Video: ಸಿರಿಯಾದ ಆಸ್ಪತ್ರೆಯಲ್ಲಿ ಹಿಂಸಾಚಾರ, ಗುಂಡಿಕ್ಕಿ ಸಿಬ್ಬಂದಿಯ ಹತ್ಯೆ
ಸಿರಿಯಾದಲ್ಲಿ ಸುಮಾರು ಒಂದು ದಶಕದ ಅಂತರ್ಯುದ್ಧವು ಇಡೀ ದೇಶವನ್ನು ಧ್ವಂಸಗೊಳಿಸಿದೆ. ಇತ್ತೀಚಿನ ತಿಂಗಳುಗಳಲ್ಲಿ, ಸ್ವೈದಾ ಪ್ರಾಂತ್ಯದಲ್ಲಿ ಡ್ರೂಜ್ ಸಮುದಾಯ ಮತ್ತು ಸುನ್ನಿ ಬೆಡೋಯಿನ್ ಬುಡಕಟ್ಟು ಜನಾಂಗದ ನಡುವಿನ ಭೀಕರ ಸಂಘರ್ಷವು ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಸಿರಿಯಾದ ಸ್ವೈದಾ ನಗರದಲ್ಲಿನ ಹಿಂಸಾಚಾರದ ನಡುವೆ ಹೃದಯವಿದ್ರಾವಕ ವೀಡಿಯೊ ಹೊರಹೊಮ್ಮಿದೆ. ಈ ವೀಡಿಯೊದಲ್ಲಿ, ಸ್ವೈದಾ ಆಸ್ಪತ್ರೆಯ ನೌಕರರನ್ನು ಸಶಸ್ತ್ರ ಗುಂಪುಗಳು ಕೊಲ್ಲುತ್ತಿರುವುದನ್ನು ತೋರಿಸಲಾಗಿದೆ.

ಸಿರಿಯಾ, ಆಗಸ್ಟ್ 11: ಸಿರಿಯಾದಲ್ಲಿ ಸುಮಾರು ಒಂದು ದಶಕದ ಅಂತರ್ಯುದ್ಧವು ಇಡೀ ದೇಶವನ್ನು ಧ್ವಂಸಗೊಳಿಸಿದೆ. ಇತ್ತೀಚಿನ ತಿಂಗಳುಗಳಲ್ಲಿ, ಸ್ವೈದಾ ಪ್ರಾಂತ್ಯದಲ್ಲಿ ಡ್ರೂಜ್ ಸಮುದಾಯ ಮತ್ತು ಸುನ್ನಿ ಬೆಡೋಯಿನ್ ಬುಡಕಟ್ಟು ಜನಾಂಗದ ನಡುವಿನ ಭೀಕರ ಸಂಘರ್ಷವು ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಸಿರಿಯಾದ ಸ್ವೈದಾ ನಗರದಲ್ಲಿನ ಹಿಂಸಾಚಾರದ ನಡುವೆ ಹೃದಯವಿದ್ರಾವಕ ವೀಡಿಯೊ ಹೊರಹೊಮ್ಮಿದೆ. ಈ ವೀಡಿಯೊದಲ್ಲಿ, ಸ್ವೈದಾ ಆಸ್ಪತ್ರೆಯ ನೌಕರರನ್ನು ಸಶಸ್ತ್ರ ಗುಂಪುಗಳು ಕೊಲ್ಲುತ್ತಿರುವುದನ್ನು ತೋರಿಸಲಾಗಿದೆ.
ಈ ವೀಡಿಯೊವನ್ನು ಸಿರಿಯನ್ ಮಾನವ ಹಕ್ಕುಗಳ ಸಂಘಟನೆ ಎಸ್ಒಎಚ್ಆರ್ ಬಿಡುಗಡೆ ಮಾಡಿದೆ, ಈ ವೀಡಿಯೊದಲ್ಲಿ, ಉಗ್ರಗಾಮಿ ಗುಂಪುಗಳು ಆಸ್ಪತ್ರೆ ಸಿಬ್ಬಂದಿಯನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಿರುವುದನ್ನು ಕಾಣಬಹುದು. ಟಿವಿ9 ಕನ್ನಡವು ವೀಡಿಯೊದ ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.
ಮತ್ತಷ್ಟು ಓದಿ: ಸಿರಿಯಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ; ನೇರ ಪ್ರಸಾರದ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ವಿಡಿಯೋದಲ್ಲಿರುವುದೇನು? ಈ ವಿಡಿಯೋದಲ್ಲಿ ದುಷ್ಕರ್ಮಿಗಳು ಹಲವು ಆಸ್ಪತ್ರೆ ಸಿಬ್ಬಂದಿಗಳನ್ನು ಬಂದೂಕಿನಿಂದ ಬೆದರಿಸಿ ನೆಲದ ಮೇಲೆ ಮಂಡಿಯೂರಿ ಕೂರುವಂತೆ ಮಾಡಿದ್ದರು. ಅವರ ಸುತ್ತಲೂ ಹಲವಾರು ಶಸ್ತ್ರಸಜ್ಜಿತ ವ್ಯಕ್ತಿಗಳಿರುವುದನ್ನು ಕಾಣಬಹುದು. ಒಬ್ಬ ವ್ಯಕ್ತಿಗೆ ಕಪಾಳಮೋಕ್ಷ ಮಾಡಿ ಗುಂಡು ಹಾರಿಸಲಾಗುತ್ತದೆ. 70 ಸಾವಿರ ಜನಸಂಖ್ಯೆಯನ್ನು ಹೊಂದಿರುವ ಸ್ವೈದಾ ನಗರವು ಇನ್ನೂ ಡ್ರೂಜ್ ಸಮುದಾಯದ ನಿಯಂತ್ರಣದಲ್ಲಿದೆ ಎಂಬುದು ಗಮನಾರ್ಹ, ಆದರೂ ಸರ್ಕಾರವು ಹತ್ತಿರದ ಅನೇಕ ಡ್ರೂಜ್ ಗ್ರಾಮಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.
🚨🇸🇾 REPORT: New footage emerged showing HTS “General Security” forces executing unarmed medical staff in Suwayda’s hospital.
Pro-Sharaa/Damascus media and officials previously blamed the Druze “killing Bedouins” in this hospital.
Follow: @RTSG_Newspic.twitter.com/sqSrSzOaIT
— RTSG News (@RTSG_News) August 10, 2025
ಸ್ವೈದಾ ಡ್ರೂಜ್ ಸಮುದಾಯದ ಧಾರ್ಮಿಕ ನಾಯಕ ಶೇಖ್ ಹಿಕ್ಮತ್ ಅಲ್-ಹಿಜ್ರಿ ಈ ಹಿಂಸಾಚಾರದ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ. ಡ್ರೂಜ್ ಸಮುದಾಯವು ಇಸ್ರೇಲ್‌ನಲ್ಲಿ ಅಲ್ಪಸಂಖ್ಯಾತರಾಗಿದ್ದು, ಅನೇಕ ಸದಸ್ಯರು ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




