ಊರು ಮೇಲೆ ಊರು ಬಿದ್ರೂ ನವಜೋಡಿ ಡೋಂಟ್ ಕೇರ್: ಬಂದ್ ಮಧ್ಯೆ ಮಸ್ತ್ ವೆಡ್ಡಿಂಗ್ ಫೋಟೋಶೂಟ್
ಕರ್ನಾಟಕ ಬಂದ್ನ ಬಿಸಿ ನಗರದಲ್ಲಿ ತುಸು ಹೆಚ್ಚಾಗಿ ಇದ್ದರೂ ಇದೆಲ್ಲಾ ಪ್ರತಿಭಟನೆ ನಡುವೆ ನವ ಜೋಡಿಯಿಂದ ಮಸ್ತ್ ಮಸ್ತ್ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿ ಅರಮನೆ ನಗರಿಯಲ್ಲಿ ಎಲ್ಲರ ಗಮನ ಸೆಳೆದಿದೆ.
ಮೈಸೂರು: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ವಿರೋಧಿಸಿ ಕನ್ನಡಿಗರು ರಣಕಹಳೆ ಮೊಳಗಿಸಿದ್ದಾರೆ. ವಿವಿಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆಗೆ ಇಳಿದು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಸರ್ಕಾರದ ವಿರುದ್ಧ ಕೆಂಡಕಾರುತ್ತಿದ್ದಾರೆ.
ಆದರೆ ಇತ್ತ, ಧರಣಿಯ ಕಾವಿನಲ್ಲಿ ಊರು ಮೇಲೆ ಊರು ಬಿದ್ದರೂ ಈ ನವಜೋಡಿ ಮಾತ್ರ ಡೋಂಟ್ ಕೇರ್! ಹೌದು, ಕರ್ನಾಟಕ ಬಂದ್ನ ಬಿಸಿ ನಗರದಲ್ಲಿ ತುಸು ಹೆಚ್ಚಾಗಿ ಇದ್ದರೂ ಇದೆಲ್ಲಾ ಪ್ರತಿಭಟನೆ ನಡುವೆ ನವ ಜೋಡಿಯಿಂದ ಮಸ್ತ್ ಮಸ್ತ್ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿ ಅರಮನೆ ನಗರಿಯಲ್ಲಿ ಎಲ್ಲರ ಗಮನ ಸೆಳೆದಿದೆ.
ಬಂದ್ ಮರೆತು ಫೋಟೋಶೂಟ್ನಲ್ಲಿ ಮಗ್ನರಾದ ನವ ಜೋಡಿ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂದೆ ಬಿಂದಾಸ್ ಆಗಿ ಪೋಸ್ ಕೊಟ್ಟರು. ಅಂದ ಹಾಗೆ, ಮೂರಕ್ಕೂ ಹೆಚ್ಚು ಜೋಡಿಗಳಿಂದ ಫೋಟೋಶೂಟ್ ನಡೆಯಿತು.
Published On - 10:30 am, Sat, 5 December 20