AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಬ್ಬಾವು, ನಾಗರಹಾವಿಗೆ ಬೌದ್ಧ ಸನ್ಯಾಸಿ ಆಶ್ರಯ

ಇಲ್ಲೋರ್ವರು ಹೆಬ್ಬಾವಿನ ಜೊತೆ ಸ್ನೇಹ ಬೆಳಿಸಿಕೊಂಡು ಅವುಗಳಿಗೂ ಮನೆಯಲ್ಲಿ ಆಶ್ರಯ ನೀಡುತ್ತಿದ್ದಾರೆ. ಇವರ ಹೆಸರು ವಿಲಥಾ. ಮಯನ್ಮಾರ್​ನ ಯಾಂಗೊನ್​ ಹೊರವಲಯದಲ್ಲಿ ಸೀಕ್ತಾ ತುಖಾ ಟೆಟೊ ಎಂಬ ಮಠವನ್ನು ಹೊಂದಿದ್ದಾರೆ.

ಹೆಬ್ಬಾವು, ನಾಗರಹಾವಿಗೆ ಬೌದ್ಧ ಸನ್ಯಾಸಿ ಆಶ್ರಯ
ಹೆಬ್ಬಾವು ರಕ್ಷಿಸುತ್ತಿರುವ ಬೌದ್ಧ ಸನ್ಯಾಸಿ
shruti hegde
| Edited By: |

Updated on:Dec 04, 2020 | 7:14 PM

Share

ಅಬ್ಬಬ್ಬಾ, ಹಾವು ಎಂದರೆ ಯಾರಿಗೆ ಭಯ ಇಲ್ಲ ಹೇಳಿ? ಹಾವು ಕಂಡರೆ ಜನರು ಮಾರುದ್ದ ಓಡುತ್ತಾರೆ. ಆದರೆ ಇಲ್ಲೋರ್ವರು ಹೆಬ್ಬಾವಿನ ಜೊತೆ ಸ್ನೇಹ ಬೆಳಿಸಿಕೊಂಡು ಅವುಗಳಿಗೂ ಮನೆಯಲ್ಲಿ ಆಶ್ರಯ ನೀಡುತ್ತಿದ್ದಾರೆ. ಕುತೂಹಲ ಮೂಡಿಸುತ್ತಿದೆ ಅಲ್ವೇ.. ನೋಡೋಣ ಬನ್ನಿ ಇವರ ಫುಲ್ ಹಿಸ್ಟರಿ..

ಯಾರು ಇವರು? ಇವರು 69 ವರ್ಷದ ಬೌದ್ಧ ಸನ್ಯಾಸಿ. ಇವರ ಹೆಸರು ವಿಲಥಾ. ಮಯನ್ಮಾರ್​ನ ಯಾಂಗೊನ್​ ಹೊರವಲಯದಲ್ಲಿ ಸೀಕ್ತಾ ತುಖಾ ಟೆಟೊ ಹೆಸರಿನ ಮಠವನ್ನು ಹೊಂದಿದ್ದಾರೆ.

ಹಾವುಗಳಿಗೆ ಆಶ್ರಯವೆಲ್ಲಿ? ಸೀಕ್ತಾ ತುಖಾ ಟೆಟೊ ಮಠದಲ್ಲಿ ಹೆಬ್ಬಾವು ಮತ್ತು ನಾಗರಹಾವುಗಳಿಗೆ ಆಶ್ರಯ ನೀಡುತ್ತಿದ್ದಾರೆ. ಅವುಗಳಿಗೆ ಆಹಾರ ಜೊತೆ ಆರೈಕೆ ಮಾಡುತ್ತಾರೆ. ಮಠವೀಗ ಯಾಂಗೊನ್ ಹೊರವಲಯದಲ್ಲಿರುವ ಅಭಯಾರಣ್ಯವಾಗಿ ಮಾರ್ಪಟ್ಟಿದೆ. ಐದು ವರ್ಷಗಳಿಂದ ಹಾವುಗಳಿಗೆ ಆಶ್ರಯ ನೀಡುವ ಕಾಯಕ ಆರಂಭವಾಗಿದೆ. ನಿವಾಸಿಗಳು ಮತ್ತು ಅಗ್ನಿಶಾಮಕ ಇಲಾಖೆ ಸೇರಿದಂತೆ ಸರ್ಕಾರಿ ಸಂಸ್ಥೆಗಳ ಸದಸ್ಯರು ತಾವು ಸೆರೆಹಿಡಿದ ಹಾವುಗಳನ್ನು ಸನ್ಯಾಸಿಗೆ ತಂದು ಕೊಡುತ್ತಿದ್ದಾರೆ.

ಮಯನ್ಮಾರ್​ ಜನರು ಹಾವುಗಳನ್ನು ಕೊಲ್ಲುವುದು ಅಥವಾ ಮಾರಾಟ ಮಾಡುವುದರಲ್ಲಿ ತೊಡಗುತ್ತಾರೆ. ಅದರ ಬದಲು ಜನರು ನನಗೆ ಹಾವುಗಳನ್ನು ನೀಡುವುದರಿಂದ ಅವುಗಳನ್ನು ರಕ್ಷಿಸುತ್ತೇನೆ. ನನ್ನ ಮಕ್ಕಳು ಕಾವಿ ವಸ್ತ್ರದಲ್ಲಿ ಹಾವುಗಳ ಮೈ ಸವರಿ ಆರೈಕೆ ಮಾಡುತ್ತಾರೆ. ಪರಿಸರವನ್ನು ರಕ್ಷಿಸುವ ಉದ್ದೇಶ ನನ್ನದು ಎನ್ನುತ್ತಾರೆ ವಿಲಥಾ.

Published On - 7:03 pm, Fri, 4 December 20

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು