‘ಸಿಎಂ ಕುರ್ಚಿ ಏರಿದ್ಮೇಲೆ BSY ಪೂರ್ಣಾವಧಿ ಅಧಿಕಾರ ಮಾಡಿಲ್ಲ; ಇದಕ್ಕೆ ಕಾರಣ.. ದತ್ತಾತ್ರೇಯನ ಶಾಪ’

ಚಿಕ್ಕಮಗಳೂರು: ಸಿಎಂ ಯಡಿಯೂರಪ್ಪಗೆ ದತ್ತಾತ್ರೇಯನ ಶಾಪ ಇದೆ. ಮುಖ್ಯಮಂತ್ರಿ ಆದ್ಮೇಲೆ ಮಾಲೆ ಹಾಕಿಕೊಂಡು ಬರುತ್ತೇನೆ ಅಂತಾ ಹೇಳಿದ್ರು. ಆದ್ರೆ BSY ಸಿಎಂ ಆದ್ಮೇಲೆ ದತ್ತಪೀಠಕ್ಕೆ ಬಂದಿಲ್ಲ. ಹಿಂದೆ ಸಿಎಂ ಆಗಿ ಕುರ್ಚಿ ಏರಿದ ಮೇಲೂ ಪೂರ್ಣಾವಧಿ ಅಧಿಕಾರ ಮಾಡಿಲ್ಲ. ದತ್ತಾತ್ರೇಯನ ಶಾಪದಿಂದಲೇ BSYಗೆ ಈ ರೀತಿ ಆಗಿದೆ. ಶಾಪ ವಿಮೋಚನೆ ಆಗಬೇಕು ಅಂದ್ರೆ ದತ್ತಪೀಠಕ್ಕೆ ಬರಬೇಕು ಅಂತಾ ಶ್ರೀರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿಂದು ಶ್ರೀರಾಮ ಸೇನೆ ಹಮ್ಮಿಕೊಂಡಿದ್ದ ದತ್ತಮಾಲಾ ಆಭಿಯಾನಕ್ಕೆ […]

‘ಸಿಎಂ ಕುರ್ಚಿ ಏರಿದ್ಮೇಲೆ BSY ಪೂರ್ಣಾವಧಿ ಅಧಿಕಾರ ಮಾಡಿಲ್ಲ; ಇದಕ್ಕೆ ಕಾರಣ.. ದತ್ತಾತ್ರೇಯನ ಶಾಪ’
Follow us
ಪೃಥ್ವಿಶಂಕರ
| Updated By: KUSHAL V

Updated on: Nov 22, 2020 | 6:04 PM

ಚಿಕ್ಕಮಗಳೂರು: ಸಿಎಂ ಯಡಿಯೂರಪ್ಪಗೆ ದತ್ತಾತ್ರೇಯನ ಶಾಪ ಇದೆ. ಮುಖ್ಯಮಂತ್ರಿ ಆದ್ಮೇಲೆ ಮಾಲೆ ಹಾಕಿಕೊಂಡು ಬರುತ್ತೇನೆ ಅಂತಾ ಹೇಳಿದ್ರು. ಆದ್ರೆ BSY ಸಿಎಂ ಆದ್ಮೇಲೆ ದತ್ತಪೀಠಕ್ಕೆ ಬಂದಿಲ್ಲ. ಹಿಂದೆ ಸಿಎಂ ಆಗಿ ಕುರ್ಚಿ ಏರಿದ ಮೇಲೂ ಪೂರ್ಣಾವಧಿ ಅಧಿಕಾರ ಮಾಡಿಲ್ಲ. ದತ್ತಾತ್ರೇಯನ ಶಾಪದಿಂದಲೇ BSYಗೆ ಈ ರೀತಿ ಆಗಿದೆ. ಶಾಪ ವಿಮೋಚನೆ ಆಗಬೇಕು ಅಂದ್ರೆ ದತ್ತಪೀಠಕ್ಕೆ ಬರಬೇಕು ಅಂತಾ ಶ್ರೀರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿಂದು ಶ್ರೀರಾಮ ಸೇನೆ ಹಮ್ಮಿಕೊಂಡಿದ್ದ ದತ್ತಮಾಲಾ ಆಭಿಯಾನಕ್ಕೆ ಚಾಲನೆ ಕೊಟ್ಟ ಗಂಗಾಧರ್ ಕುಲಕರ್ಣಿ ಸಿಎಂ ಯಡಿಯೂರಪ್ಪ ಕುರಿತು ಈ ರೀತಿಯ ಅಚ್ಚರಿಯ ಹೇಳಿಕೆ ನೀಡಿದ್ರು. ಯಡಿಯೂರಪ್ಪ ಕೊಟ್ಟ ಮಾತಿನಂತೆ ಮಾಲೆ ಹಾಕಿಕೊಂಡು ಬಂದು ದತ್ತಪೀಠವನ್ನ ಹಿಂದೂಗಳಿಗೆ ವಹಿಸಬೇಕು. ಆಗ ಮುಂದಿನ ದಿನಗಳಲ್ಲಿ ಪೂರ್ಣಾವಧಿ ಅಧಿಕಾರ ನಡೆಸಲು ಗುರುಗಳ ಆಶೀರ್ವಾದ ಸಿಗುತ್ತೆ. ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು. ಒಂದು ವೇಳೆ ನಮ್ಮ ಹೋರಾಟಕ್ಕೆ ಬೆಲೆ ಸಿಗದಿದ್ರೆ, ಉಗ್ರ ಹೋರಾಟ ಮಾಡಬೇಕಾಗುತ್ತದೆ ಅಂತಾ ಗಂಗಾಧರ್ ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆ ಅನ್ವಯ ಶ್ರೀರಾಮಸೇನೆ, ಸರಳವಾಗಿ ದತ್ತಮಾಲಾ ಅಭಿಯಾನಕ್ಕೆ ಚಾಲನೆ ನೀಡಿದೆ. ರಾಜ್ಯಾದ್ಯಂತ ನೂರಾರು ಸಂಖ್ಯೆಯಲ್ಲಿ ದತ್ತಮಾಲಾಧಾರಿಗಳು ಇಂದು ವ್ರತಚಾರಣೆ ಕೈಗೊಂಡಿದ್ದು, 5 ದಿನಗಳ ಬಳಿಕ ದತ್ತಮಾಲೆಯನ್ನ ದತ್ತಪೀಠಕ್ಕೆ ತೆರಳಿ ವೃತಚಾರಣೆಯನ್ನ ಕೊನೆಗೊಳಿಸಿದ್ದಾರೆ.

ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್