ರಾಹುಲ್ ಗಾಂಧಿ ಬಗ್ಗೆ ಮಾತಾಡುತ್ತಿದ್ದ ಸಿಟಿ ರವಿ ಮಹಿಳೆಯೊಬ್ಬರು ಮಧ್ಯಪ್ರವೇಶಿಸಿದಾಗ ನಿರುತ್ತರರಾದರು!
ಸಿಟಿ ರವಿ ಅವರಿಗೆ ಹಾಗೆ ಮಾತಾಡುವ ಅವಶ್ಯಕತೆ ಇರಲಿಲ್ಲ. ಮಹಿಳೆ ಕೇಳಿದ ಪ್ರಶ್ನೆಗೆ ಸಮಾಧಾನಚಿತ್ತದಿಂದ ಉತ್ತರಿಸಿದರೂ ನಡೆಯುತಿತ್ತು. ಆದರೆ ಅವರು ಹಾಗೆ ಮಾಡದೆ ಅನಪೇಕ್ಷಣೀಯ ಮಾತನ್ನಾಡುತ್ತಾರೆ, ‘ನಿಮಗೆಲ್ಲೋ ಹುಚ್ಚು’ ಅಂತ ಹೇಳಿದರೆ ಯಾವ ಮಹಿಳೆ ತಾನೇ ಸಹಿಸಿಕೊಂಡಾಳು? ರವಿ ಮಾತಿನಿಂದ ಧೃತಿಗೆಡದ ಮಹಿಳೆ ಬಿಜೆಪಿ ನಾಯಕ ಹೋದ ಕಡೆಯೇ ಹೋಗುತ್ತಾರೆ!
ಬೆಂಗಳೂರು, ಆಗಸ್ಟ್ 11: ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಇಂದು ವಿಧಾನಸಭಾ ಲಾಂಜ್ನಲ್ಲಿ ಮಾಧ್ಯಮಗಳ ಜೊತೆ ಮಾತಾಡುತ್ತಾ ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡುತ್ತಿದ್ದಾಗ ಅಲ್ಲಿದ್ದ ಮಹಿಳೆಯೊಬ್ಬರು ವಾದಕ್ಕಿಳಿಯುತ್ತಾರೆ (woman’s argument). ಅದು ಹೇಗೆ ನೀವು ರಾಹುಲ್ ಗಾಂಧಿ ತಪ್ಪು ನೀವು ಸರಿ ಅಂತ ಹೇಳುತ್ತೀರಿ? ನಿಮಗೆ ಹಾಗೆ ಹೇಳಲು ಪ್ರೇರೇಪಣೆ ನೀಡುವ ಅಂಶವಾದರೂ ಯಾವುದು ಅಂತ ಕೇಳುತ್ತಾರೆ. ಮಹಿಳೆಯ ಅನಿರೀಕ್ಷಿತ ದಾಳಿಯಿಂದ ತಬ್ಬಿಬ್ಬಾಗುವ ರವಿ ಸಾವರಿಸಿಕೊಳ್ಳಲು ಕೊಂಚ ಸಮಯ ತೆಗೆದುಕೊಳ್ಳುತ್ತಾರೆ. ಮಹಿಳೆ ಇಂಗ್ಲೀಷ್ ನಲ್ಲಿ ಮಾತಾಡುತ್ತಾರೆ, ರವಿಗೆ ಭಾಷೆ ಬರಲ್ಲ ಅಂತೇನೂ ಇಲ್ಲ. ಆದರೆ ಕೊನೆಗೆ ಏನನ್ನೂ ಹೇಳಲಾಗದೆ, ‘ಪಾಗಲ್ ಹೋ’ ಅಂದುಬಿಟ್ಟು ಅಲ್ಲಿಂದ ಹೊರಡುತ್ತಾರೆ. ಅವರ ಮಾತಿನಿಂದ ಕೆರಳುವ ಮಹಿಳೆ, ‘ತುಮ್ ಲೋಗ್ ಪಾಗಲ್ ಹೋ’ ಅನ್ನುತ್ತಾರೆ!
ಇದನ್ನೂ ಓದಿ: ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅರೋಪ ಮಾಡುತ್ತಿರುವ ರಾಹುಲ್ ಗಾಂಧಿಗೆ ಚಿಕಿತ್ಸೆಯ ಅಗತ್ಯವಿದೆ: ಸಿಟಿ ರವಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

