ಆಸ್ಪತ್ರೆಗೆ ತೆರಳುವ ರೋಗಿಗಳಿಗೆ ಉಚಿತ ಬಸ್ ಸೇವೆ..

ರಾಜ್ಯದಾದ್ಯಂತ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದ್ದು, ಹುಬ್ಬಳ್ಳಿಯಲ್ಲಿ ಪ್ರಯಾಣಿಕರಿಂದ ಆಟೋ ಚಾಲಕರು ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದಾರೆ.

ಆಸ್ಪತ್ರೆಗೆ ತೆರಳುವ ರೋಗಿಗಳಿಗೆ ಉಚಿತ ಬಸ್ ಸೇವೆ..
ಪಾಟೀಲ್ ಕಾನ್ವೆಂಟ್ ಶಾಲೆಯಿಂದ ಉಚಿತ ಬಸ್ ಸೇವೆ

Updated on: Dec 13, 2020 | 10:14 AM

ಹುಬ್ಬಳ್ಳಿ: ಬಸ್ ಬಂದ್ ಅನ್ನು ಆಟೋ ಚಾಲಕರು ದುರುಪಯೋಗ ಪಡಿಸಿಕೊಳ್ಳುತ್ತಿರುವ ಹಿನ್ನೆಲೆ ಆಸ್ಪತ್ರೆಗೆ ತೆರಳುವ ರೋಗಿಗಳಿಗೆ ಉಣಕಲ್​ನ ಪಾಟೀಲ್ ಕಾನ್ವೆಂಟ್ ಶಾಲೆಯಿಂದ ಉಚಿತ ಬಸ್ ಸೇವೆ ಕಲ್ಪಿಸಿದೆ.

ರಾಜ್ಯದಾದ್ಯಂತ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದ್ದು, ಹುಬ್ಬಳ್ಳಿಯಲ್ಲಿ ಪ್ರಯಾಣಿಕರಿಂದ ಆಟೋ ಚಾಲಕರು ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದಾರೆ. ಇದರಿಂದ ರೋಗಿಗಳಿಗೆ ದೊಡ್ಡ ಸಮಸ್ಯೆಯಾಗಿದೆ.

ಹುಬ್ಬಳ್ಳಿಯ ಸಿಬಿಟಿಯಿಂದ ಹಳೇ ಬಸ್ ನಿಲ್ದಾಣ ಮಾರ್ಗವಾಗಿ ಕಿಮ್ಸ್ ಆಸ್ಪತ್ರೆಗೆ ಉಚಿತ ಬಸ್ ಸೇವೆ ಸಲ್ಲಿಸುತ್ತಿದ್ದು, ಸಾರಿಗೆ ನೌಕರರ ಮುಷ್ಕರ ಮುಗಿಯುವವರೆಗೂ ಈ ಸೇವೆ ಮುಂದುವರೆಯುತ್ತದೆ.

ರಾಜ್ಯದ ಕೆಲವೆಡೆ ಎಂದಿನಂತೆ ಆರಂಭವಾದ ಸಾರಿಗೆ ಸಂಚಾರ.. ಬೆಂಗಳೂರು ಟು ಮೈಸೂರಿಗೂ ನಾನ್‌ಸ್ಟಾಪ್ ಬಸ್ ಸೌಲಭ್ಯ

 

Published On - 10:07 am, Sun, 13 December 20