ಹಾವಿನಿಂದ ಕಚ್ಚಿಸಿಕೊಂಡರೆ ಹೆಚ್ಚು ನೋವಾಗುವುದೇ ಇಲ್ಲವಂತೆ!
ಪ್ರಾಣಿ ಪ್ರೇಮಿ ಡೇವಿಡ್ ಪ್ರಕಾರ ಹಾವು ದುರ್ಬಲ ದವಡೆ ಮತ್ತು ಕಡಿಮೆ ಒತ್ತಡದ ಕಚ್ಚುವಿಕೆಯಿಂದ ಕೂಡಿದ್ದು, ಹತ್ತರಲ್ಲಿ ಒಂದರಷ್ಟು ಮಾತ್ರ ಹಾವಿನ ಕಚ್ಚುವಿಕೆಯ ಅಪಾಯ ಇರುತ್ತದೆ. ಹಾವುಗಳೇ ನನ್ನ ಪ್ರೇರಣೆ ಅವುಗಳು ನಿಜವಾಗಿಯೂ ಅಪಾಯಕಾರಿಯಲ್ಲ. ಈ ಬಗ್ಗೆ ಜನರಿಗೂ ಕೂಡ ಹೆಚ್ಚು ಆಸಕ್ತಿ ಮತ್ತು ಉತ್ಸಾಹ ಇದೆ ಎಂದು ಡೇವಿಡ್ ಎಂದು ಹೇಳಿದ್ದಾನೆ.
ಆಸ್ಟ್ರೇಲಿಯಾ: ಸರೀಸೃಪಗಳು ಅಂದ್ರೆ ಯಾರಿಗೇ ಆಗಲಿ ಭಯ ಇದ್ದೇ ಇರುತ್ತದೆ, ಆದ್ರೆ ಈಗ ಇವುಗಳನ್ನು ಹಿಡಿದು ಕಚ್ಚಿಸಿಕೊಂಡು ಅದರ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಜನರಲ್ಲಿ ಸಂಚಲನ ಮೂಡಿಸುವುದು ಒಂದು ಟ್ರೆಂಡ್ ಆಗಿದೆ.
ಧೈರ್ಯಶಾಲಿ ಹರ್ಪಿಟಾಲಜಿಸ್ಟ್ ಹಾವು ಕಚ್ಚುವುದರಿಂದ ನೋವಾಗುವುದಿಲ್ಲ ಮತ್ತು ಇವುಗಳ ಬಗ್ಗೆ ಜನರಿಗೆ ಮಾಹಿತಿ ನೀಡುತ್ತೇನೆ ಎಂದು ತನಗೆ ಹಾವು ಕಚ್ಚಿದ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದು, ಸದ್ಯ ಇದು ಭಾರಿ ಸದ್ದು ಮಾಡಿದೆ.
ವೀಡಿಯೊ ಮೂಲಕ ಮಾಹಿತಿ:
21ರ ಹರೆಯದ ಡೇವಿಡ್ ಓರಿನ್ ಹಂಫ್ಲೆಟ್ ಬರ್ಮೀನ್ ವೀಡಿಯೊ ಒಂದರಲ್ಲಿ ಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ನೀರಿಗೆ ಹಾರಿರುವುದನ್ನು ತೋರಿಸುತ್ತಾನೆ. ಮತ್ತೊಂದು ವೀಡಿಯೊದಲ್ಲಿ ಫ್ಲೋರಿಡಾದ ಗೇನ್ಸ್ವಿಲ್ಲೆಯ ಡೆಲಿವರಿ ಡ್ರೈವರ್ ಗಲ್ಫ್ ಸಾಲ್ಟ್ಮಾರ್ಷ್ ಹಾವು ಆತನ ತುಟಿಯನ್ನು ಕಚ್ಚಿ ರಕ್ತಸಿಕ್ತಗೊಳಿಸಿರುವ ದೃಶ್ಯಗಳನ್ನು ಸೆರೆ ಹಿಡಿದು, ಹಾವು ಕಚ್ಚುವಿಕೆಯಿಂದ ಎಷ್ಟು ನೋವಾಗುತ್ತದೆ ಎಂದು ತನ್ನ ವೀಡಿಯೊಗಳ ಮೂಲಕ ತೋರಿಸಿದ್ದಾನೆ.
ಹಾವು ಅಪಾಯಕಾರಿಯೇ?
ಡೇವಿಡ್ ಹಾವು ಕಚ್ಚುವುದರಿಂದ ಎಷ್ಟು ನೋವಾಗುತ್ತದೆ ಎಂದು ರೇಟಿಂಗ್ ಕೂಡ ಮಾಡಿದ್ದು, ಅದರ ಆಧಾರದ ಮೇಲೆ ಸರೀಸೃಪಗಳು ಅಷ್ಟೊಂದು ಅಪಾಯಕಾರಿ ಅಲ್ಲ ಎಂದು ಹೇಳಿದ್ದಾನೆ. ಹಾವು ಕಚ್ಚಿದ ನಂತರದಲ್ಲಿ ಡೇವಿಡ್ ಈ ಪ್ರಾಣಿಯು ದೊಡ್ಡ ಕೆಲಸ ಮಾಡಿದೆ ಎಂದು ಹೇಳಿದ್ದು, ಬಹಶಃ ಅದರ ತೀವ್ರತೆಯನ್ನು ನೋಡಿದಾಗ ಆತನಿಗೆ ಹೊಲಿಗೆಯ ಅವಶ್ಯಕತೆ ಇದೆ ಎಂಬುವುದು ತಿಳಿದು ಬಂದಿದೆ.
ಹಾವುಗಳೇ ಪ್ರೇರಣೆ:
ಪ್ರಾಣಿ ಪ್ರೇಮಿ ಡೇವಿಡ್ ಪ್ರಕಾರ ಹಾವು ದುರ್ಬಲ ದವಡೆ ಮತ್ತು ಕಡಿಮೆ ಒತ್ತಡದ ಕಚ್ಚುವಿಕೆಯಿಂದ ಕೂಡಿದ್ದು, ಹತ್ತರಲ್ಲಿ ಒಂದರಷ್ಟು ಮಾತ್ರ ಹಾವಿನ ಕಚ್ಚುವಿಕೆಯ ಅಪಾಯ ಇರುತ್ತದೆ. ಹಾವುಗಳೇ ನನ್ನ ಪ್ರೇರಣೆ ಅವುಗಳು ನಿಜವಾಗಿಯೂ ಅಪಾಯಕಾರಿಯಲ್ಲ. ಈ ಬಗ್ಗೆ ಜನರಿಗೂ ಕೂಡ ಹೆಚ್ಚು ಆಸಕ್ತಿ ಮತ್ತು ಉತ್ಸಾಹ ಇದೆ ಎಂದು ಡೇವಿಡ್ ಎಂದು ಹೇಳಿದ್ದಾನೆ.
ಡೇವಿಡ್ ತನ್ನನ್ನು ಪ್ರಸಿದ್ಧ ಪ್ರಾಣಿಶಾಸ್ತ್ರಜ್ಞ ಸ್ಟೀವ್ ಇರ್ವಿನ್ಗೆ ಹೋಲಿಸಿಕೊಂಡಿದ್ದು, ತಾನು ಮಾಡುವ ಪ್ರತಿಯೊಂದು ಹಾವು ಹಾಗೂ ಅವುಗಳು ಕಚ್ಚುವ ವೀಡಿಯೊವನ್ನು ಪ್ರೀತಿಸುತ್ತಾನೆ ಎಂದು ಹೇಳಿದನು. ಹಾವುಗಳ ಬಗ್ಗೆ ಜನರಲ್ಲಿ ಇರುವ ಆತಂಕವನ್ನು ದೂರ ಮಾಡುವುದೆ ನನ್ನ ಉದ್ದೇಶ. ಐದು ವರ್ಷಗಳಿಂದ ಈ ಕೆಲಸದಲ್ಲಿ ಇದ್ದು ಹಾವು ಹಿಡಿಯುವ ನನ್ನ ಕೌಶಲ್ಯವನ್ನು ಎಲ್ಲರೂ ಗೌರವಿಸಿದ್ದಾರೆ ಎಂದು ಡೇವಿಡ್ ಹೇಳಿದನು.
Published On - 12:12 pm, Sat, 5 December 20