ಭಾರೀ ಮಳೆಗೆ ಗದಗ ಜಿಮ್ಸ್​ ಆಸ್ಪತ್ರೆಯ ಔಷಧ ವಿಭಾಗಕ್ಕೆ ನುಗ್ಗಿದ ನೀರು

| Updated By: ವಿವೇಕ ಬಿರಾದಾರ

Updated on: Sep 08, 2022 | 6:22 PM

ಗದಗ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಗದಗ ಜಿಮ್ಸ್​ ಆಸ್ಪತ್ರೆಯ ಔಷಧ ವಿಭಾಗಕ್ಕೆ ನೀರು ನುಗ್ಗಿ ಕೋಟ್ಯಂತರ ರೂಪಾಯಿ ಮೌಲ್ಯದ ಔಷಧಗಳು ನೀರುಪಾಲಾಗಿವೆ.

ಭಾರೀ ಮಳೆಗೆ ಗದಗ ಜಿಮ್ಸ್​ ಆಸ್ಪತ್ರೆಯ ಔಷಧ ವಿಭಾಗಕ್ಕೆ ನುಗ್ಗಿದ ನೀರು
ನೀರುಪಾಲದ ಔಷಧಗಳು
Follow us on

ಗದಗ: ಗದಗ (Gadag) ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಗದಗ ಜಿಮ್ಸ್​ ಆಸ್ಪತ್ರೆಯ (Jims Hospital) ಔಷಧ ವಿಭಾಗಕ್ಕೆ ನೀರು ನುಗ್ಗಿ ಕೋಟ್ಯಂತರ ರೂಪಾಯಿ ಮೌಲ್ಯದ ಔಷಧಗಳು ನೀರುಪಾಲಾಗಿವೆ. ಔಷಧ ಹಾಳಾಗಿದ್ದನ್ನು ಕಂಡು ಮೆಡಿಸಿನ್ ವಿಭಾಗದ ಮುಖ್ಯಸ್ಥ ಮಹೇಶಗೌಡ ದಾನಪ್ಪಗೌಡರಗೆ ಎದೆನೋವು ಕಾಣಿಸಿಕೊಂಡಿದ್ದು, ಜಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನೀರು ನುಗ್ಗಿ ಮೂರು ಕಳೆದರು ಔಷಧಿಗಳನ್ನು ಸ್ಥಳಾಂತರಿಸುವ ಗೋಜಿಗೆ ಆಸ್ಪತ್ರೆಯ ಸಿಬ್ಬಂದಿಗಳು ಮುಂದಾಗಿಲ್ಲ. ಔಷಧಿ ಸ್ಥಳಾಂತರಕ್ಕೆ ಸಿಬ್ಬಂದಿಗಳು ನೀ ಮಾಡು.. ನಾ ಮಾಡು.. ಅಂತ ವಾಗ್ವಾದ ಮಾಡಿದ್ದಾರೆ. ಈ ಬಗ್ಗೆ ಈ ಮೊದಲೇ ಜಿಮ್ಸ್ ನಿರ್ದೇಶಕರಿಗೆ ಔಷಧಿ ವಿಭಾಗ ಸ್ಥಳಾಂತರ ಮಾಡುವಂತೆ ಪತ್ರ ಬರೆದಿದ್ದರಂತೆ. ಆದರೆ, ನಿರ್ದೇಶಕಿ ಡಾ. ರೇಖಾ ಅವರ ನಿರ್ಲಕ್ಷ್ಯಕ್ಕೆ ಇವತ್ತು ದೊಡ್ಡ ಅನಾಹುತ ಆಗಿದೆ ಅಂತ ಸಿಬ್ಬಂದಿ ಗೊಣಗುಡುತ್ತಿದ್ದಾರೆ.

ಈ ಸಂಬಂಧ ಟಿವಿ9 ಔಷಧಾಲಯಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಜಿಮ್ಸ್ ನಿರ್ದೇಶಕಿ ರೇಖಾ ಓಡೋಡಿ ಔಷಧಿ ಸ್ಟಾಕ್ ರೂಂಗೆ ಬಂದು ಪರಿಶೀನೆ ಮಾಡಿದ್ದಾರೆ. ಇಷ್ಟಾಲ್ಲಾ ರಾದ್ಧಾಂತ ಆದರೂ ನಿರ್ದೇಶಕಿ ಅವರಿಗೆ ಎಷ್ಟು ಪ್ರಮಾಣ ಔಷಧಿ ನೀರು ಪಾಲಾಗಿದೆ ಅನ್ನೋ ಸ್ಪಷ್ಟ ಮಾಹಿತಿ ಇಲ್ಲ. ಸುಮಾರು ಮೂರು ಕೋಟಿ ಮೊತ್ತದ ಔಷಧಿ ನೀರು ಪಾಲಾಗಿದೆ. ಮರು ಉಪಯೋಗ ಮಾಡುವ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ ಅಂತ ಜಿಮ್ಸ್ ನಿರ್ದೇಶಕಿ ಡಾ. ರೇಖಾ ಹೇಳಿದ್ದಾರೆ.

ನಿರಂತರ ಮಳೆಯಿಂದ ಗದಗ ನಗರದ ಕೆ ಎಚ್ ಪಾಟೀಲ್ ಸರ್ಕಲ್ ಬಳಿ ಕಮ್ಮಾರ ಸಾಲ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಮೂರು ಜನ ಬಾಣಂತಿಯರು ಗೋಳಾಡುತ್ತಿದ್ದಾರೆ. ಸರೋಜಾ ಚವಾಣ ಒಂದು ತಿಂಗಳ ಬಾಣಂತಿ, ಕೋಮಲ್ ಚವಾಣ 15 ದಿನದ ಬಾಣಂತಿ, ಸವಿತಾ ಚವಾಣ ಐದು ತಿಂಗಳ ಬಾಣಂತಿಯರು ಹಸುಗೂಸಗಳೊಂದಿ ಶೆಡ್ ನಲ್ಲಿ ಆಸರೆ ಪಡೆದಿದ್ದಾರೆ.

ಮತ್ತಷ್ಟು ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:47 pm, Thu, 8 September 22