10 ಕೋಟಿ ಮಾನನಷ್ಟ ಪ್ರಕರಣದಲ್ಲಿ H.D.ದೇವೇಗೌಡರಿಗೆ ಹಿನ್ನಡೆ: ಜೆಡಿಎಸ್​ ವರಿಷ್ಠ ಸಲ್ಲಿಸಿದ್ದ ರಿಟ್ ಅರ್ಜಿ ವಜಾ

|

Updated on: Jan 17, 2021 | 9:39 PM

ಪ್ರತಿವಾದಿ ಸಾಕ್ಷ್ಯ ವಿಚಾರಣೆಗೆ ಅವಕಾಶ ಕೋರಿ ದೇವೇಗೌಡರು ಹೈಕೋರ್ಟ್​ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಇವರ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ.

10 ಕೋಟಿ ಮಾನನಷ್ಟ ಪ್ರಕರಣದಲ್ಲಿ H.D.ದೇವೇಗೌಡರಿಗೆ ಹಿನ್ನಡೆ: ಜೆಡಿಎಸ್​ ವರಿಷ್ಠ ಸಲ್ಲಿಸಿದ್ದ ರಿಟ್ ಅರ್ಜಿ ವಜಾ
ಹೆಚ್.ಡಿ.ದೇವೇಗೌಡ
Follow us on

ಬೆಂಗಳೂರು: ಮಾನನಷ್ಟ ಪ್ರಕರಣ ಒಂದರಲ್ಲಿ ಜೆಡಿಎಸ್​ ವರಿಷ್ಠ ಹೆಚ್.ಡಿ.ದೇವೇಗೌಡರಿಗೆ ಹಿನ್ನಡೆಯಾಗಿದೆ.

ಏನಿದು ಪ್ರಕರಣ?
2012ರಲ್ಲಿ ಹೆಚ್.ಡಿ.ದೇವೇಗೌಡರ ವಿರುದ್ಧ ನೈಸ್ ಸಂಸ್ಥೆ ವಿಚಾರಣಾ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ನೈಸ್ ವಿರುದ್ಧ ದೇವೇಗೌಡರ ಆರೋಪದ ಹಿನ್ನೆಲೆಯಲ್ಲಿ ಸಂಸ್ಥೆ ದಾವೆ ಹೂಡಿತ್ತು. ಜೊತೆಗೆ, ಸಂಸ್ಥೆ 10 ಕೋಟಿ ರೂಪಾಯಿ ಮಾನನಷ್ಟ ಪರಿಹಾರ ಸಹ ಕೋರಿತ್ತು.

ಆರೋಪ ಸಮರ್ಥನೆಗೆ ಸಾಕ್ಷ್ಯ ಒದಗಿಸಲು ಕೋರ್ಟ್​ ಅವಕಾಶ ನೀಡಿತ್ತು. ಹಲವು ಅವಕಾಶ ನೀಡಿದ್ರೂ ಸಾಕ್ಷ್ಯ ವಿಚಾರಣೆ ನಡೆಸದ ಹಿನ್ನೆಲೆಯಲ್ಲಿ H.D.ದೇವೇಗೌಡರ ಸಾಕ್ಷ್ಯವನ್ನು ಮುಕ್ತಾಯಗೊಳಿಸಲಾಗಿತ್ತು.

ಹೀಗಾಗಿ, ಪ್ರತಿವಾದಿ ಸಾಕ್ಷ್ಯ ವಿಚಾರಣೆಗೆ ಅವಕಾಶ ಕೋರಿ ದೇವೇಗೌಡರು ಹೈಕೋರ್ಟ್​ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಇವರ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ. ರಿಟ್ ಅರ್ಜಿ ವಜಾಗೊಳಿಸಿ ನ್ಯಾ.ಕೃಷ್ಣ ಎಸ್.ದೀಕ್ಷಿತ್ ತೀರ್ಪು ನೀಡಿದೆ. ಇದಲ್ಲದೆ, 9 ತಿಂಗಳಲ್ಲಿ ಪ್ರಕರಣ ಇತ್ಯರ್ಥ ಪಡಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆ ಸಹ ನೀಡಿದೆ.

ನಾನು ಗೆದ್ದು ದೆಹಲಿಗೆ ಹೋಗಿ ಮೆರೆಯಬೇಕಿರಲಿಲ್ಲ -ಮಂಡ್ಯ ಸೋಲನ್ನು ಮರೆಯದ ನಿಖಿಲ್ ಕುಮಾರಸ್ವಾಮಿ