ಗದಗ: ಭೀಕರ ಬರಕ್ಕೆ ಜನರು ಕಂಗಾಲು: ವರುಣನ ಕೃಪೆಗಾಗಿ ಪರ್ಜನ್ಯ ಯಾಗ
ಗದದ ಜಿಲ್ಲೆಯಲ್ಲಿ ಭೀಕರ ಬರ ತಾಂಡವಾಡುತ್ತಿದೆ. ಬಿತ್ತಿದ ಬೆಳೆಗಳು ಬಿಸಿಲಿ ತಾಪಕ್ಕೆ ಒಣಗಿ ಹೋಗಿವೆ. ಅನ್ನದಾತ ಮತ್ತೆ ಸಂಕಷ್ಟಕ್ಕೆ ಸಿಲುಕಿ ವಿಲವಿಲ ಅಂತಿದ್ದಾನೆ. ಹೀಗಾಗಿ ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಗಂಗಾಧರ ಸಂಗಮ ಗೂರುಜಿ ಸಮ್ಮುಖದಲ್ಲಿ ಮಳೆರಾಯನ ಕೃಪೆಗಾಗಿ ಪರ್ಜನ್ಯ ಯಾಗ ಮಾಡಲಾಗಿದೆ.
ಗದಗ, ಅಕ್ಟೋಬರ್ 08: ಜಿಲ್ಲೆಯಲ್ಲಿ ಭೀಕರ ಬರ (drought) ತಾಂಡವಾಡುತ್ತಿದೆ. ಬಿತ್ತಿದ ಬೆಳೆಗಳು ಬಿಸಿಲಿ ತಾಪಕ್ಕೆ ಒಣಗಿ ಹೋಗಿವೆ. ಅನ್ನದಾತ ಮತ್ತೆ ಸಂಕಷ್ಟಕ್ಕೆ ಸಿಲುಕಿ ವಿಲವಿಲ ಅಂತಿದ್ದಾನೆ. ಹೀಗಾಗಿ ರೈತರು ವರುಣದೇವನ ಕೃಪೆಗಾಗಿ ಪರ್ಜನ್ಯ ಯಾಗದ ಮೊರೆ ಹೋಗಿದ್ದಾರೆ. ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಮಳೆರಾಯನ ಕೃಪೆಗಾಗಿ ಪರ್ಜನ್ಯ ಯಾಗ ಮಾಡಲಾಯಿತು. ಗಂಗಾಧರ ಸಂಗಮ ಗೂರುಜಿ ಸಮ್ಮುಖದಲ್ಲಿ ಯಾಗ ಮಾಡಲಾಗಿದೆ.
ಯಾಗದ ಹಿನ್ನೆಲೆಯಲ್ಲಿ ಶ್ರೀ ಮಾರುತೇಶ್ವರ ದೇವಸ್ಥಾನವನ್ನು ಹೂವು, ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಮಾರುತೇಶ್ವರನಿಗೆ ಕುಂಕುಮ ಪೂಜೆ ಹಾಗೂ ಬಾಳೆಹಣ್ಣಿನ ಪೂಜೆಗಳಿಂದ ವಿಶೇಷವಾಗಿ ಅಲಂಕರಿಸಿ ಪರ್ಜನ್ಯ ಯಾಗ ಮಾಡಲಾಗಿದೆ. ಯಾಗಕ್ಕೆ ಗಂಧದ ಕಟ್ಟಿಗೆ ಗೋವಿನ ತುಪ್ಪ, ಹಾಲು, ಮೊಸರು ಹಾಗೂ ಪಂಚ ನದಿಗಳಿಂದ ತಂದ ಜಲದಿಂದ ಅಗ್ನಿಕೊಂಡವನ ನಿರ್ಮಿಸಿ ಮೂರು ಗಂಟೆಗಳ ಕಾಲ ಮಂತ್ರ ಪಠಿಸುವುದರ ಮೂಲಕ ವರುಣನ ಕೃಪೆಗಾಗಿ ಪರ್ಜನ್ಯ ಯಾಗ ಮಾಡಲಾಯಿತು. ನೂರಾರು ಭಕ್ತರು ಯಾಗದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಗ್ಯಾರಂಟಿಗಳು ಬೇಡ, ಸಾಲ ಮನ್ನಾ ಮಾಡಿ ಎಂದು ಕೇಂದ್ರ ಬರ ಅಧ್ಯಯನ ತಂಡದ ಮುಂದೆ ರೈತ ಮಹಿಳೆಯರ ಅಳಲು
ಈ ಯಾಗವನ್ನು ಕಂಚಿ ಕಾಳ ಹಸ್ತಿ ಗುರುಪೀಠದ ಮಹೇಶ ಜೋಶಿ, ಗಣೇಶ ಘನಪಾಠ ಗೂರುಜಿ, ಯೋಗೇಶ ಜೋಶಿ ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ರಾಮನಗೌಡ ದೇಸಾಯಿ, ಮಲ್ಲಪ್ಪ ಅಂಗಡಿ, ಯಲ್ಲಪ್ಪ ಎಚ್ ಬಾಬರಿ, ಶರಣಪ್ಪ ಜೋಗಿನ ಸಂಗಪ್ಪ ಮಳ್ಳಿ ಬಸಪ್ಪ ಸತ್ಯಪ್ಪನವರ, ಮಾರುತಿ ಕಟಗಿ, ಅರ್ಚಕರಾದ ಚಂದ್ರಶೇಖರ ಪೂಜಾರ, ಶ್ರೀಕಾಂತ ಪೂಜಾರ, ಶಂಕ್ರಪ್ಪ ಪೂಜಾರ, ವೆಂಕಟೇಶ ಪೂಜಾರ ಹಾಗೂ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಗದಗ: ಉಚಿತ ವಿದ್ಯುತ್ ಭರವಸೆ ಈಡೇರಿಸುವಂತೆ ನೇಕಾರರಿಂದ ಒತ್ತಾಯ
ಮಳೆ ಇಲ್ಲದೆ ಬೆಳೆ ನಾಶವಾಗಿದ್ದು ಭೀಕರ ಬರಗಾಲ ಆರಂಭವಾಗಿದೆ. ಸಾಲ ಮಾಡಿ ಹೆಸರು, ಹತ್ತಿ, ಗೋವಿನ ಜೋಳ ಬಿತ್ತನೆ ಮಾಡಲಾಗಿದೆ. ಮಳೆ ಇಲ್ಲದೆ ಬೆಳೆಗಳೆಲ್ಲಾ ಹಾಳಾಗಿದ್ದು ತುಂಬಾ ತೊಂದರೆ ಆಗುತ್ತಿದೆ. ಭೀಕರ ಬರಕ್ಕೆ ರೈತರು ಕಂಗಾಲಾಗಿದ್ದಾರೆ. ಅವರ ಬದುಕು ಚಿಂತಾಜನಕವಾಗಿದೆ. ನಮಗೆ ರಾಜ್ಯ ಸರ್ಕಾರದ ಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆ ಇದ್ಯಾವುದು ಬೇಡ. ಸರ್ಕಾರ ನಮ್ಮ ಸಾಲ ಮನ್ನಾ ಮಾಡಿ, ನಮ್ಮನ್ನು ಬದುಕಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.