ಕೃತಕ ಸೂರ್ಯನ ತಯಾರಿಸಿದ ಚೀನಾ! ಇದು ಸೂರ್ಯನಿಗಿಂತ 10 ಪಟ್ಟು ಹೆಚ್ಚು ಶಾಖ ಕೊಡುತ್ತದೆ..

ಪರಮಾಣು ಅಧ್ಯಯನ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿರುವ ಚೀನಾ ಇದೀಗ 'ಕೃತಕ ಸೂರ್ಯ ಎಂದು ಕರೆಯಲ್ಪಡುವ ಪರಮಾಣು ಸಮ್ಮಿಳನ(nuclear fusion) ರಿಯಾಕ್ಟರ್ ಸಿದ್ಧಪಡಿಸಿದೆ.

ಕೃತಕ ಸೂರ್ಯನ ತಯಾರಿಸಿದ ಚೀನಾ! ಇದು ಸೂರ್ಯನಿಗಿಂತ 10 ಪಟ್ಟು ಹೆಚ್ಚು ಶಾಖ ಕೊಡುತ್ತದೆ..
ಟೊಕಮಕ್
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Dec 05, 2020 | 2:13 PM

ಬೀಜಿಂಗ್: ಪರಮಾಣು ಅಧ್ಯಯನ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿರುವ ಚೀನಾ ಇದೀಗ ಕೃತಕ ಸೂರ್ಯ ಎಂದು ಕರೆಯಲ್ಪಡುವ ಪರಮಾಣು ಸಮ್ಮಿಳನ (nuclear fusion) ರಿಯಾಕ್ಟರ್ ಸಿದ್ಧಪಡಿಸಿದೆ.

ಹೆಚ್ಎಲ್– 2ಎಂ ಟೊಕಮಕ್ ರಿಯಾಕ್ಟರ್ ಚೀನಾದ ಅತೀ ದೊಡ್ಡ ಮತ್ತು ಆಧುನಿಕ ನ್ಯೂಕ್ಲಿಯರ್ ಫ್ಯೂಷನ್ ಪರೀಕ್ಷಾರ್ಥ ಅಧ್ಯಯನ ಸಾಧನವಾಗಿದ್ದು, ಇದು ಪ್ರಬಲ ಮತ್ತು ಸ್ವಚ್ಛ ಚೈತನ್ಯದ ಮೂಲವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಹೇಗೆ ಕಾರ್ಯವೆಸಗುತ್ತದೆ?

ಬಿಸಿ ಪ್ಲಾಸ್ಮಾವನ್ನು ಕರಗಿಸಲು ಇಲ್ಲಿ ಪ್ರಬಲವಾದ ಕಾಂತೀಯ ಕ್ಷೇತ್ರ (ಮ್ಯಾಗ್ನೆಟಿಕ್ ಫೀಲ್ಡ್) ಬಳಸಲಾಗುತ್ತದೆ. ಪೀಪಲ್ಸ್ ಡೈಲಿ ಪ್ರಕಾರ ಇಲ್ಲಿ 150 ದಶಲಕ್ಷ ಡಿಗ್ರಿ ಸೆಲ್ಶಿಯಸ್ ಗಿಂತಲೂ ಹೆಚ್ಚು ಶಾಖ ಉತ್ಪಾದನೆ ಮಾಡಬಹುದಾಗಿದೆ. ಅಂದರೆ ಸೂರ್ಯನ ಶಾಖಕ್ಕಿಂತ ಅಂದಾಜು 10 ಪಟ್ಟು ಹೆಚ್ಚು.

ನೈಋತ್ಯ ಸಿಯಾಚಿನ್ ಪ್ರದೇಶದಲ್ಲಿರುವ ಈ ರಿಯಾಕ್ಟರ್​ನ ಕೆಲಸ ಕಳೆದ ವರ್ಷ ಪೂರ್ಣಗೊಂಡಿತ್ತು. ಅಧಿಕ ಶಾಖ ಮತ್ತು ಚೈತನ್ಯ ಉತ್ಪಾದಿಸುವ ರಿಯಾಕ್ಟರ್ ಇದಾಗಿರುವುದರಿಂದ ಇದನ್ನು ಕೃತಕ ಸೂರ್ಯ ಎಂದು ಕರೆಯಲಾಗಿದೆ.

2006ರಿಂದಲೇ ಚೀನಾದ ವಿಜ್ಞಾನಿಗಳು ನ್ಯೂಕ್ಲಿಯರ್ ಫ್ಯೂಷನ್ ರಿಯಾಕ್ಟರ್ ಗಳ ಚಿಕ್ಕ ಆವೃತ್ತಿಗಳನ್ನು ಅಭಿವೃದ್ಧಿ ಪಡಿಸಲು ಆರಂಭಿಸಿದ್ದರು.

ಚೀನಾದ ರಾಷ್ಟ್ರೀಯ ಪರಮಾಣು ಕಾರ್ಪೊರೇಷನ್ (ಸಿಎನ್​​ಎನ್​ಸಿ) ಪ್ರಕಾರ ಎಚ್ಎಲ್ – 2ಎಂ ಟೊಕಮಕ್ ಈ ಹಿಂದಿನ ಆವೃತ್ತಿ ಎಚ್ಎಲ್– 2ಎಗಿಂತ ಮೂರು ಪಟ್ಟು ಉಷ್ಣತೆಯಿಂದ ಕೂಡಿದೆ.

ಹೈಡ್ರೋಜನ್ ಮತ್ತು ಡ್ಯೂಟೇರಿಯಂ ಅನಿಲಗಳಿಂದ ಸೂರ್ಯನಲ್ಲಿ ಶಾಖ ಉತ್ಪಾದಿಸಲ್ಪಡುವಂತೆ ಪರಮಾಣು ಸಮ್ಮಿಳನದ ಮೂಲಕ ಇಲ್ಲಿ ಶಾಖ ಉತ್ಪಾದಿಸಲ್ಪಡುತ್ತದೆ.

ದಕ್ಷಿಣ ಫ್ರಾನ್ಸ್​ನಲ್ಲಿ ನಿರ್ಮಾಣ ಹಂತದಲ್ಲಿರುವ ದಿ ಇಂಟರ್ ನ್ಯಾಷನಲ್ ಥರ್ಮೊನ್ಯೂಕ್ಲಿಯರ್ ಎಕ್ಸ್​ಪರಿಮೆಂಟಲ್ ರಿಯಾಕ್ಟರ್ (ಐಟಿಇಆರ್) 150 ದಶಲಕ್ಷ ಡಿಗ್ರಿ ಸೆಲ್ಶಿಯಸ್ ಉಷ್ಣತೆಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Published On - 1:20 pm, Sat, 5 December 20

ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ