ಗದಗ: ಪತಿ ಕಳೆದುಕೊಂಡು ಪತ್ನಿ ಕಣ್ಣೀರು. ತಂದೆ ತಮ್ಮನ್ನ ಬಿಟ್ಟು ಹೋಗಿದ್ದಾನೆ ಅನ್ನೋದು ಗೋತ್ತಾಗದೇ ಕಂಗಾಲಾಗಿ ಕುಳಿತ ಮಕ್ಕಳು. ಸಂಬಂಧಿಕರ ಗೋಳಾಟ. ಮತ್ತೊಂದಡೆ ಪೊಲೀಸರಿಂದ ಸ್ಥಳ ಪರಿಶೀಲನೆ. ಈ ಎಲ್ಲ ದೃಶ್ಯಗಳು ಕಂಡಿದ್ದು, ಗದಗ(Gadag) ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ. ಹೌದು ಹಾತಲಕೇರಿ ಗ್ರಾಮದ ಬಳಿಯ ಜಮೀನಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವ ಪತ್ತೆಯಾಗಿತ್ತು. ನೋಡಿದ್ರೆ, ಬಿಸಿಲಿನ ತಾಪಕ್ಕೆ ಶವ ಬೆಂದು ಹೋದ ಸ್ಥಿತಿಯಲ್ಲಿದೆ. ಕುಟುಂಬಸ್ಥರು ಹಾಗೂ ಪೊಲೀಸರು ಶವದ ಗುರುತು ಪತ್ತೆ ಮಾಡಲು ಪರದಾಟ ನಡೆಸಿದ್ರು. ಅಷ್ಟೊಂದು ಬಿಸಿಲಿನ ತಾಪಕ್ಕೆ ಬೆಂದು ಹೋಗಿತ್ತು. ಈ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ವ್ಯಕ್ತಿಯ ಹೆಸರು ಸಂಗಪ್ಪ(38) ಕಮಡೊಳ್ಳಿ, ಮೂರು ದಿನಗಳ ಹಿಂದೆಯೇ ಮನೆಯಿಂದ ಹೋಗಿದ್ದ ಇತ ಶವವಾಗಿ ಪತ್ತೆಯಾಗಿದ್ದಾನೆ.
ಹೀಗಾಗಿ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಕೊಲೆಯೋ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂಗಪ್ಪ ಸಾವನ್ನಪ್ಪಿರುವ ಸ್ಥಳದಲ್ಲಿ ಕ್ರಿಮಿನಾಶಕ ಬಾಟಲಿ ಪತ್ತೆಯಾಗಿದೆ. ಹಾಗೇ ಮದ್ಯ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಶಂಕೆ ಕೂಡ ವ್ಯಕ್ತವಾಗಿದೆ. ಆದ್ರೆ, ಶವ ಬೆತ್ತಲೆಯಾಗಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಕ್ಕೆ ಎಡೆಮಾಡಿದೆ. ಆತ್ಮಹತ್ಯೆಯೋ, ಕೊಲೆಯೋ ಅನ್ನೋದು ಗೋಂದಲವಾಗಿದೆ. ಇನ್ನೂ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಸಂಗಪ್ಪ ಮೂಲತಃ ಹಾವೇರಿ ಜಿಲ್ಲೆಯ ಕಿತ್ತೂರು ಗ್ರಾಮದ ನಿವಾಸಿ. ಗದಗ ತಾಲೂಕಿನ ಹಾತಲಕೇರಿ ಗ್ರಾಮದ ರೇಖಾ ಎನ್ನುವ ಮಹಿಳೆ ಜೊತೆಗೆ ವಿವಾಹವಾಗಿದ್ದಾನೆ. ಎರಡು ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳಿದ್ದಾಳೆ. ಇನ್ನು ಇತ ಹಾವೇರಿ ಜಿಲ್ಲೆಯ ಕಿತ್ತೂರು ಗ್ರಾಮದಲ್ಲಿ ಎರಡು ಎಕರೆ ಜಮೀನಿನಲ್ಲಿ ಕೃಷಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಆದ್ರೆ, ಲಕ್ಷಾಂತರ ರೂಪಾಯಿ ಸಾಲವನ್ನು ಮಾಡಿಕೊಂಡಿದ್ದ, ಸಾಲಗಾರರ ಕಿರುಕುಳಕ್ಕೆ ಬೇಸತ್ತು, ಗದಗ ತಾಲೂಕಿನ ಹಾತಲಕೇರಿ ಗ್ರಾಮದ ಪತ್ನಿ ಮನೆಯಲ್ಲಿ ಕಳೆದ ಒಂದು ವರ್ಷದಿಂದ ವಾಸ ಮಾಡ್ತಾಯಿದ್ದ.
ಆದರೆ ಹಾತಲಗೇರಿ ಗ್ರಾಮಕ್ಕೂ ಬಂದು ಸಾಲಗಾರರು ಕಿರುಕುಳು ನೀಡಿಲು ಆರಂಭ ಮಾಡಿದ್ರಂತೆ, ಹೀಗಾಗಿ ಕಳೆದ ಮೂರು ದಿನಗಳ ಹಿಂದೆ ಕಿತ್ತೂರು ಗ್ರಾಮದಲ್ಲಿ ಜಮೀನು ಮಾರಾಟ ಮಾಡಿ, ಸಾಲವನ್ನು ತಿರುಸುವುದಾಗಿ ಹೇಳಿ, ಮನೆಯಿಂದ ಹೊರಗಡೆ ಹೋಗಿದ್ದನಂತೆ. ಇದೀಗ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪತ್ನಿ ಗೋಳಾಡುತ್ತಿದ್ದಾಳೆ. ಜೊತೆಗೆ ಸಾಲಗಾರರ ಕಿರುಕುಳಕ್ಕೆ ಬೇಸತ್ತು ಸಾವನ್ನಪ್ಪಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ. ಒಟ್ಟಿನಲ್ಲಿ ಸಂಗಪ್ಪ ಸಾವಿನ ಹಿಂದೆ ಹತ್ತಾರು ಅನುಮಾನದ ಹುತ್ತ ಬೆಳೆದಿದೆ. ಸಾಲಗಾರರು ಕೊಲೆ ಮಾಡಿದ್ರಾ, ಅಥವಾ ಆತನೇ ಆತ್ಮಹತ್ಯೆ ಮಾಡಿಕೊಂಡನಾ? ಎನ್ನುವ ಪ್ರಶ್ನೆ ಕಾಡುತ್ತಿದೆ. ಇದೆಲ್ಲದಕ್ಕೂ ಉತ್ತರ ಪೊಲೀಸ ತನಿಖೆಯಿಂದಲೇ ನಿಖರವಾದ ಕಾರಣ ಗೊತ್ತಾಗಬೇಕಾಗಿದೆ.
ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ