕೋಟಿ ರೂ. ಗಿಫ್ಟ್​ ಪಡೆದ ಆರೋಪ: CBI ವಶಕ್ಕೆ ರೋಷನ್ ಬೇಗ್

|

Updated on: Nov 22, 2020 | 7:58 PM

ಬೆಂಗಳೂರು: IMA ಸಂಸ್ಥೆಯಿಂದ ಬಹುಕೋಟಿ ವಂಚನೆ ಕೇಸ್​ಗೆ ಸಂಬಂಧಿಸಿ ಮಾಜಿ ಸಚಿವ ಆರ್.ರೋಷನ್ ಬೇಗ್​ರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. IMA ಕೇಸ್​ನಲ್ಲಿ ರೋಷನ್ ಬೇಗ್​ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ರೋಷನ್ ಬೇಗ್​ರನ್ನು ಅಧಿಕಾರಿಗಳು ನಗರದ ಸಿಬಿಐ ಕಚೇರಿಯಲ್ಲಿ ವಿಚಾರಣಗೆ ಒಳಪಡಿಸಿದ್ದಾರೆ ಎಂದು ಹೇಳಲಾಗಿದೆ. IMA ಸಂಸ್ಥೆಯಿಂದ ಬಹುಕೋಟಿ ವಂಚನೆ ಕೇಸ್​ಗೆ ಸಂಬಂಧಸಿದಂತೆ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಬೆಳಗ್ಗೆಯಿಂದ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರಂತೆ. ಎಲ್ಲಾ ಹಣ […]

IMAದಿಂದ 400 ಕೋಟಿ ರೂ. ಗಿಫ್ಟ್​ ಪಡೆದ ಆರೋಪ: CBI ವಶಕ್ಕೆ ರೋಷನ್ ಬೇಗ್
ಮಾಜಿ ಸಚಿವ ರೋಷನ್​ ಬೇಗ್
Follow us on

ಬೆಂಗಳೂರು: IMA ಸಂಸ್ಥೆಯಿಂದ ಬಹುಕೋಟಿ ವಂಚನೆ ಕೇಸ್​ಗೆ ಸಂಬಂಧಿಸಿ ಮಾಜಿ ಸಚಿವ ಆರ್.ರೋಷನ್ ಬೇಗ್​ರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. IMA ಕೇಸ್​ನಲ್ಲಿ ರೋಷನ್ ಬೇಗ್​ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ರೋಷನ್ ಬೇಗ್​ರನ್ನು ಅಧಿಕಾರಿಗಳು ನಗರದ ಸಿಬಿಐ ಕಚೇರಿಯಲ್ಲಿ ವಿಚಾರಣಗೆ ಒಳಪಡಿಸಿದ್ದಾರೆ ಎಂದು ಹೇಳಲಾಗಿದೆ. IMA ಸಂಸ್ಥೆಯಿಂದ ಬಹುಕೋಟಿ ವಂಚನೆ ಕೇಸ್​ಗೆ ಸಂಬಂಧಸಿದಂತೆ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಬೆಳಗ್ಗೆಯಿಂದ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರಂತೆ.

ಎಲ್ಲಾ ಹಣ ರೋಷನ್‌ ಬೇಗ್‌ ಬಳಿಯಿದೆ ಎಂದು ಈ ಹಿಂದೆ ಐಎಂಎ ಸಂಸ್ಥೆ ಮುಖ್ಯಸ್ಥ ಮನ್ಸೂರ್‌ ಖಾನ್ ಆರೋಪಿಸಿದ್ದ. ಆರೋಪದ ಬಗ್ಗೆ ವಿಡಿಯೋ ಸಹ ರಿಲೀಸ್ ಮಾಡಿದ್ದ. ಜೊತೆಗೆ, ನಾನು ಕೊಟ್ಟಿದ್ದ ಹಣ ಬಳಸಿಕೊಂಡು ಬೇಗ್​ ಚುನಾವಣೆ ಗೆದ್ದಿದ್ದರು. 400 ಕೋಟಿ ಪಡೆದಿದ್ದರು ಎಂದು ಸಹ ಮನ್ಸೂರ್ ಆರೋಪಿಸಿದ್ದ​​ನು.

ಮನ್ಸೂರ್​ ಅಲಿ ಖಾನ್​ ನೇರವಾಗಿ ಆರೋಪಿಸಿದ್ದ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ರೋಷನ್​ ಬೇಗ್​ ಹೆಸರು ಕೇಳಿ ಬಂದಿತ್ತು. ಹೀಗಾಗಿ, ಆರ್.ರೋಷನ್​ ಬೇಗ್​​ರನ್ನ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ರೋಷನ್​ ಬೇಗ್​ಗೆ 14 ದಿನ ನ್ಯಾಯಾಂಗ​ ಬಂಧನ

 

Published On - 6:42 pm, Sun, 22 November 20