ಗದಗ: ಗದಗ ಜಿಲ್ಲೆಯ ರೋಣ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮೇಲ್ಛಾವಣಿ ಕ್ಷಣ ಕ್ಷಣಕ್ಕೂ ಉದುರುತ್ತಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜ್ ಉಪನ್ಯಾಸಕರು ಜೀವ ಭಯದಲ್ಲೇ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡ್ಕೊಂಡು ಪಾಠ ಕೇಳುತ್ತಿದ್ದಾರೆ. ಕಾಲೇಜಿಗೆ ಹೊಸದಾಗಿ ದಾಖಲಾಗಲು ಬಂದ ವಿದ್ಯಾರ್ಥಿಗಳು ಕಾಲೇಜು ಕಟ್ಟಡ ನೋಡಿ ದಂಗಾಗಿದ್ದಾರೆ. ಎಪ್ಪಾ ಇಂಥಾ ಕಟ್ಟಡದಲ್ಲಿ ಕಲಿಯಬೇಕಾ ಅಂತ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಬಿಡಿಎ ಜಾಗದಲ್ಲಿ ಅಕ್ರಮ ಮನೆ ನಿರ್ಮಾಣ; ತೆರವಿಗೆ ತೆರಳಿದ ಅಧಿಕಾರಿಗೆ ಮೂರು ದಿನ ಕಾಲಾವಕಾಶ ಕೇಳಿದ ಶಾಸಕ
ಈ ಕರಿತು TV9 ಜೊತೆ ಮಾತನಾಡಿದ ವಿದ್ಯಾರ್ಥಿಗಳು ಸಿಎಂ ಸರ್ ಬಡ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ತೋರಿಸಿ ಅಂತ TV9 ಮೂಲಕ ಕೈಮುಗಿದು ಬೇಡಿಕೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ ಅವರಿಗೂ ಶಿಕ್ಷಣ ಇಲಾಖೆ ಆಯುಕ್ತರು ಸೇರಿ ಎಲ್ಲರಿಗೂ ಪತ್ರ ಬರೆದರೂ ನಿರ್ಲಕ್ಷವಹಿಸಿದ್ದಾರೆ. ಅಪಾಯಕಾರಿ ಕಾಲೇಜ್ ಕಟ್ಟಡದ ಚಿತ್ರಣ, ವಿಡಿಯೋ ಸಮೇತ ಪತ್ರ ಬರೆದರೂ ಸಿಎಂ ಮತ್ತು ಸಚಿವರು, ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಅಂತ ವಿದ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಗ್ಯಾಂಗ್ ಸೆರೆ
ಕಳೆದ ವರ್ಷ ಎರಡ್ಮೂರು ಬಾರಿ ಮೇಲ್ಛಾವಣಿ ಕುಸಿದಾಗ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ. ಈ ಸರ್ಕಾರಿ ಕಾಲೇಜ್ ನಲ್ಲಿ ಉತ್ತಮ ಶಿಕ್ಷಣ ಇದೆ. ಹೀಗಾಗಿ ವಿದ್ಯಾರ್ಥಿಗಳು ಸಂಖ್ಯೆ ಹೆಚ್ಚಾಗಿದೆ. ಸಿಎಂ, ಸಚಿವರು ಸೇರಿ ಎಲ್ಲರಿಗೂ ಪತ್ರ ಬರೆಯಲಾಗಿದೆ ಏನೂ ಪ್ರಯೋಜನೆ ಆಗಿಲ್ಲ ಅಂತ ಕಾಲೇಜ್ ಪ್ರಾಚಾರ್ಯರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:35 pm, Fri, 3 June 22