ಬೆಂಗಳೂರು: ಐಎಂಎ ಸಂಸ್ಥೆಯಿಂದ ಬಹುಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನ್ ಬೇಗ್ ಗೆ ಜಾಮೀನು ಮಂಜೂರು ಆಗಿದೆ.
ಸಿಬಿಐ ಕೋರ್ಟ್ ಬೇಗ್‌ಗೆ ಷರತ್ತುಬದ್ಧ ಜಾಮೀನು ನೀಡಿದೆ. ಮಾಜಿ ಸಚಿವ ರೋಷನ್ ಬೇಗ್ ತನಿಖೆಗೆ ಸಹಕರಿಸಿದ್ದಾರೆ. ಈಗಾಗಲೇ ತನಿಖೆ ಮುಕ್ತಾಯವಾಗಿದೆ ಎಂದು ಬೇಗ್ ಪರ ಹಿರಿಯ ವಕೀಲ ಶಶಿಕಿರಣ್ ಶೆಟ್ಟಿ ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಮಾಜಿ ಸಚಿವರಿಗೆ ಜಾಮೀನು ಮಂಜೂರಾಗಿದೆ.
IMAದಿಂದ 400 ಕೋಟಿ ರೂ. ಗಿಫ್ಟ್ ಪಡೆದ ಆರೋಪ: CBI ವಶಕ್ಕೆ ರೋಷನ್ ಬೇಗ್
ಬಂಧನ ಬೆನ್ನಲ್ಲೇ ರೋಷನ್ ಮನೆ ಮೇಲೆ CBI ರೇಡ್, ಪುತ್ರ ರುಮಾನ್ ಕಚೇರಿ ಮೇಲೂ ದಾಳಿ
Published On - 12:02 pm, Sat, 5 December 20