ಐತಿಹಾಸಿಕ ಕೆರೆ ಅಕ್ಕಪಕ್ಕ ಅಕ್ರಮ ಕಟ್ಟಡಗಳ ನಿರ್ಮಾಣ; ಕುರುಡು ಕಾಂಚಾಣಕ್ಕೆ ಅಧಿಕಾರಿಗಳು ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ್ರಾ?
ಗದಗ ನಗರದ ಐತಿಹಾಸಿಕ ಭೀಷ್ಮ ಕೆರೆ ಸುತ್ತಲೂ ಬೃಹತ್ ಅಕ್ರಮ ಕಟ್ಟಡಗಳು ತಲೆ ಎತ್ತಿವೆ. ಕೆರೆ ಪ್ರಾಧಿಕಾರದ ಕಾನೂನು ಗಾಳಿಗೆ ತೂರಿ ನಗರಸಭೆ ಆಡಳಿತ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದೆ. ಕೆರೆ ಪ್ರಾಧಿಕಾರ ನಿಯಮ ಪ್ರಕಾರ ಕೆರೆ ಏರಿಯಿಂದ 200 ಮೀಟರ್ ಯಾವುದೇ ಕಟ್ಟಡಗಳು ನಿರ್ಮಾಣ ಮಾಡುವಂತಿಲ್ಲ. ಅನುಮತಿ ನೀಡುವಂತಿಲ್ಲ. ಆದ್ರೆ, ಪ್ರಭಾವಿಗಳು ಪ್ರಾಧಿಕಾರದ ಕಾನೂನು ಗಾಳಿಗೆ ತೂರಿ ಕೆರೆ ಅಕ್ಕಪಕ್ಕದಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಕೆರೆ ರಕ್ಷಣೆ ಮಾಡಬೇಕಾದ ಅಧಿಕಾರಿಗಳು ಕರುಡು ಕಾಂಚಾಣಕ್ಕೆ ಬಲಿಯಾಗಿದ್ದಾರೆಯೆಂದು ಅವಳಿ ನಗರದ ಜನರು ಆರೋಪಿಸಿದ್ದು, ತಕ್ಷಣವೇ ತೆರವು ಮಾಡಿ ಕೆರೆ ಉಳಿಸಬೇಕೆಂದು ಒತ್ತಾಯಿಸಿದ್ದಾರೆ.

ಗದಗ: ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾಕ್ಕೆ ಎಷ್ಟೋ ಕೆರೆಗಳು ಮಾಯವಾಗುತ್ತಿವೆ. ಹೀಗಾಗಿ ಜಲಮೂಲಗಳ ಉಳಿಸಿಕೊಳ್ಳಲು ಕೆರೆ ಪ್ರಾಧಿಕಾರವನ್ನ ಸ್ಥಾಪನೆ ಮಾಡಲಾಗಿದೆ. ಆದ್ರೆ, ಕೆರೆ ಪ್ರಾಧಿಕಾರದ ಕಾನೂನು ಉಲ್ಲಂಘಸಿ ಅಧಿಕಾರಿಗಳು ಕೆರೆ ಅಕ್ಕಪಕ್ಕ ಎಗ್ಗಿಲ್ಲದೇ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುತ್ತಿದ್ದಾರೆ. ಹೌದು ಇಂಥದೊಂದು ಘಟನೆ ಗದಗ (Gadag) ನಗರದಲ್ಲಿ ನಡೆದಿದೆ. ನಗರದ ಹೃದಯ ಭಾಗದಲ್ಲಿ ಐತಿಹಾಸಿಕ ಭೀಷ್ಮ ಕೆರೆ ಇದೆ. ಐದಾರು ವರ್ಷಗಳಿಂದ ಈ ಕೆರೆ ತುಂಬಿ ತುಳುಕುತ್ತಿದೆ. ಹೀಗಾಗಿ ಅವಳಿ ನಗರದ ಜನರ ನೀರಿನ ಬವಣೆ ನೀಗಿಸಿದ ಪುಣ್ಯ ಈ ಕೆರೆಗೆ ಸಲ್ಲುತ್ತೆ. ಆದ್ರೆ, ಈಗ ಈ ಐತಿಹಾಸ ಭೀಷ್ಮ ಕೆರೆ ಸುತ್ತಮುತ್ತ ಹಲವು ವರ್ಷಗಳಿಂದ ಕಾನೂನು ಉಲ್ಲಂಘಿಸಿ ಕಟ್ಟಡಗಳು ನಿರ್ಮಾಣ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಹೌದು ಕೆರೆ ಪ್ರಾಧಿಕಾರ ಕಾನೂನು ಪ್ರಕಾರ ಕೆರೆ ಏರಿಯಿಂದ 200 ಮೀಟರ್ ಬಫರ್ ಝೂನ್ ಅಂತ ಘೋಷಣೆ ಮಾಡಲಾಗಿದೆ. ಹೀಗಾಗಿ ಈ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಆದ್ರೆ, ಗದಗಿನ ಭೀಷ್ಮ ಕೆರೆ ಏರಿ ಸುತ್ತಮುತ್ತ ನಾಯಿಕೊಡೆಗಳಂತೆ ಕಟ್ಟಡಗಳು ನಿರ್ಮಾಣ ಮಾಡಲಾಗುತ್ತಿದೆ. ಇದು ಗದಗ-ಬೆಟಗೇರಿ ಅವಳಿ ನಗರದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಭಾವಿಗಳು ಕೆರೆ ಪ್ರಾಧಿಕಾರ ಕಾನೂನಿಗೆ ಡೋಂಟ್ ಕೇರ್ ಅಂತಿದ್ದಾರೆ. ಅಧಿಕಾರಿಗಳು ಕೂಡ ಕಾನೂನು ಉಲ್ಲಂಘಿಸಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುತ್ತಿದ್ದಾರೆ. ಇದರ ಹಿಂದೆ ಕುರುಡು ಕಾಂಚಾಣದ ಕೈವಾಡವಿದೆಯೆಂದು ಜನರು ಆರೋಪಿಸಿದ್ದಾರೆ. ಕಟ್ಟಡಗಳು ತೆರವು ಮಾಡಿ ಕೆರೆ ಉಳಿಸಿ ಅಂತಿದ್ದಾರೆ.
ಎಂಥಾ ಪ್ರಭಾವಿಗಳೇ ಇರಲಿ ಕೆರೆ ಪ್ರಾಧಿಕಾರದ ಕಾನೂನು ಉಲ್ಲಂಘನೆ ಮಾಡಿ ನಿರ್ಮಾಣ ಮಾಡಿರುವ ಕಟ್ಟಡಗಳು ತೆರವು ಮಾಡಬೇಕೆಂದು ಅವಳಿ ನಗರದ ಜನರು ಒತ್ತಾಯಿಸಿದ್ದಾರೆ. ಭೀಷ್ಮ ಕೆರೆ ಏರಿಯಲ್ಲಿ ನಿರ್ಮಾಣ ಮಾಡಿರುವ ಕಟ್ಟಡಗಳು ಬಹುತೇಕ ಪ್ರಭಾವಿ ವ್ಯಕ್ತಿಗಳಿಗೆ ಸೇರಿವೆ ಎನ್ನಲಾಗಿದೆ. ಹೀಗಾಗಿ ನಗರಸಭೆ ಅಧಿಕಾರಿಗಳಿಗೆ ಲಂಚ ನೀಡಿ ಕಟ್ಟಡ ಅನುಮತಿ ಪಡೆದಿದ್ದಾರೆಂದು ಜನರು ಆರೋಪಿಸಿದ್ದಾರೆ. ಕೆರೆ ಏರಿಯಲ್ಲಿ ವಿಶಾಲ್ ಮಾರ್ಟ್ನ ನೆಲಮಹಡಿ ಸೇರಿ ಮೂರು ಅಂತಸ್ತು, ಲೇಕ್ ವಿವ್ ಹೋಟೆಲ್, ಆಸ್ಪತ್ರೆ ಸೇರಿ ಹಲವಾರು ಕಟ್ಟಡಗಳು ನಿರ್ಮಾಣ ಮಾಡಲಾಗಿದೆ. ಈ ಎಲ್ಲ ಕಟ್ಟಡಗಳು ಕೆರೆ ಪ್ರಾಧಿಕಾರದ ನಿಯಮಗಳನ್ನು ಸ್ಪಷ್ಟ ಉಲ್ಲಂಘನೆ ಮಾಡಿವೆ. ನಗರಸಭೆ ಸರ್ವೆ ಪ್ರಕಾರ 101 ಕಟ್ಟಡಗಳು ಕೆರೆಯ ಬಫರ್ ಝೂನ್ ವ್ಯಾಪ್ತಿಯಲ್ಲಿ ಕಾನೂನು ಉಲ್ಲಂಘಿಸಿ ನಿರ್ಮಾಣ ಮಾಡಲಾಗಿದೆಯೆಂದು ಅಧಿಕಾರಿಗಳೇ ಹೇಳಿದ್ದಾರೆ. ಕೆರೆ ಪ್ರಾಧಿಕಾರದ ಪ್ರಕಾರ 200 ಮೀಟರ್ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬಾರದು. ಆದ್ರೆ, ಹಿಂದಿನ ಅಧಿಕಾರಿಗಳು ನೀಡಿದ್ದಾರೆ.
ಬಡವರು ಸಣ್ಣ ಕಟ್ಟಡ ನಿರ್ಮಾಣ ಮಾಡಿದ್ರೆ, ತಕ್ಷಣ ಓಡೋಡಿ ಬಂದು ಕ್ರಮಕ್ಕೆ ಮುಂದಾಗುವ ನಗರಸಭೆ ಅಧಿಕಾರಿಗಳು ಕಾನೂನು ಉಲ್ಲಂಘನೆ ಮಾಡಿ ನಿರ್ಮಾಣ ಮಾಡಿರೋ ಪ್ರಭಾವಿ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಗರಸಭೆ ಅಧಿಕಾರಿಗಳು ಮುಂದಾಗುತ್ತಿಲ್ಲ. ಇದು ಅವಳಿ ನಗರದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ನಗರಸಭೆ ಅಧಿಕಾರಿಗಳು ಕೂಡಲೇ ಕಾನೂನು ಉಲ್ಲಂಘನೆ ಮಾಡಿ ನಿರ್ಮಾಣ ಮಾಡಿರೋ ಕಟ್ಟಡಗಳು ನೆಲಸಮ ಮಾಡಬೇಕು. ಇಲ್ಲದೇ ಹೋದ್ರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚೆರಿಕೆ ನೀಡಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ