Kannada News Photo gallery Swami Vivekananda Putthali, the tallest statue in the country, was unveiled at Gadag, Kannada News
ಗದಗದಲ್ಲಿ ದೇಶದಲ್ಲೇ ಅತಿ ಎತ್ತರದ ಸ್ವಾಮಿ ವಿವೇಕಾನಂದ ಪುತ್ಥಳಿ ಅನಾವರಣ!
ಅವರು ಯುವ ಪೀಳಿಗೆಗೆ ಆದರ್ಶವಾದ ಮಹಾನ್ ಚೇತನ. ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಪರಿಚಯ ಮಾಡಿದ ನಾಡಿನ ಸಂತ, ಸ್ವಾಮಿ ವಿವೇಕಾನಂದರ ಪುತ್ಥಳಿ ಲೋಕಾರ್ಪಣೆ ಮಾಡಲಾಗಿದೆ. ಇಡೀ ದೇಶದಲ್ಲೇ ಅತೀ ಎತ್ತರದ ಕಂಚಿನ ಪುತ್ಥಳಿ ಅನಾವರಣ ಮಾಡಲಾಯಿತು. ಈ ಮೂಲಕ ಮುದ್ರಣ ಕಾಶಿ ಗದಗ ಜಿಲ್ಲೆಗೆ ಮತ್ತೊಂದು ಹೆಮ್ಮೆಯ ಗರಿ ಸೇರಿದಂತಾಗಿದೆ.
1 / 6
ಗದಗದ ನಾಗಾವಿಯ ಆರ್.ಡಿ.ಪಿ.ಆರ್ ವಿಶ್ವ ವಿದ್ಯಾಲಯದ ಕ್ಯಾಂಪಸ್ನಲ್ಲಿ 39.5 ಅಡಿ ಎತ್ತರದ ಕಂಚಿನ ಸ್ವಾಮಿ ವಿವೇಕಾನಂದ ಪುತ್ಥಳಿ ಲೋಕಾರ್ಪಣೆ ಮಾಡಲಾಯಿತು. ರಾಮಕೃಷ್ಣ ಆಶ್ರಮದ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ಲೋಕಾರ್ಪಣೆ ಮಾಡಿದ್ದಾರೆ.
2 / 6
ಸ್ವಾಮಿ ವಿವೇಕಾನಂದರು ಭಾರತ ಆಧ್ಯಾತ್ಮಿಕ ಶಕ್ತಿಯನ್ನು ವಿಶ್ವದ ಮುಂದೆ ಪರಿಚಯ ಮಾಡಿದ್ದರು. ವಿಶ್ವ ವಿಖ್ಯಾತ ಚಿಕಾಗೋ ಭಾಷಣ ಮಾಡಿದ್ದು, ಇದೇ ಸೆಪ್ಟೆಂಬರ್ 11 ರಂದು, ಅದರ ಸವಿನೆನಪಿಗಾಗಿ ಇಂದು ಲೋಕಾರ್ಪಣೆ ಮಾಡಲಾಯಿತು. ಇನ್ನು ಗದಗನ ವಿವೇಕಾನಂದ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಮಾರ್ಗದರ್ಶನದಲ್ಲಿ ಕಂಚಿನ ಪುತ್ಥಳಿ ನಿರ್ಮಾಣ ಮಾಡಿ, ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಲೋಕಾರ್ಪಣೆ ಮಾಡಲಾಗಿದೆ. ಸ್ವಾಮಿ ವಿವೇಕಾನಂದ ದರ್ಶನಗಳು ಮೈಗೊಡಿಸಲು ಇದೊಂದು ಪ್ರೇರಣೆ ಆಗುತ್ತದೆ ಎಂದು ಶ್ರೀಗಳು ಹೇಳಿದರು.
3 / 6
ಇನ್ನು ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಕಲ್ಕತ್ತಾದ ಸ್ವಾಮಿ ವಿವೇಕಾನಂದ ರಾಮಕೃಷ್ಣ ಮಿಷನ್ ಅವರು ಭವ್ಯವಾದ ಕಂಚಿನ ಪುತ್ಥಳಿಯನ್ನು ದೇಣಿಗೆಯಾಗಿ ನೀಡಿದ್ದಾರೆ. ಕಲ್ಕತ್ತಾದ ಶಿಲ್ಪಿ ಕಾರ್ತಿಕ್ ಕಾರ್ ಎನ್ನುವವರು ಈ ಭವ್ಯವಾದ ಸ್ವಾಮಿ ವಿವೇಕಾನಂದರ ಪುತ್ಥಳಿ ನಿರ್ಮಾಣ ಮಾಡಿದ್ದಾರೆ.
4 / 6
ಹಲವು ವರ್ಷಗಳ ನಿರಂತರ ಪರಿಶ್ರಮದಿಂದ ಇವಾಗ ಕಾಲ ಕೂಡಿಬಂದಿದ್ದು, ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿ ಸ್ವಾಮಿ ವಿವೇಕಾನಂದರ ಪುತ್ಥಳಿ ಅನಾವರಣವಾಗಿದೆ. ವಿವೇಕಾನಂದರೇ ಇಲ್ಲಿಗೆ ಬಂದು ನಿಂತಿದ್ದಾರೋ ಏನೋ ಎಂದು ಭಾಸವಾಗುತ್ತಿದೆ.
5 / 6
ಸ್ವಾಮಿ ವಿವೇಕಾನಂದ ಪ್ರೇರಣೆ ಇಲ್ಲಿನ ವಿದ್ಯಾರ್ಥಿಗಳಿಗೆ ಆಗಲಿ ಎನ್ನುವ ಉದ್ದೇಶದಿಂದ ನಿರ್ಮಾಣ ಮಾಡಲಾಗಿದೆ ಎಂದು ಸಚಿವ ಎಚ್ ಕೆ ಪಾಟೀಲ್ ಹೇಳಿದರು. ಇನ್ನು ದೇಶದಲ್ಲಿಯೇ ಅತೀ ಎತ್ತರದ ಸ್ವಾಮಿ ವಿವೇಕಾನಂದ ಪುತ್ಥಳಿ ಮುಂದೆ ನಿಂತು ಕಾಲೇಜು ಸ್ಟೂಡೆಂಟ್ ಸೆಲ್ಪಿ ಕಿಕ್ಲಿಸಿಕೊಂಡು, ಸಂಭ್ರಮಪಟ್ಟರು.
6 / 6
ಈಗಾಗಲೇ ಆರ್.ಡಿ.ಪಿ.ಆರ್ ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿ ಸಾಬರಮತಿ ಆಶ್ರಮ ಕೂಡ ನಿರ್ಮಾಣ ಮಾಡಲಾಗಿದೆ. ಈವಾಗ ಇದೆ ಕ್ಯಾಂಪಸ್ನಲ್ಲಿ ಸ್ವಾಮಿ ವಿವೇಕಾನಂದ ಪುತ್ಥಳಿ ಅನಾವರಣಗೊಳಿಸಲಾಯಿತು. ಹೀಗಾಗಿ ಇಡೀ ದೇಶದಲ್ಲಿ ಅತಿ ಎತ್ತರದ ಸ್ವಾಮಿ ವಿವೇಕಾನಂದ ಪುತ್ಥಳಿ ಮುದ್ರಣ ಕಾಶಿ ಗದಗನಲ್ಲಿರೋದು ಹೆಮ್ಮೆಯ ವಿಷಯವಾಗಿದೆ.