ಟೌನ್ ಹಾಲ್ ಆಯ್ತು ಪ್ರತಿಭಟನೆಯ ಪವರ್ ಸೆಂಟರ್: ಒಬ್ಬರು ಅರೆಸ್ಟ್ ಆಗ್ತಿದಂತೆ ಮತ್ತೊಂದು ಗುಂಪು ಧರಣಿಗೆ ರೆಡಿ
ನಗರದ ಟೌನ್ ಹಾಲ್ ಮುಂಭಾಗ ಕರ್ನಾಟಕ ಬಂದ್ ಪ್ರತಿಭಟನೆಯ ಪವರ್ ಸೆಂಟರ್ ಆಗಿ ಮಾರ್ಪಟ್ಟಿದೆ. ಮರಾಠ ಅಭಿವೃದ್ಧಿ ನಿಗಮದ ವಿರುದ್ಧ ಕನ್ನಡಿಗರು ರಣಕಹಳೆ ಮೊಳಗಿಸಿದ್ದು ಪ್ರತಿಭಟನೆಯ ಕಾವು ಕೊಂಚ ತಗ್ಗಿದ್ದರೂ ಅದರ ಕಿಚ್ಚು ಇನ್ನೂ ಸಂಪೂರ್ಣವಾಗಿ ಆರಿಹೋಗಿಲ್ಲ.
ಬೆಂಗಳೂರು: ನಗರದ ಟೌನ್ ಹಾಲ್ ಮುಂಭಾಗ ಕರ್ನಾಟಕ ಬಂದ್ ಪ್ರತಿಭಟನೆಯ ಪವರ್ ಸೆಂಟರ್ ಆಗಿ ಮಾರ್ಪಟ್ಟಿದೆ. ಮರಾಠ ಅಭಿವೃದ್ಧಿ ನಿಗಮದ ವಿರುದ್ಧ ಕನ್ನಡಿಗರು ರಣಕಹಳೆ ಮೊಳಗಿಸಿದ್ದು ಪ್ರತಿಭಟನೆಯ ಕಾವು ಕೊಂಚ ತಗ್ಗಿದ್ದರೂ ಅದರ ಕಿಚ್ಚು ಇನ್ನೂ ಸಂಪೂರ್ಣವಾಗಿ ಆರಿಹೋಗಿಲ್ಲ. ಇತ್ತ, ಪ್ರತಿಭಟನಾಕಾರರ ಒಂದು ಗುಂಪನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಟೌನ್‌ಹಾಲ್ ಬಳಿ ಮತ್ತೊಂದು ಸಂಘಟನೆಯ ಪ್ರತಿಭಟನಾಕಾರರು ಜಮಾಯಿಸಿದರು.
ಒಂದು ಸಂಘಟನೆಯ ಹೋರಾಟಗಾರರ ಬಂಧನ ಬೆನ್ನಲ್ಲೇ ಮತ್ತೊಂದು ಸಂಘಟನೆಯ ಹೋರಾಟಗಾರರು ಟೌನ್ಹಾಲ್ನತ್ತ ಬಂದಿಳಿದರು. ಟೌನ್ಹಾಲ್ನತ್ತ ಆಗಮಿಸಿದ ಮತ್ತೊಂದು ಗುಂಪು ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು. ಇದನ್ನು ಗಮನಿಸಿದ ಖಾಕಿ ಪಡೆ ಕೂಡಲೇ ಕಾರ್ಯಪ್ರವೃತರಾಗಿ ಧರಣಿನಿರತರನ್ನು ಬಂಧಿಸಿದರು.
ಇತ್ತ, ಸಮುದ್ರದ ಅಲೆಗಳಂತೆ ಟೌನ್‌ಹಾಲ್ ಬಳಿ ಮತ್ತೊಂದು ಪ್ರತಿಭಟನಾ ತಂಡ ಆಗಮಿಸಿತು. ಲಾರಿಯ ಮೇಲೆ ಕೂತು ಘೋಷಣೆ ಕೂಗುತ್ತಾ ಬಂದ ಮೂರನೇ ಗುಂಪು ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ಇದೀಗ, ಧರಣಿನಿರತ 3ನೇ ತಂಡವನ್ನು ಪೊಲೀಸರು ವಶಕ್ಕೆ ಪಡೆದರು.
Published On - 9:36 am, Sat, 5 December 20