ಗದಗ: PWD ಇಲಾಖೆಯಲ್ಲಿ 500 ಕೋಟಿ ರೂ. ಹಗರಣ, ಆರೋಪ ತಳ್ಳಿ ಹಾಕಿದ ಮಾಜಿ ಸಚಿವ ಸಿಸಿ ಪಾಟೀಲ್
ಬಿಜೆಪಿ ಸರ್ಕಾರದ ಅವಧಿಯಲ್ಲಿ PWD ಇಲಾಖೆಯಲ್ಲಿ ನರಗುಂದ ಕ್ಷೇತ್ರವೊಂದರಲ್ಲೇ 500 ಕೋಟಿ ಭಾರಿ ಹಗರಣ ನಡೆಸಿರುವ ಗಂಭೀರ ಆರೋಪ ಮಾಜಿ ಸಚಿವ ಸಿಸಿ ಪಾಟೀಲ್ ವಿರುದ್ಧ ಕೇಳಿಬಂದಿದೆ. ಹೀಗಾಗಿ ರಾಜ್ಯ ಸರ್ಕಾರವು ತನಿಖೆಗೆ ಆದೇಶಿಸಿದ್ದು, ಅಕ್ಟೊಬರ್ 11ಕ್ಕೆ ತನಿಖೆ ತಂಡ ನರಗುಂದ ಕ್ಷೇತ್ರಕ್ಕೆ ಆಗಮಿಸಲಿದೆ. ಈ ನಡುವೆ ತಮ್ಮ ವಿರುದ್ಧ ಕೇಳಿಬಂದ ಆರೋಪವನ್ನು ಸಿಸಿ ಪಾಟೀಲ್ ತಳ್ಳಿಹಾಕಿದ್ದಾರೆ.
ಗದಗ, ಅ.9: ಬಿಜೆಪಿ ಸರ್ಕಾರದ ಅವಧಿಯಲ್ಲಿ PWD ಇಲಾಖೆಯಲ್ಲಿ ನರಗುಂದ ಕ್ಷೇತ್ರವೊಂದರಲ್ಲೇ 500 ಕೋಟಿ ಭಾರಿ ಹಗರಣ ನಡೆಸಿರುವ ಗಂಭೀರ ಆರೋಪ ಮಾಜಿ ಸಚಿವ ಸಿಸಿ ಪಾಟೀಲ್ (C.C.Patil) ವಿರುದ್ಧ ಕೇಳಿಬಂದಿದೆ. ಹೀಗಾಗಿ ರಾಜ್ಯ ಸರ್ಕಾರವು ತನಿಖೆಗೆ ಆದೇಶಿಸಿದ್ದು, ಅಕ್ಟೊಬರ್ 11ಕ್ಕೆ ತನಿಖೆ ತಂಡ ನರಗುಂದ ಕ್ಷೇತ್ರಕ್ಕೆ ಆಗಮಿಸಲಿದೆ. ಈ ನಡುವೆ ತಮ್ಮ ವಿರುದ್ಧ ಕೇಳಿಬಂದ ಆರೋಪವನ್ನು ಸಿಸಿ ಪಾಟೀಲ್ ತಳ್ಳಿಹಾಕಿದ್ದಾರೆ.
ಬಂಡಾಯದ ನಾಡಿನಲ್ಲಿ ಕಾಂಗ್ರೆಸ್, ಬಿಜೆಪಿ ಮಾಜಿ ಸಚಿವರ ನಡುವೆ ಹಗರಣದ ಫೈಟ್ ಬಲು ಬಲು ಜೋರಾಗಿದೆ. ಬಿಜೆಪಿ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ನರಗುಂದ ಕ್ಷೇತ್ರದ ಶಾಸಕ ಸಿ ಸಿ ಪಾಟೀಲ್ ಪಾಟೀಲ್ ವಿರುದ್ಧ 500 ಕೋಟಿ ಹಗರಣ ಗಂಭೀರ ಆರೋಪ ಕೇಳಿಬಂದಿದೆ. ಸಿ ಸಿ ಪಾಟೀಲರು PWD ಸಚಿವರಾಗಿದ್ದಾಗ ನರಗುಂದ ಕ್ಷೇತ್ರದಲ್ಲಿ ಸಾವಿರಾರು ಕೋಟಿ ಅಭಿವೃದ್ಧಿ ಕಾಮಗಾರಿ ಮಾಡಿರುವುದಾಗಿ ಹೇಳಿದ್ದರು. ಆದರೆ, ಈಗ ಶಾಸಕ ಸಿಸಿ ಪಾಟೀಲ್ ವಿರುದ್ಧ 500 ಕೋಟಿ ಹಗರಣ ಆರೋಪ ಕೇಳಿ ಬಂದಿದೆ.
ಸಿ ಸಿ ಪಾಟೀಲ್ ಸಚಿರಾಗಿದ್ದಾಗ ಅಧಿಕಾರ ದುರಪಯೋಗ ಮಾಡಿಕೊಂಡು, ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಬೇಕಾದವರಿಗೆ ಕಾಮಗಾರಿ ನೀಡಿದ್ದಾರೆ ಅಂತ ಮಾಜಿ ಸಚಿವ ಬಿಆರ್ ಯಾವಗಲ್ ಆರೋಪ ಮಾಡಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ನಡೆದ ಬಹಯತೇಕ ಕಾಮಗಾರಿಗಳು ಕಳಪೆಯಾಗಿವೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಉದ್ಯೋಗ ಹಗರಣ: ಬಿಜೆಪಿ ಶಾಸಕ ಪಾರ್ಥಸಾರಥಿ ಚಟರ್ಜಿ ಮನೆಯಲ್ಲಿ ಸಿಬಿಐ ಶೋಧ
ನಕಲಿ ವರ್ಕ್ ಡನ್ ಸರ್ಟಿಫಿಕೇಟ್ ನೀಡಿ ಅರ್ಹತೆ ಇಲ್ಲದ ಗುತ್ತಿಗೆದಾರರು ಟೆಂಡರ್ ಪಡೆದಿದ್ದಾರೆ. ಇನ್ನೂ ಕಡಿಮೆ ಮೊತ್ತಕ್ಕೆ ಟೆಂಡರ್ ಹಾಕಿದವರನ್ನು ಬಿಟ್ಟು ಹೆಚ್ಚಿನ ದರಕ್ಕೆ ಹಾಕಿದವರಿಗೆ ಟೆಂಡರ್ ನೀಡಿದ್ದಾರೆ ಎಂದು ಮಾಜಿ ಸಚಿವ ಬಿ ಆರ್ ಯಾವಗಲ್ ಆರೋಪಿಸಿದ್ದಾರೆ. ಈ ಎಲ್ಲ ಹಗರಣ ಬಗ್ಗೆ ಮಾಜಿ ಸಚಿವ ಬಿಆರ್ ಯಾವಗಲ್ ಜೂನ್ 30 ರಂದು ಸಿಎಂ ಸಿದ್ದರಾಮಯ್ಯ ಅವರಿಗೆ ಲಿಖಿತ ದೂರು ನೀಡಲಾಗಿದ್ದು, ಸರ್ಕಾರವು ತನಿಖೆಗೆ ಆದೇಶಿಸಿದೆ.
ಇದೇ ಅಕ್ಟೋಬರ್ 11, 12 ರಂದು ತನಿಖಾ ತಂಡ ನರಗುಂದ ಕ್ಷೇತ್ರಕ್ಕೆ ಆಗಮಿಸಿ ತನಿಖೆ ನಡೆಸಲಿದೆ. 500 ಕೋಟಿ ಹಗರಣ ಮಾಜಿ ಲೋಕೋಪಯೋಗಿ ಇಲಾಖೆ ಸಚಿವ ಸಿ ಸಿ ಪಾಟೀಲರೇ ರೂವಾರಿ ಅಂತ ಯಾವಗಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಬೆಂಗಳೂರ PWD ಗುಣ ಭರವಸೆ ವಲಯ ಮುಖ್ಯ ಇಂಜಿನಿಯರ್ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಿ ಆದೇಶ ಹೊರಡಿಸಿದೆ.
ಒಂದು ತಿಂಗಳೊಳಗೆ ತನಿಖೆ ಮಾಡಿ ವರದಿ ನೀಡುವಂತೆ ತಂಡಕ್ಕೆ ಸರ್ಕಾರ ಸೂಚಿಸಿದೆ. ಹೀಗಾಗಿ ಮಾಜಿ ಸಚಿವ ಸಿ ಸಿ ಪಾಟೀಲ್ ಅವರಿಗೆ ಸಂಕಷ್ಟ ಎದುರಾಗಿದೆ. ನೂರಾರು ಕೋಟಿ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೂ ನಡುಕು ಶುರುವಾಗಿದೆ. ಇನ್ನೂ ಅರ್ಹತೆ ಇಲ್ಲದ ಗುತ್ತಿಗೆದಾರರು ಈಗ ಕಂಗಾಲಾಗಿದ್ದಾರೆ. ಈಗಾಗಲೇ ಸರ್ಕಾರ ನರಗುಂದ ಕ್ಷೇತ್ರದಲ್ಲಿ ಚುನಾವಣೆ ಪೂರ್ವ ನಡೆದ ಕಾಮಗಾರಿಗಳ ಬಿಲ್ ಪೆಂಡಿಂಗ್ ಇರಿಸಿದೆ. ಕಾಮಗಾರಿಗಳ ಅವಶ್ಯಕತೆ, ನಿಯಮಗಳ ಪಾಲನೆ ಗುಣಮಟ್ಟ ಪರಿಶೀಲನೆ ಅಧಿಕಾರ ಹಾಗೂ ಹಣ ದುರುಪಯೋಗದ ಬಗ್ಗೆ ಆರೋಪ ಸಿಸಿ ಪಾಟೀಲ್ ವಿರುದ್ಧ ಕೇಳಿ ಬಂದಿದೆ.
ಆರೋಪ ತಳ್ಳಿಹಾಕಿದ ಸಿಸಿ ಪಾಟೀಲ್
ಚುನಾವಣೆ ಸಂದರ್ಭದಲ್ಲಿ ಗಪ್ ಚುಪ್ ಇದ್ದು, ಕಾಮಗಾರಿ ಆಗಿಲ್ಲ ಅಂತ ಕಾಂಗ್ರೆಸ್ ನಾಯಕರು ಹೇಳಿಲ್ಲ. ಈಗ ಯಾಕೆ ಆರೋಪ ಮಾಡಿದ್ದಾರೆ ಅಂತ ಸಿಸಿ ಪಾಟೀಲರು ಪ್ರಶ್ನೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೂ ನಾನು ಪತ್ರ ಬರೆದಿದ್ದೇನೆ. ನಾನು ಈಗ ಈ ಬಗ್ಗೆ ಏನೂ ಮಾತನಾಡಲ್ಲ. ಎರಡು ದಿನ ಬಿಟ್ಟು ಪ್ರತಿಕಾಗೋಷ್ಠಿ ಮಾಡಿ ಎಲ್ಲ ವಿಷಯ ಹೇಳುತ್ತೇನಿ ಎಂದು ಟಿವಿ9ಗೆ ತಿಳಿಸಿದ್ದಾರೆ.
ಸರ್ಕಾರ ಲೋಕೋಪಯೋಗಿ ಗುಣ ಭರವಸೆ ವಲಯ ಮುಖ್ಯ ಇಂಜಿನಿಯರ್ ನೇತೃತ್ವದಲ್ಲಿ ನಾಲ್ಕು ಜನ ಸದಸ್ಯರ ಅಧಿಕಾರಿಗಳ ತಂಡಕ್ಕೆ ತನಿಖೆಯ ಹೊಣೆ ನೀಡಿದೆ. ಕಾಮಗಾರಿಗಳ ಗುಣಮಟ್ಟದ ತನಿಖೆ ಈ ತಂಡ ಮಾಡಲಿದೆ. ವಿಸ್ತ್ರತವಾದ ತನಿಖೆ ನಡೆಸಿ 30 ದಿನಗಳೊಳಗೆ ವಿವರವಾದ ವರದಿ ನೀಡಲು ಸೂಚನೆ ನೀಡಿದೆ. ಚುನಾವಣೆ ಬಳಿಕವೂ ಹಾಲಿ, ಮಾಜಿ ಶಾಸಕರ ನಡುವೆ ಹಗರಣ ಜಟಾಪಟಿ ನಡೆಸಿದೆ. ಮುಂದೆ ಯಾವ ಹಂತಕ್ಕೆ ತಲುಪುತ್ತೋ ಕಾದು ನೋಡಬೇಕಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:38 pm, Mon, 9 October 23