AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾದಿಂದ ಮೃತಪಟ್ಟ ಮುಸ್ಲಿಮರ ಅಂತ್ಯಸಂಸ್ಕಾರಕ್ಕೆ ಪ್ರತ್ಯೇಕ ಸ್ಥಳಾವಕಾಶ ಕೇಳಿದ ಜಮೀರ್ ಅಹ್ಮದ್

ಮುಸ್ಲಿಂ ಸಮುದಾಯದಲ್ಲಿ ಮೃತದೇಹಗಳನ್ನು ಸುಡುವುದಿಲ್ಲ. ಹೀಗಾಗಿ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಪ್ರತ್ಯೇಕ ಮೈದಾನ ನೀಡಬೇಕು ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಆಗ್ರಹಿಸಿದರು.

ಕೊರೊನಾದಿಂದ ಮೃತಪಟ್ಟ ಮುಸ್ಲಿಮರ ಅಂತ್ಯಸಂಸ್ಕಾರಕ್ಕೆ ಪ್ರತ್ಯೇಕ ಸ್ಥಳಾವಕಾಶ ಕೇಳಿದ ಜಮೀರ್ ಅಹ್ಮದ್
ಶಾಸಕ ಜಮೀರ್ ಅಹ್ಮದ್
Ghanashyam D M | ಡಿ.ಎಂ.ಘನಶ್ಯಾಮ
| Updated By: Digi Tech Desk|

Updated on:Apr 20, 2021 | 4:28 PM

Share

ಬೆಂಗಳೂರು: ಕೊರೊನಾ ಸೋಂಕಿನಿಂದ ಮುಸ್ಲಿಂ ಸಮುದಾಯಕ್ಕೆ ಸೇರಿದವರಲ್ಲಿಯೂ ಸಾವು ಹೆಚ್ಚಾಗುತ್ತಿದೆ. ಮುಸ್ಲಿಂ ಸಮುದಾಯದಲ್ಲಿ ಮೃತದೇಹಗಳನ್ನು ಸುಡುವುದಿಲ್ಲ. ಹೀಗಾಗಿ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಪ್ರತ್ಯೇಕ ಮೈದಾನ ನೀಡಬೇಕು ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಆಗ್ರಹಿಸಿದರು. ಬೆಂಗಳೂರಿನಲ್ಲಿ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಸೋಮವಾರ ನಡೆದ ವಿಶೇಷ ಸಭೆಯಲ್ಲಿ ಜಮೀರ್ ಮಾತನಾಡಿದರು.

ಪ್ರತಿ ಶಾಸಕರಿಗೆ ತಲಾ 25 ಬೆಡ್​ಗಳನ್ನು ಮೀಸಲಿಡಬೇಕು. ಆಗ ಕ್ಷೇತ್ರದ ಜನರಿಗೆ ಸುಲಭವಾಗಿ ಕೊಡಿಸಲು ಸಾಧ್ಯವಾಗುತ್ತದೆ ಎಂದು ಜಮೀರ್ ಸಲಹೆ ಮಾಡಿದರು. ಈ ಸಲಹೆಗೆ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಸಹ ದನಿಗೂಡಿಸಿದರು. ಶಾಸಕರ ಹೆಸರಿನಲ್ಲಿ ಬೆಡ್‌ಗಳನ್ನು ಮೀಸಲಿಡುವುದು ಉತ್ತಮ ಸಲಹೆ. ಇದರಿಂದ ಬಡವರಿಗೆ ಅನುಕೂಲ ಮಾಡಿಕೊಡಬಹುದು ಎಂದು ರಿಜ್ವಾನ್ ಅಭಿಪ್ರಾಯಪಟ್ಟರು.

ಜನಪ್ರತಿನಿಧಿಗಳ ಸಭೆಯಲ್ಲಿ ದೈಹಿಕ ಅಂತರ ಪಾಲಿಸುತ್ತಿಲ್ಲ ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಬೇಸರ ವ್ಯಕ್ತಪಡಿಸಿದರು. ನಾವೇ ಸಾಮಾಜಿಕ ಅಂತರ ಪಾಲಿಸಿಲ್ಲ ಎಂದರೆ ಹೇಗೆ ಎಂದು ಸಭೆಯಲ್ಲಿಯೇ ಅಸಮಾಧಾನ ಹೊರಹಾಕಿದರು. ಲಾಕ್​ಡೌನ್ ಸಲಹೆಯ ಬಗ್ಗೆಯೂ ಇಬ್ರಾಹಿಂ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ಲಾಕ್‌ಡೌನ್ ಮಾಡಿದರೆ ಜನರು ಸತ್ತುಹೋಗುತ್ತಾರೆ. ಜನರನ್ನು ಮನೆಯಲ್ಲಿ ಕೂಡಿಹಾಕಿದರೆ ಸಮಸ್ಯೆ ಆಗುತ್ತೆ. ಹೊರಗಡೆ ಬಂದರೆ ಅವರ ಆರೋಗ್ಯ ಚೆನ್ನಾಗಿರುತ್ತದೆ. ಲಾಕ್‌ಡೌನ್ ಬದಲಿಗೆ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿ ಮಾಡಬೇಕು. ಕೊರೊನಾಗೆ ಬಲಿಯಾದವರ ಶವದಿಂದ ಸೋಂಕು ಹರಡಲ್ಲ. ಇದನ್ನು ತಜ್ಞರ ಮೂಲಕ ಹೇಳಿಸಬೇಕು. ಮೃತರನ್ನು ಹೂಳುವುದಕ್ಕೆ ಜಾಗ ನೀಡಲು ಕೇಳಿದ್ದೇವೆ ಎಂದು ಮಾಹಿತಿ ನೀಡಿದರು.

ರೋಗ ಲಕ್ಷಣ ಇದ್ದವರೆಲ್ಲಾ ಆಸ್ಪತ್ರೆಗೆ ಬರಬೇಕಾಗಿಲ್ಲ. ಪರಿಸ್ಥಿತಿ ಕ್ರಿಟಿಕಲ್ ಇದ್ದರೆ ಮಾತ್ರ ಆಸ್ಪತ್ರೆಗೆ ಬರಬೇಕು. ಸರ್ಕಾರ ತಪ್ಪು ಮುಚ್ಚಿಕೊಳ್ಳುವುದಕ್ಕೆ ಹೋಗಬಾರದು. ಸರ್ಕಾರ ಎಲ್ಲ ಪಕ್ಷಗಳ ಶಾಸಕರ ಸಲಹೆ ಆಲಿಸಬೇಕು. ಸರ್ಕಾರಕ್ಕೆ ಸಮಸ್ಯೆ ಇದ್ದರೆ ಅದನ್ನ ಬಹಿರಂಗವಾಗಿ ಹೇಳಲಿ. ಆಗ ಸಮಸ್ಯೆಗೆ ಎಲ್ಲರೂ ಪರಿಹಾರ ಕಂಡುಕೊಳ್ಳಬೇಕು. ಕೆಲವೇ ದಿನಗಳಲ್ಲಿ ಕೊವಿಡ್ ಕೇಸ್ 1 ಲಕ್ಷ ಆಗಲಿದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಮುಂದಾಗಬೇಕಿದೆ. ದಿನದ 24 ಗಂಟೆಯೂ ರಾಜ್ಯದಾದ್ಯಂತ ಸೆಕ್ಷನ್ 144 ಜಾರಿ ಮಾಡಬೇಕು. ನಗರದಲ್ಲಿ ಏಕಾಏಕಿ ಲಾಕ್‌ಡೌನ್ ಮಾಡಿದರೆ ಎಲ್ಲರಿಗೂ ಸಮಸ್ಯೆ ಆಗುತ್ತೆ. ಹೋಟೆಲ್‌ಗಳು ಸೇರಿದಂತೆ ಎಲ್ಲವನ್ನೂ ಮುಚ್ಚಿಬಿಡುತ್ತಾರೆ. ಇದರಿಂದ 24 ಗಂಟೆ ಕೆಲಸ ಮಾಡುವವರಿಗೆ ಸಮಸ್ಯೆ ಆಗುತ್ತೆ. ಮದುವೆ ಸೇರಿದಂತೆ ಎಲ್ಲ ಕಡೆಯೂ ನಿಯಮ ಜಾರಿ ಆಗಲಿ ಎಂದು ಅವರು ಆಗ್ರಹಿಸಿದರು.

ಮಾಜಿ ಸಚಿವ ಶಿವರಾಜ ತಂಗಡಗಿಗೆ ಕೊರೊನಾ ಪಾಸಿಟಿವ್​ ಮಾಜಿ ಸಚಿವ ಶಿವರಾಜ ತಂಗಡಗಿ ಅವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಜ್ವರ ಕಾಣಿಸಿಕೊಂಡ ಹಿನ್ನೆಲೆ ಕೊವಿಡ್ ಟೆಸ್ಟ್ ಮಾಡಿಸಿದ್ದರು. ಕೊವಿಡ್-19 ಟೆಸ್ಟ್​ ರಿಪೋರ್ಟ್​ನಲ್ಲಿ ಸೋಂಕಿರುವುದು ದೃಢಪಟ್ಟಿದೆ. 15 ದಿನಗಳಿಂದ ಮಸ್ಕಿ ಉಪಚುನಾವಣೆಯಲ್ಲಿ ಸಚಿವ ತಂಗಡಗಿ ಪಾಲ್ಗೊಂಡಿದ್ದರು.

(Separate graveyard for muslims died from corona request mla Zameer Ahmed)

ಇದನ್ನೂ ಓದಿ: Oxygen Shortage : ಕೊರೊನಾ ಅಲ್ಲ, ಸಾಮಾನ್ಯ ರೋಗಿಗಳಿಗೂ ಆಕ್ಸಿಜನ್ ಸಿಗುತ್ತಿಲ್ಲ.. ನನ್ ಗಂಡ ಸತ್ತೋದ್ರು, ಮಹಿಳೆ ಕಣ್ಣೀರು

ಇದನ್ನೂ ಓದಿ: ಅತ್ತೆ ಮತ್ತು ಗಂಡನಿಗೆ ಕೊರೊನಾ ಪಾಸಿಟಿವ್‌ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಸುಸ್ತಾದ ಮಹಿಳೆ

Published On - 5:43 pm, Mon, 19 April 21

ಸಿಬ್ಬಂದಿಯನ್ನ ಹೆದರಿಸಿ ಮಸಾಜ್​ ಮಾಡಿಸಿಕೊಂಡ ಮುಖ್ಯಶಿಕ್ಷಕಿ: ವಿಡಿಯೋ ವೈರಲ್
ಸಿಬ್ಬಂದಿಯನ್ನ ಹೆದರಿಸಿ ಮಸಾಜ್​ ಮಾಡಿಸಿಕೊಂಡ ಮುಖ್ಯಶಿಕ್ಷಕಿ: ವಿಡಿಯೋ ವೈರಲ್
ಬೀದರ್‌ನ ಐತಿಹಾಸಿಕ ಗುರುದ್ವಾರಕ್ಕೆ ಮತ್ತೊಮ್ಮೆ ಬಾಂಬ್ ಬೆದರಿಕೆ
ಬೀದರ್‌ನ ಐತಿಹಾಸಿಕ ಗುರುದ್ವಾರಕ್ಕೆ ಮತ್ತೊಮ್ಮೆ ಬಾಂಬ್ ಬೆದರಿಕೆ
ಬೆಂಗಳೂರಿನ ಹಲವೆಡೆ ಮಳೆ: ಸಿಲಿಕಾನ್ ಸಿಟಿ ಮತ್ತಷ್ಟು ಕೂಲ್ ಕೂಲ್
ಬೆಂಗಳೂರಿನ ಹಲವೆಡೆ ಮಳೆ: ಸಿಲಿಕಾನ್ ಸಿಟಿ ಮತ್ತಷ್ಟು ಕೂಲ್ ಕೂಲ್
ನಾವು ಆಯುರ್ವೇದಿಕ್ ಡಾಕ್ಟರ್ ಇದ್ದಂಗೆ, ನಮ್ಮದು ಸ್ಲೋ ಇರುತ್ತೆ: ಜಾರಕಿಹೊಳಿ
ನಾವು ಆಯುರ್ವೇದಿಕ್ ಡಾಕ್ಟರ್ ಇದ್ದಂಗೆ, ನಮ್ಮದು ಸ್ಲೋ ಇರುತ್ತೆ: ಜಾರಕಿಹೊಳಿ
ಲಾಸ್ ಏಂಜಲೀಸ್​​ನಲ್ಲಿ ಡೆಲ್ಟಾ ವಿಮಾನ ತುರ್ತು ಭೂಸ್ಪರ್ಶ
ಲಾಸ್ ಏಂಜಲೀಸ್​​ನಲ್ಲಿ ಡೆಲ್ಟಾ ವಿಮಾನ ತುರ್ತು ಭೂಸ್ಪರ್ಶ
ವೇಗವಾಗಿ ಬಂದ ಆಂಬ್ಯುಲೆನ್ಸ್​ ಕನ್ವಾರಿಯಾಗಳಿಗೆ ಡಿಕ್ಕಿ, ಇಬ್ಬರು ಸಾವು
ವೇಗವಾಗಿ ಬಂದ ಆಂಬ್ಯುಲೆನ್ಸ್​ ಕನ್ವಾರಿಯಾಗಳಿಗೆ ಡಿಕ್ಕಿ, ಇಬ್ಬರು ಸಾವು
ಹೆರಿಗೆಗೆಂದು ತವರಿಗೆ ಹೋದ ಟೆಕ್ಕಿ ಪತ್ನಿ, ಫ್ಲ್ಯಾಟ್​ ಮಾರಿ ಪತಿ ಪರಾರಿ
ಹೆರಿಗೆಗೆಂದು ತವರಿಗೆ ಹೋದ ಟೆಕ್ಕಿ ಪತ್ನಿ, ಫ್ಲ್ಯಾಟ್​ ಮಾರಿ ಪತಿ ಪರಾರಿ
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್​​ ಮುಕ್ತಿಗೆ ಪೊಲೀಸರಿಂದ ಮೆಗಾ ಪ್ಲ್ಯಾನ್
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್​​ ಮುಕ್ತಿಗೆ ಪೊಲೀಸರಿಂದ ಮೆಗಾ ಪ್ಲ್ಯಾನ್
ವಿಯೆಟ್ನಾಂನ ಹಾ ಲಾಂಗ್ ಕೊಲ್ಲಿಯಲ್ಲಿ ಹಡಗು ಮಗುಚಿ 34 ಮಂದಿ ಸಾವು
ವಿಯೆಟ್ನಾಂನ ಹಾ ಲಾಂಗ್ ಕೊಲ್ಲಿಯಲ್ಲಿ ಹಡಗು ಮಗುಚಿ 34 ಮಂದಿ ಸಾವು
Weekly Horoscope: ಜುಲೈ 21 ರಿಂದ 27ರವರೆಗಿನ ವಾರ ಭವಿಷ್ಯ
Weekly Horoscope: ಜುಲೈ 21 ರಿಂದ 27ರವರೆಗಿನ ವಾರ ಭವಿಷ್ಯ