IT ಕಂಪನಿಗಳಿಗೆ ಕಾಫಿ, ಟೀ, ತಿಂಡಿ ಸಪ್ಲೈ ಹೆಸರಲ್ಲಿ ಮೋಸ ಆರೋಪ.. ಯುವತಿ ಪೊಲೀಸರ ವಶಕ್ಕೆ

|

Updated on: Jan 04, 2021 | 8:44 AM

ಐಟಿ ಕಂಪನಿಗಳಿಗೆ ಆಹಾರ ಸರಬರಾಜು ಮಾಡುತ್ತೇನೆ ಎಂದು ನಂಬಿಸಿ, ಡೆಪಾಸಿಟ್ ಹೆಸರಿನಲ್ಲಿ ಲಕ್ಷಾಂತರ ಹಣ ಪಡೆದು ಮೋಸ ಮಾಡಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

IT ಕಂಪನಿಗಳಿಗೆ ಕಾಫಿ, ಟೀ, ತಿಂಡಿ ಸಪ್ಲೈ ಹೆಸರಲ್ಲಿ ಮೋಸ ಆರೋಪ.. ಯುವತಿ ಪೊಲೀಸರ ವಶಕ್ಕೆ
ಆರೋಪಿ ನಂದಿನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ
Follow us on

ಬೆಂಗಳೂರು: ಲಾಕ್​ಡೌನ್ ಸಮಯದಲ್ಲಿ ಐಟಿ ಕಂಪನಿಗಳಿಗೆ ಆಹಾರ ಸರಬರಾಜು ಮಾಡುವುದಾಗಿ ಉದ್ಯೋಗಸ್ಥರಿಗೆ ನಂಬಿಸಿ ಮೋಸ ಮಾಡಿರುವ ಹಿನ್ನೆಲೆಯಲ್ಲಿ  ನಂದಿನಿ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತೆ ನಂದಿನಿ, ಐಟಿ ಕಂಪನಿಗಳಿಗೆ ಕಾಫಿ, ಟೀ ಹಾಗೂ ಊಟದ ಸರಬರಾಜು ಮಾಡುತ್ತೇನೆ ಎಂದು ನಂಬಿಸಿದ್ದಳು. ಡೆಪಾಸಿಟ್ ನೆಪದಲ್ಲಿ ಲಕ್ಷಾಂತರ ಹಣ ಪಡೆದಿದ್ದಳು. ಹಣವನ್ನೂ ಕೊಡದೆ ಊಟ ಸರಬರಾಜು ಸಹ ಮಾಡದೇ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ ಎಂದು ಆರೋಪಿಸಲಾಗಿದೆ.

ಅಲ್ಲದೇ, ಕೆಂಪಾಪುರ ವ್ಯಾಪ್ತಿಯ ಅನೇಕರಿಗೆ ಕಾಯಂ ಉದ್ಯೋಗ ನೀಡುವುದಾಗಿ ಹೇಳಿ  1.5 ಲಕ್ಷ ರೂಪಾಯಿ ಮುಂಗಣ ಹಣ ನೀಡುವಂತೆ ಹೇಳಿ ವಂಚಿಸಿದ್ದಾಳೆ. ಹಣ ನೀಡಿ ಜನರು ಕೆಲಸ ಮಾಡುತ್ತಿದ್ದರು. ಮೊದ ಮೊದಲು ಉದ್ಯೋಗಿಗಳಿಗೆ ಹಣ ಪಾವತಿಸಿದ್ದು, ನಂತರದ ದಿನಗಳಲ್ಲಿ ಹಣ ನೀಡದೇ ತಪ್ಪಿಸಿಕೊಳ್ಳುತ್ತಿದ್ದಾಳೆ ಎಂಬ ಆರೋಪ ಹಿನ್ನೆಲೆಯಲ್ಲಿ ನಂದಿನಿ ವಿರುದ್ಧ ದೂರು ದಾಖಲಾಗಿದೆ.

ಸದ್ಯ ಅಮೃತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಿಸಿದ್ದು, ಮೋಸ ಹೋದ ಉದ್ಯೋಗಸ್ಥರು ಆರೋಪಿ ನಂದಿನಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಹಾಮೋಸ: ಹಣ ದುಪ್ಪಟಾಗೋ ಆಸೆಗೆ ಬಿದ್ದು ₹16 ಲಕ್ಷ ಕಳ್ಕೊಂಡ.. ಮತ್ತೊಂದು ಕಡೆ ಮಹಿಳೆಗೆ ಸ್ವಂತ ಮೈದುನನಿಂದಲೇ ಮೋಸ

Published On - 8:10 am, Mon, 4 January 21