ಗದಗ: ಆರ್ಥಿಕವಾಗಿ ಸಬಲವಾಗಬೇಕು ಅಂತ ರೈತರು ಕಬ್ಬು ಬೆಳೆಯ ಮೊರೆ ಹೋಗಿದ್ದರು. ತಮ್ಮ ಜಮೀನಿನ ಜೊತೆ ಪಕ್ಕದಲ್ಲಿದ್ದ ಬೇರೆಯವರ ಜಮೀನಿನಲ್ಲಿ ಕಬ್ಬು ಬೆಳೆದಿದ್ದರು. ಕಬ್ಬು ಕೂಡ ಚೆನ್ನಾಗಿ ಬೆಳೆದಿತ್ತು. ಇನ್ನೊಂದು ತಿಂಗಳಲ್ಲಿ ಫ್ಯಾಕ್ಟರಿಗೆ ಕಳಿಸಬೇಕಿತ್ತು. ಆದರೆ ಅಷ್ಟರಲ್ಲೇ ಸುಮಾರು 10 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಳೆ ಬೆಂಕಿಗಾಹುತಿಯಾಗಿದೆ. ವಿದ್ಯುತ್ ಅವಘಡದಿಂದ ರೈತರ ಕಣ್ಣೆದುರೆ ಕಬ್ಬು ಸಂಪೂರ್ಣ ಸುಟ್ಟು ಕರಕಲಾಗಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಬಿ.ಎಸ್.ಬೆಲೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೆಲೇರಿ ಗ್ರಾಮದ ಮುತ್ತಪ್ಪ ಖ್ಯಾಡದ, ಹೂವಪ್ಪ ಖ್ಯಾಡದ, ಹನಮಂತ ಖ್ಯಾಡದ ಎಂಬ ಸಹೋದರರಿಗೆ ಸೇರಿದ್ದ ಕಬ್ಬಿನ ತೋಟ ಸಂಪೂರ್ಣ ನಾಶವಾಗಿದೆ. 10 ಎಕರೆ ಪ್ರದೇಶದಲ್ಲಿ ಸಹೋದರರು ಕಬ್ಬು ಬೆಳೆದಿದ್ದರು. ಪ್ರತಿ ಎಕರೆಗೆ 40 ಸಾವಿರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದರು. ಇನ್ನೂಂದು ತಿಂಗಳಲ್ಲಿ ಕಬ್ಬು ಕಟಾವು ಮಾಡಲಾಗುತ್ತಿತ್ತು. ಆದರೆ ಎಲ್ಲವೂ ಸುಟ್ಟು ಭಸ್ಮವಾಗಿದೆ.
ಪತ್ನಿ ಚಿನ್ನಾಭರಣ ಮಾರಿ ಕಬ್ಬು ಬೆಳೆದ ರೈತರು
ಮುತ್ತಪ್ಪ ಖ್ಯಾಡ್ ಸಹೋದರರಿಗೆ 4 ಎಕರೆ ಜಮೀನಿದೆ. ಬೇರೆ ರೈತರ 6 ಎಕರೆ ಜಮೀನು ಲಾವಣಿ ಪಡೆದು ಒಟ್ಟು 10 ಎಕರೆಯಲ್ಲಿ ಕಬ್ಬು ಬೆಳೆದಿದ್ದಾರೆ. ಬೀಜ, ಗೊಬ್ಬರ ಸೇರಿ ಸುಮಾರು 8 ಲಕ್ಷ ಖರ್ಚು ಮಾಡಿದ್ದಾರೆ. ಪತ್ನಿ ಚಿನ್ನಾಭರಣ ಮಾರಾಟ ಮಾಡಿ ಕಬ್ಬು ಬೆಳೆದಿದ್ದಾರೆ. ಆಧಾಯದ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ.
ಅಂದುಕೊಂಡತೆ ನಡೆದಿದ್ದರೆ ತಿಂಗಳ ಬಳಿಕ 15 ಲಕ್ಷ ಲಾಭದ ನಿರೀಕ್ಷೆ ಇತ್ತು. ಎಲ್ಲವೂ ಹಾಳಾಗಿ ಹೊಯ್ತು. ಅಧಿಕಾರಿಗಳು ಯಾರೂ ಬಂದಿಲ್ಲ ಅಂತ ರೈತ ಕುಟುಂಬ ಕಿಡಿಕಾರಿದೆ.
ಇದನ್ನೂ ಓದಿ
Parliament Winter Session ಲೋಕಸಭೆಯಲ್ಲಿ ವಿಪಕ್ಷಗಳ ಗದ್ದಲ; ಕಲಾಪ ಮಧ್ಯಾಹ್ನ 12 ಗಂಟೆವರೆಗೆ ಮುಂದೂಡಿದ ಸ್ಪೀಕರ್
‘ಹೀಗೆಲ್ಲ ಮಾಡಿದ್ರೆ ಪುನೀತ್ಗೆ ದ್ರೋಹ ಮಾಡಿದಂತೆ ಆಗುತ್ತೆ’; ಅಪ್ಪು ಸಮಾಧಿ ಬಳಿ ರಾಘಣ್ಣ ಮಾತು
Published On - 11:37 am, Mon, 29 November 21