ಗದಗ: ಲಂಚದ ಆರೋಪ, ಜನತಾ ದರ್ಶನ ವೇಳೆ ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ

| Updated By: Ganapathi Sharma

Updated on: Sep 19, 2024 | 9:32 AM

ಲಂಚ ಪಡೆಯುತ್ತಾರೆ ಎಂಬ ಆರೋಪದಲ್ಲಿ ಗಣಿ ಅಧಿಕಾರಿಯೊಬ್ಬರನ್ನು ಸಚಿವ ಹೆಚ್​​ಕೆ ಪಾಟೀಲ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಗದಗದಲ್ಲಿ ಬುಧವಾರ ನಡೆದ ಜನತಾ ದರ್ಶನ ಕಾರ್ಯಕ್ರಮದ ವೇಳೆ ರೈತರು ಅಧಿಕಾರಿ ವಿರುದ್ಧ ದೂರು ನೀಡಿದರು. ಆಗ ಸಚಿವರು ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡ ವಿಡಿಯೋ ಇಲ್ಲಿದೆ.

ಗದಗ, ಸೆಪ್ಟೆಂಬರ್ 19: ‘ನೀನೇನು ಲಂಚ ತೆಗೆದುಕೊಳ್ಳೋದಕ್ಕೆ ಇಲ್ಲಿದ್ದೀಯಾ? ಹೀಗೆಂದು ಎಚ್​ಕೆ ಪಾಟೀಲ್ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಸಾವಿತ್ರಿಯನ್ನು ತರಾಟೆಗೆ ತೆಗೆದುಕೊಂಡರು. ಗದಗ ಜಿಲ್ಲಾಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾವಿತ್ರಿ ವಿರುದ್ಧ ರೈತರು ದೂರು ಹೇಳಿದರು. ದೂರು ಕೇಳುತ್ತಿದ್ದಂತೆಯೇ ಗರಂ ಆದ ಸಚಿವ ಪಾಟೀಲ, ಅಧಿಕಾರಿಯನ್ನು ತರಾಟೆಗೆ ತೆಗದುಕೊಂಡಿದ್ದಲ್ಲದೆ, ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಡಿಸಿ ಗೋವಿಂದರೆಡ್ಡಿಗೆ ಸೂಚನೆ ನೀಡಿದರು.

ದುಂದೂರು, ಶ್ಯಾಗೋಟಿ, ಚಿಕ್ಕಹಂದಿಗೋಳ ವ್ಯಾಪ್ತಿಯ ರೈತರಿಗೆ ಕೇಸ್ ಹಾಕಿ ಸತಾಯಿಸುತ್ತಿರುವ ಬಗ್ಗೆ ರೈತರು ದೂರು ನೀಡಿದ್ದರು. 30 ವರ್ಷಗಳ ಹಿಂದೆನಡೆದಿದ್ದ ಗಣಿಗಾರಿಗೆ ಬಗ್ಗೆ ಈಗ ಕೇಸ್ ಹಾಕಿರುವ ಬಗ್ಗೆ ಆರೋಪ ವ್ಯಕ್ತವಾಯಿತು. 13 ಸಣ್ಣ ಹಿಡುವಳಿದಾರರ ವಿರುದ್ಧ ಕೇಸ್ ಹಾಕಿದ್ದಕ್ಕೆ ಆಕ್ರೋಶ ವ್ಯಕ್ತವಾಯಿತು. ಲಂಚದ ಆಸೆಗೆ ಕೇಸ್ ದಾಖಲಿಸಿದ್ದಾರೆಂದು ರೈತರೊಬ್ಬರು ದೂರಿದರು. ತಕ್ಷಣವೇ ದೂರುದಾರರ ಎದುರೇ ಅಧಿಕಾರಿ ಸಾವಿತ್ರಿಗೆ ಸಚಿವರು ಕ್ಲಾಸ್ ತೆಗೆದುಕೊಂಡರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ