ಮದರಸದ ಧಾರ್ಮಿಕ ಗುರುವಿನ ಮೇಲೆ ಮಾರಣಾಂತಿಕ ಹಲ್ಲೆ
ಬಿಜೆಪಿ ಅಭ್ಯರ್ಥಿಗಳ ಪರ ಗ್ರಾ.ಪಂ. ಚುನಾವಣೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಕಾರಣ ಕಾಂಗ್ರೆಸ್ ಕಾರ್ಯಕರ್ತ ಕರೀಂ, ತಂಡದವರೇ ಈ ರೀತಿಯ ಕೃತ್ಯ ಎಸಗಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಮಂಗಳೂರು: ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ಮದರಸ ಧಾರ್ಮಿಕ ಗುರುವಿನ ಮೇಲೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಬಳಿಯ ಅಸೈಗೋಳಿಯಲ್ಲಿ ಕೊಲೆ ಮಾಡಲು ಪ್ರಯತ್ನಿಸಲಾಗಿದ್ದು, ಸದ್ಯ ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುತ್ತಿಗೆಯಿಂದ ತಲೆಗೆ ಹೊಡೆದು ಅಸೈಗೋಳಿ ನಿವಾಸಿ ಧಾರ್ಮಿಕ ಗುರು ಹನೀಫ್ ನಿಜಾಮಿ (40) ಹತ್ಯೆಗೆ ಯತ್ನಿಸಲಾಗಿದೆ. ಬಿಜೆಪಿ ಅಭ್ಯರ್ಥಿಗಳ ಪರ ಹನೀಫ್ ನಿಜಾಮಿ ಉಪ್ಪಳ, ಮಂಜೇಶ್ವರ, ಪೈವಳಿಕೆ ಹಾಗೂ ಮಂಜನಾಡಿ ಭಾಗಗಳಲ್ಲಿ ಗ್ರಾ.ಪಂ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಕಾರಣ ಕಾಂಗ್ರೆಸ್ ಕಾರ್ಯಕರ್ತ ಕರೀಂ, ತಂಡದವರೇ ಈ ರೀತಿಯ ಕೃತ್ಯ ಎಸಗಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಟಿಬೆಟ್ ಯುವಕನ ಹತ್ಯೆ ಯತ್ನ, 8 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ