AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಮಿಕ್ರಾನ್​ ವೈರಾಣು ಡೆಲ್ಟಾಗಿಂತಲೂ ಅಪಾಯಕಾರಿಯಾ?-ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು? ಇಲ್ಲಿದೆ ಸಮಗ್ರ ಮಾಹಿತಿ

ಕೊವಿಡ್​ 19ನ ಡೆಲ್ಟಾ ಸೇರಿ ಎಲ್ಲ ರೂಪಾಂತರ ತಳಿಗಳು ಸಾವನ್ನು ಉಂಟು ಮಾಡುವಷ್ಟು ಪ್ರಬಲವಾಗಿವೆ. ಹಾಗಾಗಿ ಒಮಿಕ್ರಾನ್​​ನ್ನು ನಿರ್ಲಕ್ಷಿಸಬಾರದು ಎಂದೂ ಡಬ್ಲ್ಯೂಎಚ್​ಒ ತಿಳಿಸಿದೆ.

ಒಮಿಕ್ರಾನ್​ ವೈರಾಣು ಡೆಲ್ಟಾಗಿಂತಲೂ ಅಪಾಯಕಾರಿಯಾ?-ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು? ಇಲ್ಲಿದೆ ಸಮಗ್ರ ಮಾಹಿತಿ
ಪ್ರಾತಿನಿಧಿಕ ಚಿತ್ರ
TV9 Web
| Updated By: Lakshmi Hegde|

Updated on:Nov 29, 2021 | 10:42 AM

Share

ದೆಹಲಿ: ಸದ್ಯಕ್ಕಂತೂ ಕೊರೊನಾದ ಒಮಿಕ್ರಾನ್​ ರೂಪಾಂತರ ಭೀತಿ ಜಗತ್ತಿಗೆ ಆವರಿಸಿದೆ. ಪ್ರತಿದಿನ ಇದರ ವ್ಯಾಪ್ತಿ ಹೆಚ್ಚುತ್ತಿದ್ದು, ಹಲವು ದೇಶಗಳು ಈ ಒಮಿಕ್ರಾನ್​ ನಿಯಂತ್ರಣ ಮಾಡಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಇಲ್ಲಿಯವರೆಗೆ ಅತ್ಯಂತ ಅಪಾಯಕಾರಿಯೆನಿಸಿದ್ದ ಡೆಲ್ಟಾ ವೈರಾಣುಗಿಂತಲೂ ಇದು ಅಪಾಯ ಎಂದು ಹೇಳಲಾಗುತ್ತಿದೆ. ಆದರೆ ಈ ಹೊಸ ರೂಪಾಂತರದ ಹರಡುವಿಕೆ ತೀವ್ರಗತಿಯಲ್ಲಿದೆ, ಇದು ಆರೋಗ್ಯದ ಮೇಲೆ ಗಂಭೀರ ಸ್ವರೂಪದ ಹಾನಿ ಉಂಟು ಮಾಡುತ್ತದೆ ಎಂಬುದಿನ್ನೂ ಸ್ಪಷ್ಟವಾಗಿಲ್ಲ. ಇನ್ನೂ ಕೆಲವು ಅಧ್ಯಯನಗಳ ಬಳಿಕವಷ್ಟೇ ಇದು ಗೊತ್ತಾಗಲಿದೆ. ಒಂದೇ ಸಲ ಯಾವುದೇ ತೀರ್ಮಾನಕ್ಕೂ ಬರಲಾಗದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಒಮಿಕ್ರಾನ್​ ಜಾಗತಿಕವಾಗಿ ಹರಡುತ್ತಿರುವ ಬಗ್ಗೆ ಕಳವಳ ಶುರುವಾಗಿದೆ.  

ಒಮಿಕ್ರಾನ್​ ಬಗ್ಗೆ ಡಬ್ಲ್ಯೂಎಚ್​ಒ ಹೇಳೋದೇನು? ಕೊವಿಡ್​ 19 ನ ಹಲವು ರೂಪಾಂತರಗಳು ಸದ್ಯಕ್ಕೆ ಜಾಗತಿಕವಾಗಿ ಕಾಡುತ್ತಿವೆ. ಆ ಎಲ್ಲ ರೂಪಾಂತರಿ ತಳಿಗಳಿಗಿಂತ ಒಮಿಕ್ರಾನ್​ ಸೋಂಕು ಮತ್ತು ಅದರ ಲಕ್ಷಣಗಳು ವಿಭಿನ್ನ ಎಂದು ಹೇಳಲು ಸದ್ಯಕ್ಕಂತೂ ಯಾವುದೇ ಪುರಾವೆ ಸಿಕ್ಕಿಲ್ಲ. ಹೀಗಾಗಿ ಈ ಒಮಿಕ್ರಾನ್​​ ಬಗ್ಗೆ ಇನ್ನಷ್ಟು ಅಧ್ಯಯನ, ವಿಮರ್ಶೆಗಳು ಅಗತ್ಯವಿದ್ದು, ಅದಕ್ಕೆ ಕೆಲವು ದಿನಗಳು ಅಥವಾ ವಾರಗಳೇ ಬೇಕಾಗಬಹದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಸದ್ಯ ಕೊವಿಡ್​ 19 ನಿಂದ ಉಂಟಾಗಿರುವ ಡೆಲ್ಟಾ ಸೇರಿ ಎಲ್ಲ ರೂಪಾಂತರ ತಳಿಗಳು ಸಾವನ್ನು ಉಂಟು ಮಾಡುವಷ್ಟು ಪ್ರಬಲವಾಗಿವೆ. ಹಾಗಾಗಿ ಒಮಿಕ್ರಾನ್​​ನ್ನು ನಿರ್ಲಕ್ಷಿಸಬಾರದು. ಪ್ರಾಥಮಿಕವಾಗಿ ಈ ಸೋಂಕಿನ ಬಗ್ಗೆ ನಡೆದ ಅಧ್ಯಯನದಲ್ಲಿ, ಒಮಿಕ್ರಾನ್​ ಮರು ಸೋಂಕಿಗೆ ಕಾರಣವಾಗಲಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಅಂದರೆ ಈ ಹಿಂದೆ ಕೊವಿಡ್​ 19 ಸೋಂಕಿಗೆ ಒಳಗಾದವರು ಕೂಡ ಮತ್ತೆ ಈ ಒಮಿಕ್ರಾನ್​ಗೆ ಒಳಗಾಗಬಹುದು.

ಈಗಿರುವ ಪಿಸಿಆರ್​ ಟೆಸ್ಟ್​​ನಿಂದಲೇ ಒಮಿಕ್ರಾನ್​ ಸೋಂಕನ್ನು ಪತ್ತೆ ಮಾಡಬಹುದು. ಹಾಗಿದ್ದಾಗ್ಯೂ ಈಗಿರುವ ಕೊವಿಡ್​ 19 ಲಸಿಕೆಗಳೇ ಒಮಿಕ್ರಾನ್​ ನಿಯಂತ್ರಿಸಬಹುದಾ ಎಂಬುದಕ್ಕೆ ಇನ್ನಷ್ಟು ಅಧ್ಯಯನಗಳ ಅಗತ್ಯವಿದೆ ಎಂದು ಡಬ್ಲ್ಯೂಎಚ್​​ಒ ಹೇಳಿದೆ.  ಹಾಗೇ, ಒಮಿಕ್ರಾನ್​ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ವಿಶ್ವದ ಎಲ್ಲ ರಾಷ್ಟ್ರಗಳಿಗೆ ಸೂಚನೆ ನೀಡಿದೆ.

ಇದನ್ನೂ ಓದಿ: ಸಲ್ಮಾನ್​ ಖಾನ್​ ಯಾಕಿನ್ನೂ ಮದುವೆ ಆಗಿಲ್ಲ? ಅಸಲಿ ಕಾರಣ ತಿಳಿಸಿದ ಬಾಮೈದ ಆಯುಶ್​ ಶರ್ಮಾ

Published On - 9:47 am, Mon, 29 November 21

ಗುರುಪೂರ್ಣಿಮೆಯ ರಹಸ್ಯ ಹಾಗೂ ಆಚರಣೆಯ ಮಹತ್ವ ಗೊತ್ತಾ?
ಗುರುಪೂರ್ಣಿಮೆಯ ರಹಸ್ಯ ಹಾಗೂ ಆಚರಣೆಯ ಮಹತ್ವ ಗೊತ್ತಾ?
ಗುರುಪೂರ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಗುರುಬಲ ಯೋಗ ತಿಳಿಯಿರಿ
ಗುರುಪೂರ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಗುರುಬಲ ಯೋಗ ತಿಳಿಯಿರಿ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ