AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆ ಬದಿ ನಿಂತಿದ್ದವರ ಮೇಲೆ ಕಾರು ಹತ್ತಿಸಿದ ವಿನಯ್​ ಕುಲಕರ್ಣಿ ಸೋದರ ವಿಜಯ್; ಇಬ್ಬರ ದುರ್ಮರಣ, ಐವರಿಗೆ ಗಾಯ

ಬೆಳಗಾವಿಯಿಂದ ಧಾರವಾಡದ ಕಡೆಗೆ ಬರುವಾಗ ಈ ಅಪಘಾತ ನಡೆದಿದೆ. ಕಾರು ಡಿಕ್ಕಿಯಿಂದಾಗಿ ಕೆಲವು ಬೈಕ್​ಗಳು ಕೂಡ ಜಖಂ ಆಗಿದ್ದು, ಧಾರವಾಡ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಬದಿ ನಿಂತಿದ್ದವರ ಮೇಲೆ ಕಾರು ಹತ್ತಿಸಿದ ವಿನಯ್​ ಕುಲಕರ್ಣಿ ಸೋದರ ವಿಜಯ್; ಇಬ್ಬರ ದುರ್ಮರಣ, ಐವರಿಗೆ ಗಾಯ
ರಸ್ತೆ ಬದಿ ನಿಂತಿದ್ದವರಿಗೆ ವಿಜಯ್ ಕುಲಕರ್ಣಿ ಕಾರು ಡಿಕ್ಕಿ
preethi shettigar
|

Updated on:Apr 12, 2021 | 5:33 PM

Share

ಧಾರವಾಡ: ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸಹೋದರ, ಕಾಂಗ್ರೆಸ್ ಮುಖಂಡ ವಿಜಯ್ ಕುಲಕರ್ಣಿ ಅವರ ಕಾರು ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿದೆ. ವಿಜಯ್ ಕುಲಕರ್ಣಿ ಪ್ರಯಾಣಿಸುತ್ತಿದ್ದ ಕಾರು ರಸ್ತೆ ಬಳಿ ನಿಂತಿದ್ದವರ ಮೇಲೆ ಹರಿದ ಘಟನೆ ಧಾರವಾಡ ಕೆವಿಜಿ ಬ್ಯಾಂಕ್ ಎದುರು ನಡೆದಿದೆ. ಈ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, 6 ಜನರು ಗಾಯಗೊಂಡಿದ್ದಾರೆ. ಇನ್ನೋರ್ವರ ಸ್ಥಿತಿ ಗಂಭೀರವಾಗಿದೆ. ವಿಜಯ್ ಕುಲಕರ್ಣಿ ಕಾರಿಗೆ ಸ್ಥಳೀಯರು ಮುತ್ತಿಗೆ ಹಾಕಿದ್ದಾರೆ. ಜನರು ಮುತ್ತಿಗೆ ಹಾಕುತ್ತಿದ್ದಂತೆ ವಿಜಯ್ ಕುಲಕರ್ಣಿ ಮತ್ತೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ.

ಬೆಳಗಾವಿಯಿಂದ ಧಾರವಾಡದ ಕಡೆಗೆ ಬರುವಾಗ ಈ ಅಪಘಾತ ನಡೆದಿದೆ. ಕಾರು ಡಿಕ್ಕಿಯಿಂದಾಗಿ ಕೆಲವು ಬೈಕ್​ಗಳು ಕೂಡ ಜಖಂ ಆಗಿದ್ದು, ಧಾರವಾಡ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದಲ್ಲಿ ಶೇಖರ ಹುದ್ದಾರ್(37), ಚರಣ್ ನಾಯ್ಕ್(17) ಎಂಬಿಬ್ಬರು ಮೃತಪಟ್ಟಿದ್ದಾರೆ.

car accident vijay kulkarni

ವಿಜಯ್ ಕುಲಕರ್ಣಿ

ಇದನ್ನೂ ಓದಿ:

Tamil Nadu: ಧಾರಾಪುರಂನಲ್ಲಿ ಕಾರು ಅಪಘಾತ; ತಮಿಳುನಾಡು ವಿಧಾನಸಭೆಯ ಸ್ಪೀಕರ್ ಪಿ.ಧನಪಾಲ್​ಗೆ ಗಾಯ

ಬಾಗಲಕೋಟೆ: ಗೆಳೆಯನ ಹುಟ್ಟುಹಬ್ಬ ಆಚರಿಸಿ ವಾಪಸ್​ ಬರುವಾಗ ರಸ್ತೆ ಅಪಘಾತ; ನಾಲ್ವರ ದುರ್ಮರಣ

(Former Minister Vinay Kulkarni brother Vijay Kulkarni car accident one man died 5 people injury in Dharwad)

Published On - 5:22 pm, Mon, 12 April 21