Parliament Winter Session ಲೋಕಸಭೆಯಲ್ಲಿ ವಿಪಕ್ಷಗಳ ಗದ್ದಲ; ಕಲಾಪ ಮಧ್ಯಾಹ್ನ 12 ಗಂಟೆವರೆಗೆ ಮುಂದೂಡಿದ ಸ್ಪೀಕರ್

TV9 Digital Desk

| Edited By: Rashmi Kallakatta

Updated on:Nov 29, 2021 | 11:50 AM

ಈ ಅಧಿವೇಶನವನ್ನು ಮುಂದೂಡುವುದು ಮತ್ತು ಅಡ್ಡಿಪಡಿಸುವ ಬದಲು ಅರ್ಥಪೂರ್ಣ ಚರ್ಚೆಗಳಿಗಾಗಿ ನೆನಪಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ ಎಂದು ಪ್ರಧಾನಿ  ನರೇಂದ್ರ ಮೋದಿ ಹೇಳಿದ್ದಾರೆ.

Parliament Winter Session ಲೋಕಸಭೆಯಲ್ಲಿ ವಿಪಕ್ಷಗಳ ಗದ್ದಲ; ಕಲಾಪ ಮಧ್ಯಾಹ್ನ 12 ಗಂಟೆವರೆಗೆ ಮುಂದೂಡಿದ ಸ್ಪೀಕರ್
ಚಳಿಗಾಲದ ಅಧಿವೇಶನ (ಕೃಪೆ ಸಂಸತ್ ಟಿವಿ)

ದೆಹಲಿ: ಸಂಸತ್​​ನ ಚಳಿಗಾಲದ ಅಧಿವೇಶನ ( (Winter Session)) ಸೋಮವಾರ ಆರಂಭಗೊಂಡಿದ್ದು, ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆ ಸೇರಿದಂತೆ 26 ಮಸೂದೆಗಳು ಮಂಡನೆಯಾಗುವ ನಿರೀಕ್ಷೆಯಿದೆ. ನರೇಂದ್ರ ಮೋದಿ(Narendra Modi) ನೇತೃತ್ವದ ಸರ್ಕಾರವು ಮುಂದಿನ ವರ್ಷ ಪ್ರಮುಖ ರಾಜ್ಯಗಳ ಚುನಾವಣೆಗೆ ಮುಂಚಿತವಾಗಿ  ಕೃಷಿ ಕಾನೂನುಗಳನ್ನು ರದ್ದುಗೊಳಿಸಲಿದೆ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ (Narendra Singh Tomar) ಅವರು ಮಂಡಿಸಲಿರುವ ಕೃಷಿ ಕಾನೂನುಗಳ ರದ್ದತಿ ಮಸೂದೆಯನ್ನು(The Farm Laws Repeal Bill)ಲೋಕಸಭೆಯಲ್ಲಿ ಅಂಗೀಕಾರಕ್ಕಾಗಿ ಪಟ್ಟಿ ಮಾಡಲಾಗಿದೆ. ಭಾರತೀಯ ಜನತಾ ಪಕ್ಷ (BJP) ಹಾಗೂ ಕಾಂಗ್ರೆಸ್ ತನ್ನ ಸಂಸದರಿಗೆ ವಿಪ್ ಜಾರಿ ಮಾಡಿ ಇಂದಿನ ಅಧಿವೇಶನದಲ್ಲಿ ಹಾಜರಿರುವಂತೆ ಸೂಚಿಸಿದೆ. ಮೂರು ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಕಾಂಗ್ರೆಸ್ ಸೋಮವಾರ ಬೆಳಗ್ಗೆ ಸಂಸತ್ ಭವನದಲ್ಲಿ ಪ್ರತಿಭಟನೆ ನಡೆಸಿತು. ಸಂಸತ್​​ನ ಚಳಿಗಾಲದ ಅಧಿವೇಶನ ಇಂದು (ಸೋಮವಾರ) ಆರಂಭವಾಗಿದ್ದ,ವಿಪಕ್ಷಗಳ ಗದ್ದಲದಿಂದ ಕಲಾಪ ಮಧ್ಯಾಹ್ನ 12 ಗಂಟೆವರೆಗೆ ಮುಂದೂಡಲಾಗಿದೆ. ಬೆಳಗ್ಗೆ ಕಲಾಪ  ಆರಂಭವಾದಾಗ  ರಾಜ್ಯಸಭೆಯಲ್ಲಿ ಸ್ಪೀಕರ್ ಎಂ ವೆಂಕಯ್ಯ ನಾಯ್ಡು ಮತ್ತು ಲೋಕಸಭೆಯಲ್ಲಿ ಸ್ಪೀಕರ್ ಬಿರ್ಲಾ ಅವರು ಇತ್ತೀಚೆಗೆ ನಿಧನರಾದ ಸದಸ್ಯರಿಗೆ ಸಂತಾಪ ಸೂಚಿಸಿದರು.ಈ ಅಧಿವೇಶನವನ್ನು ಮುಂದೂಡುವುದು ಮತ್ತು ಅಡ್ಡಿಪಡಿಸುವ ಬದಲು ಅರ್ಥಪೂರ್ಣ ಚರ್ಚೆಗಳಿಗಾಗಿ ನೆನಪಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ ಎಂದು ಪ್ರಧಾನಿ  ನರೇಂದ್ರ ಮೋದಿ ಹೇಳಿದ್ದಾರೆ.

ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನ ವಾಡಿಕೆ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ  ಸದನದಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಲು ಕೇಂದ್ರ ಸಿದ್ಧವಿದೆ.ಸದನದ ಗೌರವವನ್ನು ಎಲ್ಲಾ ಪಕ್ಷಗಳು ಕಾಪಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಚಳಿಗಾಲದ ಅಧಿವೇಶನ: ಏನೇನಾಯ್ತು? ಸೋನಿಯಾ ಗಾಂಧಿಯವರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನೆಯ ನೇತೃತ್ವ ವಹಿಸಿದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಸಂಪುಟದ ಹಿರಿಯ ಸದಸ್ಯರೊಂದಿಗೆ ಪ್ರಧಾನಿ ಮೋದಿ ಸಭೆ ನಡೆಸಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪೊಳ್ಳು ಮಾತುಗಳು, ಪ್ರಧಾನ ಮಂತ್ರಿಗಳೇ. ನೀವು ಪೆಗಾಸಸ್‌ನ ಚರ್ಚೆಯಿಂದ ಓಡಿಹೋಗಿದ್ದೀರಿ ಮತ್ತು ಮುಂಗಾರು ಅಧಿವೇಶನವನ್ನು ಪೂರ್ತಿಯಾಗಿ ಅಡ್ಡಿಪಡಿಸಲು ಜವಾಬ್ದಾರರಾಗಿರುತ್ತೀರಿ. ಸೆಪ್ಟೆಂಬರ್ 2020 ರಲ್ಲಿ ನಿಮ್ಮ ಸರ್ಕಾರವು ಪ್ರತಿಯೊಂದು ನಿಯಮವನ್ನು ಮುರಿದು ಕೃಷಿ ಕಾನೂನುಗಳನ್ನು ತಂದಿದೆ.ಸಮಸ್ಯೆ ಏನೆಂದರೆ, ಸಂಸತ್ ಮನ್ ಕಿ ಬಾತ್ ಅಲ್ಲ ಎಂದು ನಿಮ್ಮ ಕ್ಯಾಬಿನೆಟ್‌ನಲ್ಲಿ ಯಾರೂ ನಿಮಗೆ ಹೇಳುವುದಿಲ್ಲ ಎಂದು ಟಿಎಂಸಿ ಸಂಸದ ಡೆರಿಕ್ ಒ’ಬ್ರೇನ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Farm Laws Repeal ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭ: ಮೂರು ಕೃಷಿ ಕಾನೂನುಗಳ ರದ್ದತಿಗೆ ಆದ್ಯತೆ, ಎಂಎಸ್​ಪಿ ಕಾಯ್ದೆಗೆ ವಿಪಕ್ಷ ಆಗ್ರಹ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada