ಬ್ಲ್ಯಾಕ್​ ಬೋರ್ಡ್​​ ಮೇಲೆ ಡೆತ್‌ ನೋಟ್ ಬರೆದು ಮಂಚೇನಹಳ್ಳಿ ಇಂಗ್ಲಿಷ್​ ಶಿಕ್ಷಕ ನೇಣಿಗೆ ಶರಣು

ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಯಲ್ಲಿ ಖಾಸಗಿ ಶಾಲೆ ಶಿಕ್ಷಕ ನೇಣಿಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಡೆತ್‌ನೋಟ್ ಬರೆದಿಟ್ಟು ಶಿಕ್ಷಕ ಚಂದ್ರಶೇಖರ(35) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬ್ಲ್ಯಾಕ್​ ಬೋರ್ಡ್​​ ಮೇಲೆ ಡೆತ್‌ ನೋಟ್ ಬರೆದು ಮಂಚೇನಹಳ್ಳಿ ಇಂಗ್ಲಿಷ್​ ಶಿಕ್ಷಕ ನೇಣಿಗೆ ಶರಣು
ಡೆತ್‌ನೋಟ್ ಬರೆದು ಶಿಕ್ಷಕ ನೇಣಿಗೆ ಶರಣು
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Dec 05, 2020 | 11:15 AM

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಯಲ್ಲಿ ಖಾಸಗಿ ಶಾಲೆ ಶಿಕ್ಷಕ ನೇಣಿಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಡೆತ್ ‌ನೋಟ್ ಬರೆದಿಟ್ಟು ಶಿಕ್ಷಕ ಚಂದ್ರಶೇಖರ (35) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬ್ಲ್ಯಾಕ್​ ಬೋರ್ಡ್​​ ಮೇಲೆ ಡೆತ್​ ನೋಟ್!:​ ಜಿಲ್ಲೆಯ ಕನಗಾನಕೊಪ್ಪದ ನಿವಾಸಿಯಾಗಿದ್ದ ಚಂದ್ರಶೇಖರ ಮಂಚೇನಹಳ್ಳಿಯ ಆಚಾರ್ಯ ಶಾಲೆಯಲ್ಲಿ 8 ವರ್ಷಗಳಿಂದ ಇಂಗ್ಲಿಷ್ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದನು. ಆದರೆ, ಇದು ಅನುದಾನಿತ ಶಾಲೆಯಾಗಿದ್ದರೂ ಸರ್ಕಾರಿ ನೇಮಕಾತಿಗೆ ಅನುಮೋದನೆ ಮಾಡದ ಹಿನ್ನೆಲೆಯಲ್ಲಿ.. ನನ್ನ ಸಾವಿಗೆ ಆಚಾರ್ಯ ಶಾಲೆ ಆಡಳಿತ ಮಂಡಳಿ ಕಾರಣ ಎಂದು ಡೆತ್‌ ನೋಟ್‌ನಲ್ಲಿ ಉಲ್ಲೇಖಿಸಿ ಶಿಕ್ಷಕ ಚಂದ್ರಶೇಖರ ನೇಣಿಗೆ ಶರಣಾಗಿದ್ದಾನೆ.

Published On - 11:14 am, Sat, 5 December 20