ತಿರುಮಲ ತಿರುಪತಿ ದೇವಸ್ಥಾನಂನ ಒಎಸ್​ಡಿ ಪಿ.ಶೇಷಾದ್ರಿ ವಿಶಾಖಪಟ್ಟಣಂನಲ್ಲಿ ನಿಧನ

ಡಾಲರ್​ ಶೇಷಾದ್ರಿ 1978ರಲ್ಲಿ ಟಿಟಿಡಿಯನ್ನು ಸೇರ್ಪಡೆಗೊಂಡರು. 2007ರಲ್ಲಿ ಅವರು ನಿವೃತ್ತರಾದರೂ ಕೂಡ ಅವರ ಕಾರ್ಯವೈಖರಿಯನ್ನು ನೋಡಿ, ಅಲ್ಲಿಯೇ ತಮ್ಮ ಸೇವೆ ಮುಂದುವರಿಸಲು ಅವಕಾಶ ನೀಡಲಾಗಿತ್ತು.

ತಿರುಮಲ ತಿರುಪತಿ ದೇವಸ್ಥಾನಂನ ಒಎಸ್​ಡಿ ಪಿ.ಶೇಷಾದ್ರಿ ವಿಶಾಖಪಟ್ಟಣಂನಲ್ಲಿ ನಿಧನ
ಪಿ.ಶೇಷಾದ್ರಿ

ವಿಶಾಖಪಟ್ಟಣಂ: ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ನ ವಿಶೇಷ ಕರ್ತವ್ಯ ಅಧಿಕಾರಿ ಆಗಿದ್ದ ಪಿ.ಶೇಷಾದ್ರಿ (74) ಇಂದು ಮುಂಜಾನೆ ವಿಶಾಖಪಟ್ಟಣಂನಲ್ಲಿ ನಿಧನರಾದರು. ಇವರು ಡಾಲರ್​​ ಶೇಷಾದ್ರಿ ಎಂದೇ ಜನಪ್ರಿಯರಾಗಿದ್ದರು. ಹಲವು ದಶಕಗಳಿಂದಲೂ ಅವರು ಟಿಟಿಡಿಯಲ್ಲೇ ಇದ್ದರು. ಹಾಗೇ, ಟಿಟಿಡಿ ವತಿಯಿಂದ ವಿಶಾಖಪಟ್ಟಣಂನಲ್ಲಿ ಆಯೋಜಿಸಿದ್ದ ದೀಪೋತ್ಸವದಲ್ಲಿ ಪಾಲ್ಗೊಳ್ಳಲು ಅಲ್ಲಿಗೆ ತೆರಳಿದ್ದಾಗ ನಿಧನರಾಗಿದ್ದಾರೆ.

ಸೋಮವಾರ ಮುಂಜಾನೆ ಹೊತ್ತಿಗೆ ಅವರಿಗೆ ಹೃದಯ ಸ್ತಂಭನವಾಗಿದೆ. ಕೂಡಲೇ ಅವರನ್ನು ರಾಮನಗರದಲ್ಲಿರುವ ಕಾರ್ಪೋರೇಟ್​ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ. ಮೃತದೇಹವನ್ನು ಏರ್​ಲಿಫ್ಟ್​ ಮೂಲಕ ತಿರುಪತಿಗೆ ತರಲಾಗುವುದು ಎಂದು ಹೇಳಲಾಗಿದ್ದು, ಇಲ್ಲಿಯೇ ಅಂತಿಮ ಸಂಸ್ಕಾರ ನಡೆಯಲಿದೆ.

ಡಾಲರ್​ ಶೇಷಾದ್ರಿ 1978ರಲ್ಲಿ ಟಿಟಿಡಿಯನ್ನು ಸೇರ್ಪಡೆಗೊಂಡರು. 2007ರಲ್ಲಿ ಅವರು ನಿವೃತ್ತರಾದರೂ ಕೂಡ ಅವರ ಕಾರ್ಯವೈಖರಿಯನ್ನು ನೋಡಿ, ಅಲ್ಲಿಯೇ ತಮ್ಮ ಸೇವೆ ಮುಂದುವರಿಸಲು ಅವಕಾಶ ನೀಡಲಾಗಿತ್ತು. ಅವರ ನಿಧನಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್​.ಜಗನ್​ರೆಡ್ಡಿ ಸಂತಾಪ ಸೂಚಿಸಿದ್ದಾರೆ. ಹಾಗೇ, ಟಿಡಿಪಿ ಪಕ್ಷದ ಪ್ರಧಾನ ಕಾರ್ಯದರ್ಶಿ, ಮಾಜಿ ಸಿಎಂ ಎನ್​.ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್​ ಸಂತಾಪ ಸೂಚಿಸಿದ್ದು, ಟಿಟಿಡಿಯ ಒಎಎಸ್​ಡಿ ಶೇಶಾದ್ರಿ ನಿಧನ ದುಃಖ ತಂದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೊರೊನಾ 3ನೆಯ ಅಲೆ ಮುನ್ನೆಲೆ ಸರ್ಕಾರದ ಮುಂದೆ ಲಾಕ್‌ಡೌನ್ ಪ್ರಸ್ತಾವನೆ ಇಲ್ಲ -ಸಚಿವ ಡಾ. ಕೆ. ಸುಧಾಕರ್

Click on your DTH Provider to Add TV9 Kannada