ಗದಗ: ಕರುಳ ಬಳ್ಳಿ ಉಳಿಸಿಕೊಳ್ಳಲು ತಾಯಿಯ ಹೋರಾಟ ವ್ಯರ್ಥ; ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕ ಸಾವು

| Updated By: preethi shettigar

Updated on: Nov 14, 2021 | 8:37 AM

ನಿನ್ನೆ ಬಾಲಕನ ಮನೆಗೆ ಭೇಟಿ ನೀಡಿದ ಟಿವಿ9 ತಂಡ, ಡಯಾಲಿಸ್ ಮಾಡದ ಕಾರಣ ಬಾಲಕನ ನರಳಾಟ ಕಂಡು ತಕ್ಷಣ ಜಿಮ್ಸ್ ನಿರ್ದೇಶಕ ಡಾ. ಪಿ. ಎಸ್. ಭೂಸರೆಡ್ಡಿ, ಡಿಎಚ್ಓ ಡಾ. ಜಗದೀಶ್ ನುಚ್ಚಿನ ಜೊತೆ ಮಾತನಾಡಿ ಡಯಾಲಿಸ್ ವ್ಯವಸ್ಥೆ ಮಾಡಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ತಡರಾತ್ರಿ ಬಾಲಕ ಸಾವನ್ನಪ್ಪಿದ್ದಾನೆ.

ಗದಗ: ಕರುಳ ಬಳ್ಳಿ ಉಳಿಸಿಕೊಳ್ಳಲು ತಾಯಿಯ ಹೋರಾಟ ವ್ಯರ್ಥ; ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕ ಸಾವು
ಸಾಂದರ್ಭಿಕ ಚಿತ್ರ
Follow us on

ಗದಗ: ಹೆತ್ತ ಕಂದಮ್ಮನನ್ನು ಉಳಿಸಿಕೊಳ್ಳಲು ತಾಯಿ ನಡೆಸಿದ ಹೋರಾಟ ವ್ಯರ್ಥ ಎಂಬಂತ್ತಾಗಿದೆ. ಕಿಡ್ನಿ ಸಮಸ್ಯೆಯಿಂದ (Kidney disease) ಬಳಲುತ್ತಿದ್ದ ಚನ್ನಯ್ಯ(11) ಎಂಬ ಬಾಲಕ ಇಂದು (ನವೆಂಬರ್ 14) ಮೃತಪಟ್ಟಿದ್ದಾನೆ. ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಹಡಗಲಿ ಗ್ರಾಮದ ಮಗುವಿನ ಕರುಣಾಜನಕ ಕಥೆ ಇದಾಗಿದ್ದು, ಚಿಕಿತ್ಸೆ ಫಲಿಸದೆ ಜಿಮ್ಸ್‌ನಲ್ಲಿ ಚನ್ನಯ್ಯ ಅಲಿಯಾಸ್ ಕಿರಣ ಬೆಟದೂರ ಸಾವನ್ನಪ್ಪಿದ್ದಾನೆ. 5 ತಿಂಗಳ ಮಗುವಿದ್ದಾಗಿನಿಂದಲೂ ಕಿಡ್ನಿ ಸಮಸ್ಯೆ ಇತ್ತು. ಬಡತನದ ನಡುವೆಯೂ ಮಗು ಬದುಕಿಸಿಕೊಳ್ಳಲು ಸರ್ವ ಪ್ರಯತ್ನವನ್ನು ಚನ್ನಯ್ಯನ ತಾಯಿ ಮಾಡಿದ್ದರು. ಆದರೆ ತಾಯಿಯ ಆಸೆ ಕೊನೆಗೂ ಈಡೇರಲೇ ಇಲ್ಲ ಎನ್ನುವಂತಾಗಿದೆ.

ಪತಿಯನ್ನು ಕಳೆದುಕೊಂಡ ಈರಮ್ಮ ಬೆಟದೂರ, ಕಂದನನ್ನು ಉಳಿಸಿಕೊಳ್ಳಲು ಬಂಗಾರ- ಒಡವೆ ಮಾರಿ ಚನ್ನಯ್ಯನಿಗೆ ಚಿಕಿತ್ಸೆ ಕೊಡಿಸುತ್ತಿದ್ದರು. ಇನ್ನು ಅನೇಕ ಕಡೆ ಚಿಕಿತ್ಸೆಗೆ ಸಾಲ ಕೂಡ ಮಾಡಿದ್ದರು, ಆದರೆ ಡಯಾಲಿಸ್ ಮಾಡಿಸಲು ತಾಯಿ ಪರದಾಡಬೇಕಾಯಿತು. ವಾರಕ್ಕೆ ಎರಡು ಬಾರಿ ಡಯಾಲಿಸ್ ಮಾಡದಿದ್ದರೆ ಚನ್ನಯ್ಯನ ಜೀವಕ್ಕೆ ಅಪಾಯ ಎಂದು ವೈದ್ಯರು ಹೇಳಿದ್ದರು. ಆದರೆ ಒಂದು ವಾರವಾದರೂ ಡಯಾಲಿಸ್ ಮಾಡಿಸಲಾಗದೆ ತಾಯಿ ಒದ್ದಾಟ ನಡೆಸಿದ್ದಾರೆ.

ನಿನ್ನೆ ಬಾಲಕನ ಮನೆಗೆ ಭೇಟಿ ನೀಡಿದ ಟಿವಿ9 ತಂಡ, ಡಯಾಲಿಸ್ ಮಾಡದ ಕಾರಣ ಬಾಲಕನ ನರಳಾಟ ಕಂಡು ತಕ್ಷಣ ಜಿಮ್ಸ್ ನಿರ್ದೇಶಕ ಡಾ. ಪಿ. ಎಸ್. ಭೂಸರೆಡ್ಡಿ, ಡಿಎಚ್ಓ ಡಾ. ಜಗದೀಶ್ ನುಚ್ಚಿನ ಜೊತೆ ಮಾತನಾಡಿ ಡಯಾಲಿಸ್ ವ್ಯವಸ್ಥೆ ಮಾಡಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ತಡರಾತ್ರಿ ಬಾಲಕ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ:
ದಾವಣಗೆರೆ: ನೀರಿನ ತೊಟ್ಟಿಯಲ್ಲಿ ಮುಳುಗಿ 6 ವರ್ಷದ ಬಾಲಕ ಸಾವು; ಕಟ್ಟಡ ಮಾಲೀಕರ ವಿರುದ್ಧ ಸಂಬಂಧಿಕರ ಆಕ್ರೋಶ

ಬೆಳಗಾವಿ: 2 ವರ್ಷದ ಹೆಣ್ಣು ಮಗು ಬಿಸಾಡಿದ ಪ್ರಕರಣ; ಚಿಕಿತ್ಸೆ ಫಲಿಸದೆ ಮಗು ಸಾವು