Gadag crime: ಪ್ರೇಮ ವಿವಾಹವಾಗಿದ್ದ ವೈದ್ಯೆ ಆತ್ಮಹತ್ಯೆ: ಮಗಳ ಸಾವಿಗೆ ವೈದ್ಯ ಗಂಡನೇ ಕಾರಣ ಅಂತ ಪೋಷಕರ ಆರೋಪ, ನಡೆದಿದ್ದೇನು?
ಗದಗ: ನಿತ್ಯವೂ ಗಂಡ ಹೆಂಡತಿ ಜಗಳ ಆಡ್ತಿದ್ರಂತೆ . ನಿನ್ನೆಯೂ ಜಗಳಾವಾಡಿದ್ದಾರಂತೆ. ಆದ್ರೆ ಗಂಡ ಹೆಂಡತಿ ನಡುವಿನ ಜಗಳ ಪತ್ನಿ ಡಾ. ಗೀತಾ ಸಾವಿನಲ್ಲಿ ಅಂತ್ಯವಾಗಿದೆ. ಸಾವಿನ ಸುದ್ದಿ ತಿಳಿದು ಗೀತಾ ಕುಟುಂಬಸ್ಥರು ಹುಲಕೋಟಿಗೆ ದೌಡಾಯಿಸಿದ್ದಾರೆ. ಮಗಳ ಸಾವಿಗೆ ಪತಿ ಡಾ ಕುಶಾಲನೇ ಕಾರಣ ಅಂತ ಆರೋಪಿಸಿದ್ದಾರೆ.
ಅವರಿಬ್ಬರೂ ವೈದ್ಯರು. ವ್ಯಾಸಂಗ ಮಾಡುವಾಗಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತಂತೆ. ಬಳಿಕ ಇಬ್ಬರು ಮದುವೆಯಾಗಿದ್ದಾರೆ (love marriage). ಇಬ್ಬರು ಸರ್ಕಾರಿ ವೈದ್ಯರಾಗಿದ್ರು. ಸುಂದರ ಸಂಸಾರಕ್ಕೆ ಎರಡು ಮುದ್ದಾದ ಮಕ್ಕಳಿದ್ರು. ಆದ್ರೆ ಯಾರ ವಕ್ರದೃಷ್ಠಿ ಬಿತ್ತೋ ಗೋತ್ತಿಲ್ಲ. ಪದೇ ಪದೇ ಗಂಡ ಹೆಂಡತಿ ನಡುವೆ ಜಗಳ ಆಗ್ತಾಯಿತ್ತು. ಆದ್ರೆ, ಇವತ್ತು ಗುರುವಾರ ಹೆಂಡತಿ ಸಾವಿನಲ್ಲಿ ಜಗಳ ಅಂತ್ಯವಾಗಿದೆ. ಆದ್ರೆ, ಗಂಡನೇ ಕೊಂದಿದ್ದಾನೆ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ಮನೆಯಲ್ಲಿ ವೈದ್ಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ( suicide) ಮಾಡಿಕೊಂಡಿದ್ದಾಳೆ. ವೈದ್ಯೆಯ ಸಾವಿನ ಸುತ್ತ ಹತ್ತಾರು ಅನುಮಾನ ಮೂಡುತ್ತಿವೆ. ಕುಟುಂಬಸ್ಥರ ಆಕ್ರೋಶ, ಕಣ್ಣೀರು. ಪೊಲೀಸರ ಪರಿಶೀಲನೆ. ಹೌದು ಈ ಎಲ್ಲ ದೃಶ್ಯಗಳು ಕಂಡಿದ್ದು, ಗದಗ ತಾಲೂಕಿನ (Gadag) ಹುಲಕೋಟಿ (hulkoti) ಗ್ರಾಮದಲ್ಲಿ.
ಹುಲಕೋಟಿ ಗ್ರಾಮದ ಮನೆಯಲ್ಲಿ ಸರ್ಕಾರಿ ವೈದ್ಯೆ ಡಾ. ಗೀತಾ ಕೋರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು ಎಂದು ವಿಷಯ ಹುಲಕೋಟಿ ಗ್ರಾಮದಲ್ಲಿ ಹಬ್ಬುತ್ತಿದ್ದಂತೆ ನೂರಾರು ಜನ್ರು ಜಮಾಯಿಸಿದ್ರು. ಅಂದ್ಹಾಗೆ ಬಿಎಎಂಎಸ್ ಮುಗಿಸಿದ್ದ ಡಾ. ಗೀತಾ ಗದಗನಲ್ಲಿ (ಆರ್‌ಬಿಎಸ್‌ಕೆ) ರಾಷ್ಟ್ರೀಯ ಬಾಲ ಸಾಂಸ್ಥೆ ಕಾರ್ಯಕ್ರಮದ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಪತಿ ಡಾ. ಕುಶಾಲ್ ಕೋರಿ ಬಿಎಎಂಎಸ್ ಗದಗ ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಆಯುಷ್ಯ ಇಲಾಖೆ ವೈದ್ಯಾಧಿಕಾರಿ ಆಗಿ ಸೇವೆ ಮಾಡ್ತಾಯಿದ್ದಾರೆ. ಡಾ. ಗೀತಾ ಮತ್ತು ಡಾ. ಕುಶಾಲ್ ಇಬ್ಬರೂ ಫ್ರೇಂಡ್ಸ್. ಗೆಳೆತನ ಪ್ರೀತಿಗೆ ತಿರುಗಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರಂತೆ. ಬಳಿಕ ಮದುವೆಯಾಗಿದ್ದಾರೆ. ಸುಂದರ ಸಂಸಾರ ಮಾಡಿದ್ದಾರೆ. ಸುಂದರ ಸಂಸಾರಕ್ಕೆ ಎರಡು ಕಣ್ಣುಗಳಿದ್ದಂತೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದ್ರೆ ಇತ್ತಿಚೀಗೆ ಅದ್ಯಾಕೋ ಇಬ್ಬರ ನಡುವೆ ವಿರಸ ಉಂಟಾಗಿತ್ತಂತೆ.
Also Read: ಪುರುಷರು ತಾವು ಪ್ರೀತಿಸಿದವರನ್ನು ಮದುವೆಯಾಗುತ್ತಾರಾ? ಇಲ್ಲವಾ? ಶುರುವಾಗಿದೆ ಹೊಸ ಚರ್ಚೆ
ಹೀಗಾಗಿ ನಿತ್ಯವೂ ಗಂಡ ಹೆಂಡತಿ ನಡುವೆ ಜಗಳ ಆಗ್ತಾಯಿತ್ತಂತೆ. ನಿನ್ನೆಯೂ ಸಾಕಷ್ಟು ಜಗಳಾವಾಡಿದ್ದಾರಂತೆ. ಆದ್ರೆ ಈಗ ಗಂಡ ಹೆಂಡತಿ ನಡುವಿನ ಜಗಳ ಪತ್ನಿ ಡಾ. ಗೀತಾ ಸಾವಿನಲ್ಲಿ ಅಂತ್ಯವಾಗಿದೆ. ಸಾವಿನ ಸುದ್ದಿ ತಿಳಿದು ಗೀತಾ ಕುಟುಂಬಸ್ಥರು ಹುಲಕೋಟಿಗೆ ದೌಡಾಯಿಸಿದ್ದಾರೆ. ಮಗಳ ಸಾವಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗಳ ಸಾವಿಗೆ ಪತಿ ಡಾ ಕುಶಾಲನೇ ಕಾರಣ ಅಂತ ಆರೋಪಿಸಿದ್ದಾರೆ.
ಮಗಳ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪುಷ್ಠಿ ಎಂಬಂತೆ ಗೋಡೆ ಮೇಲಿನ ಬರಹ ಸಾಕಷ್ಟು ಅನುಮಾನ ಹುಟ್ಟಿಸಿದೆ. ಸಾವಿನ ಬಗ್ಗೆ ಬರೆದು ಯುವ ವೈದ್ಯೆ ನೇಣಿಗೆ ಶರಣಾಗಿದ್ದಾಳೆ. ಆದ್ರೆ, ಪತಿ ಡಾ ಕುಶಾಲ್ ಕೊಲೆ ಮಾಡಿದ್ದಾನೆ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ಗೋಡೆಯ ಮೇಲೆ ಸಾವಿನ ಬಗ್ಗೆ ಬರಹವಿದ್ದು, ಅದನ್ನು ಬರೆದವರು ಯಾರು ಎಂಬ ಮಾಹಿತಿ ಲಭ್ಯವಾಗಿಲ್ಲ.
ಗದಗ ಗ್ರಾಮೀಣ ಪೊಲೀಸ್ರು ಸಾವಿನ ಬಗ್ಗೆ ತನಿಖೆ ನಡೆಸಿದ್ದಾರೆ. ವೈದ್ಯೆಯ ಸಾವು ಆತ್ಮಹತ್ಯೆಯೋ.. ಕೊಲೆಯೋ ಅಂತ ಪೊಲೀಸ್ ತನಿಖೆಯಿಂದ ಬಯಲಾಗಬೇಕಿದೆ. ಆದ್ರೆ, ಇಬ್ಬರೂ ವೈದ್ಯರಾಗಿದ್ದವರು, ಕಲಿತವರು, ತಿಳಿದವರಾಗಿದ್ರು. ಇಬ್ಬರೂ ತಮ್ಮ ಮುದ್ದಾದ ಮಕ್ಕಳ ಬಗ್ಗೆ ವಿಚಾರ ಮಾಡಿಲ್ಲ. ಗಂಡ ಹೆಂಡತಿ ಜಗಳ ಈಗ ಪತ್ನಿಯ ಸಾವಿನಲ್ಲಿ ಅಂತ್ಯವಾಗಿದೆ. ಆದ್ರೆ, ಏನೂ ಅರಿಯದ, ತಪ್ಪು ಮಾಡದ ಇಬ್ಬರು ಮಕ್ಕಳು ಅನಾಥವಾಗಿರುವುದು ವಿಪರ್ಯಾಸವೇ ಸರಿ.
ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ