No Bus: ದ್ಯಾಮುಣಸಿ ಗ್ರಾಮ ಹುಟ್ಟಿದಾಗಿನಿಂದಲೂ ಸರ್ಕಾರಿ ಕೆಂಪು ಬಸ್ ಕಂಡಿಲ್ಲ, ಗ್ರಾಮದ ಯುವಕರಿಗೆ ಹೆಣ್ಣು ಕೊಡ್ತಿಲ್ಲ

Dyamunisi Village: ದ್ಯಾಮುಣಸಿ ಗ್ರಾಮದಲ್ಲಿ ಸುಮಾರು ಸಾವಿರ ಜನಸಂಖ್ಯೆಯಿದೆ. ಸೂಡಿ ಗ್ರಾಮದಿಂದ ಕೇವಲ ಒಂದೂವರೆ ಕಿಲೋ ಮೀಟರ್ ದೂರವಿದೆ. ರಸ್ತೆ ಕೂಡ ಚೆನ್ನಾಗಿದೆ. ಹೀಗಾಗಿ ಶಾಲೆ ಮಕ್ಕಳ ಭವಿಷ್ಯಕ್ಕಾದ್ರೂ ಬಸ್ ಸಂಚಾರ ಕಲ್ಪಿಸಿ ಅಂತಿದ್ದಾರೆ.

No Bus: ದ್ಯಾಮುಣಸಿ ಗ್ರಾಮ ಹುಟ್ಟಿದಾಗಿನಿಂದಲೂ ಸರ್ಕಾರಿ ಕೆಂಪು ಬಸ್ ಕಂಡಿಲ್ಲ, ಗ್ರಾಮದ ಯುವಕರಿಗೆ ಹೆಣ್ಣು ಕೊಡ್ತಿಲ್ಲ
ದ್ಯಾಮುಣಸಿ ಗ್ರಾಮ ಹುಟ್ಟಿದಾಗಿನಿಂದಲೂ ಈ ಊರಿಗಿಲ್ಲ ಸರ್ಕಾರಿ ಬಸ್
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಸಾಧು ಶ್ರೀನಾಥ್​

Updated on: Jun 12, 2023 | 10:30 AM

ಸ್ವಾತಂತ್ರ್ಯ ದೊರೆತು 75 ವರ್ಷಗಳೇ ಕಳೆದ್ರೂ ಆ ಗ್ರಾಮಕ್ಕೆ ಇನ್ನೂ ಸರ್ಕಾರಿ ಬಸ್ ಸಂಚಾರ ಮಾಡಿಲ್ಲ. ಮಳೆ, ಬಿಸಿಲು, ಚಳಿ ಎನ್ನದೇ ವಿದ್ಯಾರ್ಥಿಗಳು ಕಿಲೋ ಮೀಟರ್ ಗಟ್ಟಲೆ ನಡೆಯಬೇಕು. ಅನಾರೋಗ್ಯ ಪೀಡಿತರ ಸ್ಥಿತಿ ದೇವರಿಗೆ ಪ್ರೀತಿ. ಇಷ್ಟೆಲ್ಲಾ ಗೋಳಾಟ ಒಂದು ಕಡೆಯಾದ್ರೆ, ಮದುವೆ ವಯಸ್ಸಿನ ಯುವಕರು, ಯುವತಿಯರ ಚಿಂತೆ ಮತ್ತೊಂದು ಕಡೆ… ಪೊಷಕರಿಗಂತೂ ಮಕ್ಕಳ ಮದುವೆ ಮಾಡುವ ಚಿಂತೆ. ಹೌದು ಆ ಊರಿಗೆ ಬಸ್ ಬರಲ್ಲವಂತೆ (no bus) ಅಂತಾ ಆ ಊರಿನ ಗಂಡು ಮಕ್ಕಳಿಗೆ ಹೆಣ್ಣು ಕೊಡ್ತಿಲ್ಲ ಎಂದು ಮಹಿಳೆಯರು ಗೋಳಾಡುತ್ತಾರೆ ಹೌದು ಇದು ಬಸ್ ಇಲ್ಲದ ಊರಿನ ಗಂಡುಮಕ್ಕಳಿಗೆ ಹೆಣ್ಣು ಸಿಗದ ಊರಿನ ಕಥೆ! ಗ್ರಾಮ ಹುಟ್ಟಿದಾಗಿನಿಂದಲೂ ಈ ಊರಿಗಿಲ್ಲ ಸರ್ಕಾರಿ ಬಸ್! ಬಸ್ ಇಲ್ಲದ ಊರು ಅಂತ ಹೆಣ್ಣು ಕೊಡ್ತಿಲ್ಲ ಪೊಷಕರ ಗೋಳಾಟ…! ಬಸ್ ಸೌಕರ್ಯ ಒದಗಿಸುವಂತೆ ತಾಯಂದಿರ ಒಕ್ಕೂರಲಿನ ಒತ್ತಾಯ…! ಬಸ್ ಇಲ್ಲದ ಗ್ರಾಮದಲ್ಲಿ ಯುವಕರು, ಯುವತಿಯರ ಪರದಾಟ…! ಬಸ್ ಸೌಕರ್ಯ ಒದಗಿಸಿ ನಮ್ಮ ಮಕ್ಕಳ ಭವಿಷ್ಯಕ್ಕೆ ಅನುಕೂಲ ಮಾಡಿ ಅಂತ ಮಹಿಳೆಯರ ಒತ್ತಾಯ. ನಮ್ಮೂರಿಗೆ ಬಸ್ ಇಲ್ಲ ಅಂತ ಮಕ್ಕಳಿಗೆ ಹೆಣ್ಣು ಕೊಡ್ತಿಲ್ಲ. ಹೀಗಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಅಂತ ಮಹಿಳೆಯರ ಒತ್ತಾಯ. ಎಸ್. ಈ ದೃಶ್ಯಗಳು ಕಂಡಿದ್ದು, ಗದಗ ಜಿಲ್ಲೆಯ ಗಜೇಂದ್ರಗಡ (Gajendragad) ತಾಲೂಕಿನ ದ್ಯಾಮುಣಸಿ ಗ್ರಾಮದಲ್ಲಿ (Dyamunisi village).

ಈ ಗ್ರಾಮಕ್ಕೆ ಸ್ವಾತಂತ್ರ್ಯ ಪೂರ್ವದಿಂದಲೂ ಬಸ್ ಸೌಲಭ್ಯವಿಲ್ಲ. ಈ ಗ್ರಾಮವು ಸರ್ಕಾರಿ ಕೆಂಪು ಬಸ್ಸೇ ಕಂಡಿಲ್ಲ. ಇಲ್ಲಿನ ಮಕ್ಕಳು ಹಿರಿಯ ಪ್ರಾಥಮಿಕ, ಹೈಸ್ಕೂಲ್​, ಕಾಲೇಜ್ ಕಲಿಯಬೇಕಾದ್ರೆ ಮೂರ್ನಾಲ್ಕು ಕಿಲೋ ಮೀಟರ್ ನಡೆದೇ ಹೋಗಬೇಕು. ಮಳೆ, ಚಳಿ, ಬಿಸಿಲು ಎನ್ನದೇ ಮಕ್ಕಳು ನಡೆದುಕೊಂಡು ಶಾಲೆ, ಕಾಲೇಜ್ ಗೆ ಹೋಗುವ ಸ್ಥಿತಿ ಇದೆ.

ಮಳೆಗಾಲದಲ್ಲಿ ಮಕ್ಕಳು ಶಾಲೆ ಹೋಗಿ ಮನೆಗೆ ವಾಪಸ್ ಬರೋವರೆಗೂ ಪೋಷಕರ ಎದೆಯಲ್ಲಿ ಢವಢವ. ಮಳೆಯಲ್ಲಿ ಮಕ್ಕಳು ಸಿಲುಕ್ತಾರೋ ಏನಾಗುತ್ತೋ ಅನ್ನೋ ಆತಂಕ. ಯಾಕಂದ್ರೆ ಗ್ರಾಮದ ಬಳಿ ಹಳ್ಳ ಇದೆ. ಮಳೆ ಬಂದ್ರೆ ಉಕ್ಕಿ ಹರಿಯುತ್ತೆ. ಹೀಗಾಗಿ ಪೋಷಕರಿಗೆ ಭಯ. ಇದು ಒಂದು ಸಮಸ್ಯೆಯಾದ್ರೂ ಇದಕ್ಕಿಂತಲೂ ದೊಡ್ಡ ಸಮಸ್ಯೆ ಅಂದ್ರೆ ಯುವಕರಿಗೆ ಮದುವೆ ಮಾಡುವುದು. ಈ ಗ್ರಾಮಕ್ಕೆ ಬಸ್ ಇಲ್ಲದ ಊರು ಅಂತ ಈ ಗ್ರಾಮದ ಯುವಕರಿಗೆ ಹೆಣ್ಣೆ ಕೊಡ್ತಿಲ್ವಂತೆ. ಹೀಗಾಗಿ ಮಕ್ಕಳು ಮದುವೆಗೆ ಬಂದ್ರೆ ಪೋಷಕರಿಗೆ ಮದುವೆ ಮಾಡೋದೆ ದೊಡ್ಡ ಚಿಂತೆ ಅಂತ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.

ದ್ಯಾಮುಣಸಿ ಅಂದ್ರೆ ಸಾಕು ಯಪ್ಪಾ ಬೇಡ, ಈ ಊರಿಗೆ ಬಸ್ ಇಲ್ಲ-ಬೀಗತನವೂ ಬೇಡ ಅಂತಿದ್ದಾರಂತೆ. ಸಂಚಾರ ಸಮಸ್ಯೆಯಿಂದ ಗ್ರಾಮಕ್ಕೆ ಬೀಗರು ಬರೋದು ಅಷ್ಟಕ್ಕಷ್ಟೇ. ಇಲ್ಲಿ ಮಕ್ಕಳಿಗೆ ಮದುವೆ ಮಾಡಲು ಪೊಷಕರು ಹೆಣಗಾಡುವ ಸ್ಥಿತಿ ಇದೆ. ನಮ್ಮೂರು ಎಲ್ಲಿದೆ ಅಂತಲೇ ಯಾರಿಗೂ ಗೊತ್ತಿಲ್ಲ. ನಮ್ಮ ಊರನ್ನು ಗುರುತಿಸುವ ಕೆಲಸ ಆಗಬೇಕು ಅಂತ ಮಹಿಳೆಯರು ಒತ್ತಾಯಿಸಿದ್ದಾರೆ. ನಮ್ಮೂರಿನ ಹೆಣ್ಣನ್ನು ಮದುವೆಯಾಗುವ ಯುವಕರು ಸಂಚಾರ ಸಮಸ್ಯೆಯಿಂದ ನಮ್ಮೂರಲ್ಲೇ ಮನೆ ಮಾಡಿಕೊಂಡು ಇದ್ದಾರೆ! ಹೀಗಾಗಿ ಬಸ್ ಸೌಕರ್ಯ ಕಲ್ಪಿಸಿ, ಪುಣ್ಯ ಕಟ್ಕೊಳ್ಳಿ ಅಂತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ದ್ಯಾಮುಣಸಿ ಗ್ರಾಮದಲ್ಲಿ ಸುಮಾರು ಸಾವಿರ ಜನಸಂಖ್ಯೆಯಿದೆ. ಸೂಡಿ ಗ್ರಾಮದಿಂದ ಕೇವಲ ಒಂದೂವರೆ ಕಿಲೋ ಮೀಟರ್ ದೂರವಿದೆ. ರಸ್ತೆ ಕೂಡ ಚೆನ್ನಾಗಿದೆ. ಹೀಗಾಗಿ ಶಾಲೆ ಮಕ್ಕಳ ಭವಿಷ್ಯಕ್ಕಾದ್ರೂ ಬಸ್ ಸಂಚಾರ ಕಲ್ಪಿಸಿ ಅಂತಿದ್ದಾರೆ. ಆದ್ರೆ, ಎಂಥಾ ವ್ಯವಸ್ಥೆ ನೋಡಿ. ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಕಳೆದ್ರೂ ನಮ್ಮ ಹಳ್ಳಿಗಳು ಇನ್ನೂ ಕೆಂಪು ಬಸ್ ಕಂಡಿಲ್ಲ ಅಂದ್ರೆ ವಿಪರ್ಯಾಸವೇ ಸರಿ.. ಇನ್ನಾದ್ರೂ ಸರ್ಕಾರ ಎಚ್ಚೆತ್ತುಕೊಂಡು ಈ ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸಿ ಮಕ್ಕಳು, ಯುವಕರ ಭವಿಷ್ಯಕ್ಕೆ ಅನಕೂಲ ಮಾಡಬೇಕಿದೆ.

ಗದಗ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿನ ಕ್ಲಿಕ್  ಮಾಡಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?