ಪ್ರೇಯಸಿಯನ್ನು ಅರೆಬೆತ್ತಲೆಯಾಗಿ ಚಳಿಯಲ್ಲಿ ನಿಲ್ಲಿಸಿ, ಕೊಂದ ಯುವಕ! ಅದೆಲ್ಲ ಯೂಟ್ಯೂಬ್ ಲೈವ್ನಲ್ಲಿ ಪ್ರಸಾರವಾಯ್ತು ..
ತಕ್ಷಣ ಆತ ವೈದ್ಯರಿಗೆ ಕರೆ ಮಾಡಿದ್ದಾನೆ. ವೈದ್ಯರು ಬಂದು ಪರೀಕ್ಷೆ ನಡೆಸಿದಾಗ ಆಕೆ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಇದೆಲ್ಲ ನಡೆಯುವಾಗ ಲೈವ್ ವಿಡಿಯೋ ಪ್ರಸಾರವಾಗುತ್ತಲೇ ಇತ್ತು.
ಆತ ಯೂಟ್ಯೂಬ್ ಚಾನೆಲ್ ಒಂದನ್ನು ಹೊಂದಿದ್ದ. ಸಿಕ್ಕಿ ಸಿಕ್ಕಿದ್ದನ್ನೆಲ್ಲ ವಿಡಿಯೋ ಮಾಡಿ ಹಾಕುತ್ತಿದ್ದ. ಆತನ ವಿಡಿಯೋಗಳಿಗೆ ಹೆಚ್ಚು ವ್ಯೂಸ್ ಬರುತ್ತಿದ್ದರಿಂದ ಸಾಕಷ್ಟು ಹಣ ಕೂಡ ಮಾಡುತ್ತಿದ್ದ. ಆದರೆ, ಬರಬರುತ್ತಾ ಹಣದ ಮದ ಈತನ ತಲೆಗೇರಿತ್ತು. ಹಣದ ಹುಚ್ಚಿಗೆ ಈತ ಇದೀಗ ಗರ್ಲ್ಫ್ರೆಂಡ್ ಪ್ರಾಣವನ್ನೇ ತೆಗೆದು ಬಿಟ್ಟಿದ್ದಾನೆ. ಸದ್ಯ ಈತ ಪೊಲೀಸರ ಅತಿಥಿ ಆಗಿದ್ದಾನೆ.
30 ವರ್ಷದ ಸ್ಟಾಸ್ ರೀಫ್ಲೆ ಬಂಧಿತ ವ್ಯಕ್ತಿ. 28 ವರ್ಷದ ವ್ಯಾಲೆಂಟಿನಾ ಗ್ರಿಗೋರಿವಾ ಈತನ ಪ್ರೇಯಸಿ. ಆಕೆ ಗರ್ಭಿಣಿ ಕೂಡ ಹೌದು. ಸಾಮಾಜಿಕ ಜಾಲತಾಣದಲ್ಲಿ ವ್ಯಾಲೆಂಟಿನಾ ಗ್ರಿಗೋರಿವಾ ಫೋಟೋವನ್ನು ನೋಡಿದ್ದ ವ್ಯಕ್ತಿಯೋರ್ವ ಆಕೆಯನ್ನು ಮೈನಸ್ ಡಿಗ್ರಿ ತಾಪಮಾನವಿರುವ ಕೋಣೆಯಲ್ಲಿ ನಿಲ್ಲಿಸಿ ಲೈವ್ ವಿಡಿಯೋ ಮಾಡಿದರೆ 70 ಸಾವಿರ ರೂಪಾಯಿ ನೀಡುವುದಾಗಿ ಆಕೆಯ ಪ್ರಿಯಕರ ಯೂಟ್ಯೂಬರ್ ಸ್ಟಾಸ್ ರೀಫ್ಲೆಗೆ ಆಮಿಷ ಒಡ್ಡಿದ್ದ. ಅಷ್ಟೇ ಅಲ್ಲ, ಆಕೆ ಒಳ ಉಡುಪು ಮಾತ್ರ ಹಾಕಿರಬೇಕು ಎನ್ನುವ ಷರತ್ತನ್ನೂ ಹಾಕಿದ್ದ.
ಇದಕ್ಕೆ ಒಪ್ಪಿದ್ದ ಸ್ಟಾಸ್ ರೀಫ್ಲೆ, ಗರ್ಲ್ಫ್ರೆಂಡ್ ಬಳಿ ಈ ಮನವಿ ಇಟ್ಟಿದ್ದ. ಆದ್ರೆ ಆಕೆ ಇಂತಹ ಅಮಾನುಷ ಕೃತ್ಯಕ್ಕೆ ಸುತರಾಂ ಒಪ್ಪುವುದಿಲ್ಲ. ಆದರೂ ಆಕೆಯನ್ನು ಕೇವಲ ಒಳ ಉಡುಪಿನಲ್ಲಿ ಮೈನಸ್ ಡಿಗ್ರಿ ತಾಪಮಾನದ ಕೋಣೆಯೊಳಗೆ ನಿಲ್ಲಿಸಿದ್ದ. ಮೈ ಕೊರೆಯುವ ಚಳಿಗೆ ಆಕೆ ನಡುಗಿ ಹೋಗಿದ್ದಳು. ದೀರ್ಘ ಕಾಲ ಚಳಿಯಲ್ಲೇ ಇದ್ದಿದ್ದರಿಂದ ಆಕೆ ಅಲ್ಲಿಯೇ ಕುಸಿದು ಬಿದ್ದಿದ್ದಾಳೆ.
ವ್ಯಾಲೆಂಟಿನಾ ಬಿದ್ದಿದ್ದನ್ನು ನೋಡಿದ ಸ್ಟಾಸ್ ರೀಫ್ಲೆ ಆಕೆಯನ್ನು ಕೋಣೆಯಿಂದ ಹೊರಗೆ ತಂದಿದ್ದಾನೆ. ಈ ವೇಳೆ ಎದ್ದೇಳು, ಎದ್ದೇಳು ಎಂದು ಗೋಳಾಡಿದ್ದಾನೆ. ಆದರೆ, ಆಕೆ ಪ್ರತಿಕ್ರಿಯಿಸಿಲ್ಲ. ತಕ್ಷಣ ಆತ ವೈದ್ಯರಿಗೆ ಕರೆ ಮಾಡಿದ್ದಾನೆ. ವೈದ್ಯರು ಬಂದು ಪರೀಕ್ಷೆ ನಡೆಸಿದಾಗ ಆಕೆ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಇದೆಲ್ಲ ನಡೆಯುವಾಗ ಲೈವ್ ವಿಡಿಯೋ ಪ್ರಸಾರವಾಗುತ್ತಲೇ ಇತ್ತು. ನಂತರ ಪೊಲೀಸರು ಆತನನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.
ವಿಡಿಯೊಗಳಿಗೆ ಕಾಮೆಂಟ್ ಮಾಡುವ ಮುನ್ನ ಮರುಚಿಂತನೆಗೆ ಅವಕಾಶ ನೀಡಲಿದೆ ಯೂಟ್ಯೂಬ್
Published On - 3:48 pm, Sat, 5 December 20