ಗದಗ, ಸೆಪ್ಟೆಂಬರ್ 13: ಲವ್ ಜಿಹಾದ್ಗೆ ಬಲಿಯಾಗದಂತೆ ಗಣೇಶನ ಸಮ್ಮುಖದಲ್ಲಿ ಆಣೆ ಪ್ರಮಾಣ ಕಾರ್ಯ ನೆರವೇರಿತು. ಗದಗ ಬೆಟಗೇರಿಯ ಹಿಂದೂ ಯುವತಿಯರು, ಮಹಿಳೆಯರು, ಪೋಷಕರು ದೇವರ ಸಾಕ್ಷಿಯಾಗಿ ಲವ್ ಜಿಹಾದ್ ವಿರುದ್ಧ ಸಮರ ಸೇರಿದ್ದಾರೆ. ಗದಗದ ಬೆಟಗೇರಿಯ ಟರ್ನಲ್ ಪೇಟೆಯಲ್ಲಿ ಕ್ರಾಂತಿ ಸೇನೆ ವತಿಯಿಂದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ. ಗಣೇಶನ ಪ್ರತಿಷ್ಠಾಪನೆ ಅಂಗವಾಗಿ ಹಿಂದೂ ಧರ್ಮ ಜಾಗೃತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಇದೇ ವೇಳೆ, ಹಿಂದೂ ಯುವತಿಯರು ಹಾಗೂ ಮಹಿಳೆಯರು ಲವ್ ಜಿಹಾದ್ಗೆ ಬಲಿಯಾಗದಂತೆ ಜಾಗೃತಿ ಮೂಡಿಸಲಾಯಿತು.
ಹಿಂದೂ ಸಮಾಜದ ಯುವತಿಯರು, ಮಹಿಳೆಯರು ಹಾಗೂ ಅವರ ಪೋಷಕರಿಗೆ ಆಣೆ ಪ್ರಮಾಣ ಮಾಡಿಸಲಾಯಿತು. ಯಾವುದೇ ಕಾರಣಕ್ಕೂ ಲವ್ ಜಿಹಾದ್ಗೆ ಒಳಗಾಗಬಾರದು ಎಂದು ಶ್ರೀ ಗಣೇಶ ಹಾಗೂ ಶ್ರೀ ರಾಮ ಸೇರಿದಂತೆ ದೇರವ ಹೆಸರಿನಲ್ಲಿ ಪ್ರಮಾಣ ಮಾಡಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಯುವತಿಯರು ಲವ್ ಜಿಹಾದ್ಗೆ ಒಳಗಾಗಲ್ಲ ಎಂದು ಪ್ರಮಾಣ ಮಾಡಿದರು.
ಗದಗ ನಗರದಲ್ಲಿ ಈ ಹಿಂದೆ ಲವ್ ಜಿಹಾದ್ ಪ್ರಕರಣ ನಡೆದಿತ್ತು. ಹಾಗೇ ಹುಬ್ಬಳ್ಳಿಯಲ್ಲಿ ಕೂಡಾ ಲವ್ ಜಿಹಾದ್ ನಂತಹ ಪ್ರಕರಣಗಳು ನಡೆದಿದ್ದವು. ಹೀಗಾಗಿ ಹಿಂದೂ ಸಮಾಜದವರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಗೃತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು.
ಇದನ್ನೂ ಓದಿ: ಆಯುಕ್ತರಿಲ್ಲದೇ ಸೊರಗುತ್ತಿದೆ ಗದಗ-ಬೆಟಗೇರಿ ನಗರಸಭೆ: ಬೆಳಗ್ಗೆ ಒಬ್ಬ, ಸಂಜೆ ಇನ್ನೊಬ್ಬ ಅಧಿಕಾರಿ ನೇಮಕ ಮಾಡಿ ಆದೇಶ!
ಶಾಲೆ ಹಾಗೂ ಕಾಲೇಜಿನಲ್ಲಿ ಯುವತಿಯರನ್ನು ಪುಸಲಾಯಿಸಿ ಲವ್ ಜಿಹಾದ ಖೆಡ್ಡಾಕ್ಕೆ ಕೆಡವಲಾಗುತ್ತಿದೆ. ಇಂತಹ ವೇಳೆಯಲ್ಲಿ ಯುವತಿಯರು ಯಾವುದೇ ಭಯ ಇಲ್ಲದೆ, ತಮ್ಮ ಪೋಷಕರಿಗೆ ವಿಷಯವನ್ನು ತಿಳಿಸಬೇಕು. ಹಾಗೇ ಹಿಂದೂ ಸಮಾಜದ ಯುವತಿಯರು ಲವ್ ಜಿಹಾದ್ಗೆ ಬಲಿಯಾಗುತ್ತಿರುವ ವಿಷಯ ಗಮನಕ್ಕೆ ಬಂದರೆ, ಹಿಂದೂ ಸಮಾಜದ ಯುವಕರು ಕೂಡಾ ಅದನ್ನು ತಡೆ ಹಿಡಿಯಬೇಕು, ಆಗ ಮಾತ್ರ ಹಿಂದೂ ಸನಾತನ ಧರ್ಮ ಉಳಿಯಲು ಸಾಧ್ಯ. ಹೀಗಾಗಿ ಕ್ರಾಂತಿ ಸೇನೆ ವತಿಯಿಂದ ಜಾಗೃತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು ಎಂದು ಕ್ರಾಂತಿ ಸೇನೆ ಅಧ್ಯಕ್ಷ ಬಾಬು ಬಾಕಳೆ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ