Photo Gallery | ತುಂಗಭದ್ರಾ ತಟದಲ್ಲಿ ಪುಷ್ಕರ ಸ್ನಾನ ಸಂಭ್ರಮ
ದೇಶದ ಪವಿತ್ರ ನದಿಗಳಲ್ಲಿ 12 ವರ್ಷಗಳಿಗೊಮ್ಮೆ ನಡೆಸಲಾಗುವ ಪುಷ್ಕರ ಸ್ನಾನವನ್ನು ಈ ಬಾರಿ ನ.20 ರಿಂದ ಡಿ.1 ರವರೆಗೆ ತುಂಗಭದ್ರಾ ತಟದಲ್ಲಿ ನಡೆಸಲಾಯಿತು. ಪುಷ್ಕರದ ವೇಳೆಯಲ್ಲಿ ನದಿ ಸ್ನಾನ ಮಾಡಿದ್ರೆ ಪಾಪಗಳೆಲ್ಲ ಪರಿಹಾರವಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಮಂತ್ರಾಲಯದ ಪೀಠಾಧಿಪತಿ ಸುಭುದೇಂದ್ರ ತೀರ್ಥ ಮಹಾಸ್ವಾಮಿಗಳು ನದಿಗಿಳಿದು ಸ್ನಾನ ಮಾಡುವ ಮೂಲಕ ಪುಷ್ಕರಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದರು. ಇದಾದ ನಂತರ ಗುರು ರಾಯರ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಲಾಯಿತು.
Published On - 1:02 pm, Sun, 13 December 20