ಗದಗ: ಲಾರಿ ಹರಿದು 5 ವರ್ಷದ ಮಗು ಸ್ಥಳದಲ್ಲೇ ದುರ್ಮರಣವನ್ನಪ್ಪಿದ ದಾರುಣ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಲಾರಿ ಹರಿದು ಶಿವಾನಿ (5) ಎಂಬ ಮಗು ಸಾವನ್ನಪ್ಪಿದ್ದಾಳೆ. ಅಪಘಾತದ ಬಳಿಕ ಸ್ಥಳದಲ್ಲೇ ಲಾರಿ ಬಿಟ್ಟು ಚಾಲಕ ಪರಾರಿ ಆಗಿದ್ದಾನೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಘಟನೆಯ ಬೆನ್ನಲ್ಲೇ ರೋಡ್ ಬ್ರೇಕರ್ ಅಳವಡಿಸುವಂತೆ ಗ್ರಾಮಸ್ಥರ ಒತ್ತಾಯ ಕೇಳಿಬಂದಿದೆ. ಹೆದ್ದಾರಿ ತಡೆದು ಕೊರ್ಲಹಳ್ಳಿ ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಲಾಗಿದೆ.
ಬಾವಿಗೆ ಬಿದ್ದಿದ್ದ ಇಬ್ಬರು ಮಕ್ಕಳು ಸಾವು, ತಂದೆ ಪಾರು
ಬಾವಿಗೆ ಬಿದ್ದಿದ್ದ ಇಬ್ಬರು ಮಕ್ಕಳು ಸಾವನ್ನಪ್ಪಿದ ದುರ್ಘಟನೆ ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಗೊಬ್ಬರುವಾಡಿ ಗ್ರಾಮದಲ್ಲಿ ನಡೆದಿದೆ. ಬಾವಿಗೆ ಬಿದ್ದಿದ್ದ ಪ್ರಣತಿ (6), ಶಿವಕುಮಾರ್ (4) ಸಾವನ್ನಪ್ಪಿದ್ದಾರೆ. ತಂದೆ ಶರಣಪ್ಪ ಎಂಬವರನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ಅಸ್ವಸ್ಥ ಶರಣಪ್ಪ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಏಕೆ ಬಾವಿಗೆ ಬಿದ್ದಿದ್ದರು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಮಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಅರ್ಜುನಹಳ್ಳಿ ಬಳಿ ಲಾರಿ ಡಿಕ್ಕಿ, ಬೈಕ್ ಸವಾರರಿಬ್ಬರು ಸಾವು
ಅರ್ಜುನಹಳ್ಳಿ ಬಳಿ ಲಾರಿ ಡಿಕ್ಕಿ ಆಗಿ, ಬೈಕ್ ಸವಾರರಿಬ್ಬರು ಸಾವನ್ನಪ್ಪಿ ಘಟನೆ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಅರ್ಜುನಹಳ್ಳಿ ಎಂಬಲ್ಲಿ ನಡೆದಿದೆ. ರವಿಶಂಕರ್ (31), ಸುರೇಶ್ (44) ಮೃತ ದುರ್ದೈವಿಗಳು. ಮೈಸೂರು ತಾಲೂಕಿನ ಮೇಗಳಾಪುರ ನಿವಾಸಿ ರವಿಶಂಕರ್ ಹಾಗೂ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ನಿವಾಸಿ ಸುರೇಶ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಜೊತೆಯಲ್ಲಿದ್ದ 6 ವರ್ಷದ ಬಾಲಕಿ ಅದೃಷ್ಟವಶಾತ್ ಪಾರಾಗಿದ್ದಾಳೆ. ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ನೆಲಮಂಗಲ: ವಾಹನಗಳ ಬಿಡಿ ಭಾಗಗಳಿದ್ದ ಕಂಪನಿಯಲ್ಲಿ ಕಳ್ಳತನಕ್ಕೆ ಯತ್ನಿಸುವಾಗ ಹಳ್ಳಕ್ಕೆ ಬಿದ್ದ ಕಳ್ಳ
ವಾಹನಗಳ ಬಿಡಿ ಭಾಗಗಳಿದ್ದ ಕಂಪನಿಯಲ್ಲಿ ಕಳ್ಳತನಕ್ಕೆ ಯತ್ನಿಸುವಾಗ ಕಳ್ಳನೊಬ್ಬ ಹಳ್ಳಕ್ಕೆ ಬಿದ್ದ ಕುತೂಹಲಕಾರಿ ಘಟನೆ ನಿಡವಂದ ಬಳಿಯ ಸಿಟ್ರಾಕ್ ಕಂಪನಿಯಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ತ್ಯಾಮಗೊಂಡ್ಲು ಕಾಲೋನಿಯ ಮೂರ್ತಿ (28) ಎಂಬಾತ ಕಳ್ಳತನಕ್ಕೆ ಯತ್ನಿಸುವಾಗ ಹಳ್ಳಕ್ಕೆ ಬಿದ್ದು ಅವಘಡ ಸಂಭವಿಸಿದೆ. ರಂಗಸ್ವಾಮಿ, ಗೋವಿಂದ ಎಂಬ ಮತ್ತಿಬ್ಬರು ಸ್ಥಳದಿಂದ ಪರಾರಿ ಆಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಹಳ್ಳಕ್ಕೆ ಬಿದ್ದಿದ್ದ ಮೂರ್ತಿಯ ರಕ್ಷಣೆ ಮಾಡಲಾಗಿದೆ. ತ್ಯಾಮಗೊಂಡ್ಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆ: ನಿಯಮ ಉಲ್ಲಂಘಿಸಿದವರಿಂದ ದಂಡ ವಸೂಲಿ
ನಗರದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆ ಕೊರೊನಾ ರೂಲ್ಸ್ ಬ್ರೇಕ್ ಮಾಡಿದವರಿಂದ ದಂಡ ವಸೂಲಿ ಮಾಡಲಾಗಿದೆ. ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ಫೈನ್ ವಿಧಿಸಲಾಗಿದೆ. ಕೊರೊನಾ ರೂಲ್ಸ್ ಬ್ರೇಕ್ ಮಾಡಿದ ಹಿನ್ನೆಲೆ 1,541 ಕೇಸ್ ದಾಖಲು ಮಾಡಲಾಗಿದ್ದಯ ನಿಯಮ ಉಲ್ಲಂಘಿಸಿದವರಿಂದ 3ಲಕ್ಷದ 85 ಸಾವಿರದ 250 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿ ಅನಗತ್ಯ ಸಂಚಾರ ಹಿನ್ನೆಲೆ ತುಮಕೂರು ಜಿಲ್ಲೆಯಾದ್ಯಂತ 80 ವಾಹನಗಳು ಸೀಜ್ ಮಾಡಲಾಗಿದೆ. ಕಾರು, ಬೈಕ್, ಆಟೋ ಸೇರಿ 80 ವಾಹನಗಳು ಸೀಜ್ ಮಾಡಲಾಗಿದೆ. ತುಮಕೂರು ಎಸ್ಪಿ ರಾಹುಲ್ ಕುಮಾರ್ ಮಾಹಿತಿ ನೀಡಿದ್ದಾರೆ. ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿ ಅನಗತ್ಯ ಸಂಚಾರ ಹಿನ್ನೆಲೆ, ಚಿತ್ರದುರ್ಗ ಜಿಲ್ಲೆಯಾದ್ಯಂತ 682 ಪ್ರಕರಣಗಳು ದಾಖಲು ಮಾಡಲಾಗಿದೆ. 682 ಕೇಸ್ ದಾಖಲಿಸಿ 68,200 ರೂ. ದಂಡ ವಸೂಲಿ ಮಾಡಲಾಗಿದೆ.
ಇದನ್ನೂ ಓದಿ: Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 12,000 ಜನರಿಗೆ ಕೊರೊನಾ ದೃಢ; 4 ಮಂದಿ ಸಾವು
ಇದನ್ನೂ ಓದಿ: Crime News: ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ, ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಕೊಲೆಗೆ ಯತ್ನ