ಗದಗ: ಲವ್ ಜಿಹಾದ್‌ಗೆ ಬಲಿಯಾಗದಂತೆ 200 ಯುವತಿಯರಿಗೆ ಆಣೆ ಪ್ರಮಾಣ
ಲವ್ ಜಿಹಾದ್ ಆತಂಕ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಆಣೆ ಪ್ರಮಾಣ ಮಾಡಿಸಿದ್ದಾರೆ. ಗದಗದಲ್ಲಿ ಸುಮಾರು 200 ಯುವತಿಯರಿಗೆ ಅನ್ಯ ಧರ್ಮಿ ಯುವಕರ ಲವ್ ಜಿಹಾದ್‌ಗೆ ಬಲಿಯಾಗದಂತೆ ದೇವರ ಮೇಲೆ ಆಣೆ ಪ್ರಮಾಣ ಮಾಡಿಸಲಾಗಿದೆ.
ಗದಗ, (ನವೆಂಬರ್ 26): ಲವ್ ಜಿಹಾದ್ ಆತಂಕ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಆಣೆ ಪ್ರಮಾಣ ಮಾಡಿಸಿದ್ದಾರೆ. ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತೋತ್ಸವದ ಇಂದು(ನವೆಂಬರ್ 26) ಗದಗ ನಗರದ ವಿಠ್ಠಲ ರೂಢಮಠದಲ್ಲಿ ಜಾಗೃತಿ ಸಭೆಯಲ್ಲಿ ಲವ್ ಜಿಹಾದ್ ಬಗ್ಗೆ ಅರಿವು ಕಾರ್ಯಕ್ರಮ ನಡೆಯಿತು. ಇದೇ ವೇಳೆ ಪೋಷಕರು ಸುಮಾರು 200 ಯುವತಿಯರಿಗೆ ಅನ್ಯ ಧರ್ಮಿ ಯುವಕರ ಲವ್ ಜಿಹಾದ್‌ಗೆ ಬಲಿಯಾಗದಂತೆ ದೇವರ ಮೇಲೆ ಆಣೆ ಪ್ರಮಾಣ ಮಾಡಿಸಿದರು.
ಲವ್ ಜಿಹಾದ್ ತಡೆಗೆ ವಿಹಿಂಪದಿಂದ ಸಹಾಯವಾಣಿ
ದೇಶಾದ್ಯಂತ ಲವ್ ಜಿಹಾದ್ (Love Jihad) ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರಿಂದ ಹಿಂದೂ ಹೆಣ್ಣುಮಕ್ಕಳನ್ನು ರಕ್ಷಿಸಬೇಕು ಎಂಬ ಕೂಗು ಹಿಂದು ಸಂಘಟನೆಗಳಿಂದ, ಹಿಂದುವಾದಿಗಳಿಂದ ಕೇಳಿಬರುತ್ತಿರುವ ಬೆನ್ನಲ್ಲೇ ಇದರ ತಡೆಗೆ ವಿಶ್ವ ಹಿಂದೂ ಪರಿಷತ್ ವತಿಯಿಂದ ಹೆಲ್ಪ್‌ಲೈನ್ ಆರಂಭ ಮಾಡಲಾಗಿದೆ. ಮಂಗಳೂರಿನಲ್ಲಿ ವಿಶ್ವ ಹಿಂದು ಪರಿಷತ್ ಸಹಾಯವಾಣಿಯನ್ನು ಪ್ರಾರಂಭ ಮಾಡಿದ್ದು, ಲವ್ ಜಿಹಾದ್ ಮುಕ್ತ ಸಮಾಜ ನಮ್ಮ ಗುರಿ ಎಂದು ಸ್ಲೋಗನ್ ಅನ್ನು ಸಹ ಹಾಕಿಕೊಳ್ಳಲಾಗಿದೆ.
ಲವ್ ಜಿಹಾದ್‌ಗೆ ಬಲಿಯಾಗುತ್ತಿರುವ ಸಹೋದರಿಯರ ರಕ್ಷಣೆಗೆ “ಲವ್ ಜಿಹಾದ್ ಹೆಲ್ಪ್‌ಲೈನ್” ಆರಂಭ ಮಾಡಿದ್ದು, ಮೊಬೈಲ್ ನಂಬರ್: 9148658108 ಗೆ ಕರೆ ಹಾಗೂ 9591658108 ಗೆ ವಾಟ್ಸ್‌ಆ್ಯಪ್‌ನಲ್ಲಿ ಸಿಲುಕಿದವರ ಮಾಹಿತಿ ನೀಡಲು ಮನವಿ ಮಾಡಲಾಗಿದೆ.
ಅನ್ಯ ಕೋಮಿನವರ ಜತೆ ಸಂಪರ್ಕದಲ್ಲಿರುವ ಯುವತಿಯರ ಫೋಟೊ ಸಹಿತ ವಿವರಗಳನ್ನೊಳಗೊಂಡ ಮಾಹಿತಿಯನ್ನು ವಾಟ್ಸ್‌ಆ್ಯಪ್‌ಗೆ ಕಳುಹಿಸುವಂತೆ ಇಲ್ಲವೇ ಕರೆ ಮಾಡಿ ತಿಳಿಸುವಂತೆ ಮನವಿ ಮಾಡಲಾಗಿದೆ. ಒಂದು ವೇಳೆ ಬ್ಲ್ಯಾಕ್‌ಮೇಲ್‌ಗೆ ಒಳಗಾದವರು ಸಹ ಕರೆ ಮಾಡಿ ವಿವರಣೆ ನೀಡಬಹುದಾಗಿದ್ದು, ಗೌಪ್ಯತೆಯನ್ನು ಕಾಪಾಡುವ ಭರವಸೆ ನೀಡಲಾಗಿದೆ. ಇಮೇಲ್ – antilovejihadmlr@gmail.com ಗೂ ಮಾಹಿತಿ ನೀಡುವಂತೆ ಪೋಸ್ಟರ್‌ನಲ್ಲಿ ಹೇಳಲಾಗಿದೆ.
ಪ್ರೀತಿ-ಪ್ರೇಮದ ಹೆಸರಿನಲ್ಲಿ ಮೋಸ
ಮುಸ್ಲಿಂ ಯುವಕರು ಹಿಂದೂ ಅಥವಾ ಅನ್ಯಧರ್ಮೀಯ ಯುವತಿಯರನ್ನು ಪ್ರೀತಿ ಪ್ರೇಮದ ಹೆಸರಲ್ಲಿ ನಂಬಿಸಿ, ಬಳಿಕ ಆಕೆಯನ್ನು ಮತಾಂತರ ಮಾಡುವುದನ್ನು ಲವ್ ಜಿಹಾದ್ ಎಂದು ಬಲಪಂಥೀಯ ಸಂಘಟನೆಗಳು ವ್ಯಾಖ್ಯಾನಿಸಿವೆ. ಕೆಲ ಮುಸ್ಲಿಂ ಯುವಕರು ಉದ್ದೇಶಪೂರ್ವಕವಾಗಿಯೇ ಹಿಂದೂ ಯುವತಿಯರನ್ನು ಪ್ರೇಮದ ಬಲೆಯಲ್ಲಿ ಬೀಳಿಸಿಕೊಂಡು ಬಳಿಕ ಮೋಸ ಮಾಡಿರುವ ಸಾಕಷ್ಟು ಉದಾಹರಣೆಗಳು ಇವೆ. ಇನ್ನು ಕೆಲವರು ಹಿಂದೂ ಯುವತಿಯರನ್ನು ಮದುವೆಯಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಕೊಂಡಿದ್ದಾರೆ.
ಅಲ್ಲದೇ ಕೆಲವರು ಹಿಂದೂ ಧರ್ಮದ ಯುವತಿಯರನ್ನು ಮದುವೆಯಾಗಿ ಬಳಿಕ ಕೈಕೊಟ್ಟಿರುವ ಪ್ರಕರಣಗಳು ಸಹ ಕಂಡುಬಂದಿವೆ. ಹೀಗಾಗಿ ಹಿಂದೂ ಸಂಘಟನೆಗಳು ಲವ್ ಜಿಹಾದ್ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ