ಆಸ್ತಿಗಾಗಿ ಹೆತ್ತವರನ್ನೇ ಮನೆಯಿಂದ ಹೊರ ಹಾಕಿದ ಮಕ್ಕಳು; ಕರುಳ ಬಳ್ಳಿಗಳ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆ ಮಟ್ಟಿಲೇರಿದ ವೃದ್ಧ ದಂಪತಿ

| Updated By: sandhya thejappa

Updated on: Apr 19, 2021 | 4:38 PM

ಯೂಸುಫ್ ಅವರು ದುಡಿದು ತಮ್ಮ ಸಂಪಾದನೆಯಲ್ಲಿ ಮಾಡಿರುವ ಮನೆಯಿಂದ ಇವರ ಹೆತ್ತ ಮಕ್ಕಳಾದ ಮುಸ್ತಾಕ್ ಹಾಗೂ ಯಾಸಿನ್ ಎನ್ನುವ ಇಬ್ಬರು ಮಕ್ಕಳು ಹೊಡೆದು ಮನೆಯಿಂದ ಹೊರಗಡೆ ಹಾಕಿದ್ದಾರೆ.

ಆಸ್ತಿಗಾಗಿ ಹೆತ್ತವರನ್ನೇ ಮನೆಯಿಂದ ಹೊರ ಹಾಕಿದ ಮಕ್ಕಳು; ಕರುಳ ಬಳ್ಳಿಗಳ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆ ಮಟ್ಟಿಲೇರಿದ ವೃದ್ಧ ದಂಪತಿ
ಯೂಸುಫ್ ಲಕ್ಕುಂಡಿ ಹಾಗೂ ಶಕೀಲಾ ಬೇಗಂ
Follow us on

ಗದಗ: ಆಸ್ತಿಗಾಗಿ ಹೆತ್ತ ಮಕ್ಕಳೇ ತಂದೆ-ತಾಯಿಗೆ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ ಹೃದಯ ವಿದ್ರಾವಕ ಘಟನೆಯೊಂದು ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ. ಯೂಸುಫ್ ಲಕ್ಕುಂಡಿ ಹಾಗೂ ಶಕೀಲಾ ಬೇಗಂ ಎನ್ನುವ ವಯೋ ವೃದ್ಧ ದಂಪತಿ ಮಕ್ಕಳಿಂದ ಹಲ್ಲೆಗೊಳಗಾಗಿದ್ದು, ಮಕ್ಕಳ ಈ ಕಿರುಕುಳಕ್ಕೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಯೂಸುಫ್ ಅವರು ದುಡಿದು ತಮ್ಮ ಸಂಪಾದನೆಯಲ್ಲಿ ಮಾಡಿರುವ ಮನೆಯಿಂದ ಇವರ ಹೆತ್ತ ಮಕ್ಕಳಾದ ಮುಸ್ತಾಕ್ ಹಾಗೂ ಯಾಸಿನ್ ಎನ್ನುವ ಇಬ್ಬರು ಮಕ್ಕಳು ಹೊಡೆದು ಮನೆಯಿಂದ ಹೊರಗಡೆ ಹಾಕಿದ್ದಾರೆ. ಹಾಗಾಗಿ ಈ ವೃದ್ಧ ದಂಪತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವೃದ್ಧ ದಂಪತಿಗಳಿಗೆ ಮನೆಯಲ್ಲಿ ವಾಸ ಮಾಡಲು ಅವಕಾಶ ನೀಡದೆ ಹಿಂಸೆ ಮಾಡುತ್ತಿದ್ದಾರೆ.

ಇದು ನಮ್ಮ ಮನೆ ನೀವು ಬೇರೆ ಕಡೇ ಹೋಗಿ ಎಂದು ನಿತ್ಯ ಬಂದು ಜಗಳ ತೆಗೆದು ಹೊಡೆಯುವುದು ಬಡಿಯುವುದು ಮಾಡುತ್ತಿದ್ದಾರೆ. ಹೀಗಾಗಿ ಈ ವಯಸ್ಸಿನಲ್ಲಿ ನಾವು ಎಲ್ಲಿಗೆ ಹೋಗಬೇಕು ನಮಗೆ ನಮ್ಮ ಮಕ್ಕಳಾದ ಮುಸ್ತಾಕ್ ಹಾಗೂ ಯಾಸಿನ್ ನಿಂದ ಮುಕ್ತಿ ನೀಡಿ ಇಲ್ಲವಾದರೆ ನಾವು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪುತ್ತೇವೆ ಎಂದು ಯೂಸುಫ್ ಲಕ್ಕುಂಡಿ ಪೊಲೀಸ್ ಠಾಣೆ ಎದುರು ಕಣ್ಣೀರು ಹಾಕುತ್ತಿದ್ದಾರೆ.

ಯೂಸುಫ್ ಅವರ ಪಿತ್ರಾರ್ಜಿತ ಆಸ್ತಿ 8 ಎಕರೆ ಜಮೀನು ಹಾಗೂ ಮನೆಯಲ್ಲಿ ಮಕ್ಕಳು ಆಸ್ತಿಯನ್ನು ಪಾಲು ಮಾಡಿಕೊಂಡಿದ್ದಾರೆ. ಆದರೆ ಯೂಸುಫ್ ಅವರ ಗಮನಕ್ಕೆ ಇದು ಬಂದಿರಲಿಲ್ಲ. ಹೀಗಾಗಿ ನಾವು ಬದುಕು ಸಾಗಿಸಲು ನಮ್ಮ ಆಸ್ತಿ ನಮಗೆ ಬೇಕು ಎಂದು ಗ್ರಾಮದಲ್ಲಿ ನ್ಯಾಯ ಪಂಚಾಯತಿ ಮಾಡಿದ್ದಾರೆ. ಆದರೆ ಈ ವಿಷಯ ಬಗೆ ಹರಿದಿಲ್ಲ. ಹೀಗಾಗಿ ದಂಪತಿ ಕೋರ್ಟ್‌ ಮೊರೆ ಹೋಗಿದ್ದಾರೆ. ಕೋರ್ಟ್​ನಿಂದ ಕೇಸ್ ವಾಪಾಸ್ ಪಡೆಯುವಂತೆ ಮತ್ತೆ ಕಿರುಕುಳ ನೀಡಿದ್ದು, ಮನೆಯಿಂದ ಹೊರಹಾಕುತ್ತಿದ್ದಾರೆ. ಹೀಗಾಗಿ ನಮಗೆ ನ್ಯಾಯ ಕೊಡಿಸಿ ಎಂದು ದಂಪತಿಗಳು ಗದಗ ಗ್ರಾಮೀಣ ಪೋಲಿಸ್ ಠಾಣೆಗೆ ಬಂದು ಮಕ್ಕಳ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ.

ಇನ್ನು ಈ ದಂಪತಿಗಳಿಗೆ ಏಳು ಜನ ಮಕ್ಕಳಿದ್ದು, ಮೂವರು ಗಂಡು ಮಕ್ಕಳು, ನಾಲ್ಕು ಜನ ಹೆಣ್ಣು ಮಕ್ಕಳಿದ್ದಾರೆ. ಈ ಪೈಕಿ ಇಬ್ಬರು ಮಾತ್ರ ಕಿರುಕುಳ ನೀಡುತ್ತಿದ್ದಾರೆ ಎಂದು ದಂಪತಿಗಳು ಆರೋಪ ಮಾಡಿದ್ದಾರೆ. ಮುಪ್ಪಿನ ವಯಸ್ಸಿನಲ್ಲಿ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕಾದ ಮಕ್ಕಳು‌ ಹೆತ್ತವರ ಕೆಟ್ಟವರಾಗಿದ್ದಾರೆ.

ಇದನ್ನೂ ಓದಿ:

ಹೆತ್ತ ಮಕ್ಕಳಿಂದಲೇ ವಂಚನೆಗೆ ಒಳಗಾದ 85 ವರ್ಷದ ವೃದ್ಧೆ; ಹಿರಿಯ ನಾಗರಿಕರ ನ್ಯಾಯ ಮಂಡಳಿಗೆ ದೂರು

Tirath Singh Rawat Controversy: ತೀರಥ್ ಸಿಂಗ್ ಅವರಿಗೊಂದು ಪತ್ರ : ಜಾಸ್ತಿ ಮಕ್ಕಳನ್ನು ಹೆತ್ತು ಅವರನ್ನೂ ಕೂಲಿಗೆ ಕರೆದುಕೊಂಡು ಹೋಗಬೇಕೇನು?

(Gadag Old age couple expelled from home and decided to book a complaint on sons )