ಗದಗ: ಒಂದೇ ಕುಟುಂಬ ನಾಲ್ವರ ಕೊಲೆ ಪೂರ್ವ ನಿಯೋಜಿತ: ಎಸ್​​ಪಿ

| Updated By: ವಿವೇಕ ಬಿರಾದಾರ

Updated on: Apr 21, 2024 | 11:25 AM

ಶನಿವಾರ ಏಪ್ರಿಲ್​ 19 ರಂದು ಗದಗ ನಗರದ ದಾಸರ ಓಣಿಯಲ್ಲಿರುವ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಮನೆಯಲ್ಲಿ ಮಲಗಿದ್ದ ನಾಲ್ವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಆರೋಪಿಗಳು ಕೊಲೆ ಮಾಡಿ ಪರಾರಿಯಾಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ. ಈ ಮಧ್ಯೆ ಗದಗ ಎಸ್​ಪಿ ಕೊಲೆ ಕುರಿತು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಗದಗ: ಒಂದೇ ಕುಟುಂಬ ನಾಲ್ವರ ಕೊಲೆ ಪೂರ್ವ ನಿಯೋಜಿತ: ಎಸ್​​ಪಿ
ಆರೋಪಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆ
Follow us on

ಗದಗ, ಏಪ್ರಿಲ್​ 21: ಒಂದೇ ಕುಟುಂಬದ ನಾಲ್ವರನ್ನು ಭೀಕರವಾಗಿ ಕೊಲೆ ಮಾಡಿರುವುದು ಪೂರ್ವನಿಯೋಜಿತ ಕೃತ್ಯವಾಗಿದೆ. ಮತ್ತು ಕೌಟುಂಬಿಕ ಹಾಗೂ ವ್ಯವಹಾರಿಕ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ ಎಂದು ಎಸ್​ಪಿ ಬಿ.ಎಸ್.ನೇಮಗೌಡ (SP Nemgowda) ಹೇಳಿದ್ದಾರೆ. ಗದಗನಲ್ಲಿ (Gadag) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಏ.19ರ ಮುಂಜಾನೆ 3 ಗಂಟೆಗೆ ಐವರು ಮನೆಯೊಳಗೆ ನುಗ್ಗಿ ಕೊಲೆಗೈದು ಆರೋಪಿಗಳು ಪರಾರಿಯಾಗಿದ್ದಾರೆ. ಹಂತಕರ ಚಲನವಲನ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಆಸ್ತಿ ವಿಚಾರ, ವೈಯಕ್ತಿಕ ಕಾರಣಕ್ಕೆ ಕೊಲೆ ನಡೆದಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ. ಒಟ್ಟು ಐದು ತಂಡ ರಚಿಸಿ ಹಂತಕರಿಗಾಗಿ ಹುಡುಕಾಟ ನೆಡೆಸಿದ್ದೇವೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುತ್ತೇವೆ ಎಂದರು.

ಏನಿದು ಘಟನೆ

ಗದಗ ನಗರದ ದಾಸರ ಓಣಿಯಲ್ಲಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಕುಟುಂಬ ವಾಸವಾಗಿದೆ. ಸುನಂದಾ ಬಾಕಳೆ ಪುತ್ರ ಕಾರ್ತಿಕ ಬಾಕಳೆಯ (28) ನಿಶ್ಚಿತಾರ್ಥ ಕಾರ್ಯ ಹಿನ್ನೆಲೆಯಲ್ಲಿ ಸಂಬಂಧಿಕರಾದ ಪರಶುರಾಮ ಕುಟುಂಬ ಕೊಪ್ಪಳದಿಂದ ಬಂದಿದ್ದ ಸುನಂದಾ ಬಾಕಳೆ ಮನೆಗೆ ಬಂದಿದ್ದರು. ಪರಶುರಾಮ, ಸುನಂದಾ ಬಾಕಳೆ ಪತಿ ಪ್ರಕಾಶ್ ಬಾಕಳೆ ಅವರ ಮೊದಲನೇ ಹೆಂಡತಿ ಸಹೋದರ. ಪರಶುರಾಮ ಹಾದಿಮನಿ (55) ಪತ್ನಿ ಲಕ್ಷ್ಮೀ (45) ಮತ್ತು ಪುತ್ರಿ ಆಕಾಂಕ್ಷಾ (16) ಸುನಂದಾ ಬಾಕಳೆ ಮನೆಯಲ್ಲಿ ತಂಗಿದ್ದರು.

ಏಪ್ರಿಲ್​ 19ರ ರಾತ್ರಿ ಪರಶುರಾಮ ಹಾದಿಮನಿ ಪುತ್ರಿ ಆಕಾಂಕ್ಷಾ ಹುಟ್ಟಿದ ಹಬ್ಬವನ್ನು ಸುನಂದಾ ಬಾಕಳೆ ಮನೆಯಲ್ಲಿ ಆಚರಿಸಲಾಗಿತ್ತು. ರಾತ್ರಿ ಎಲ್ಲರೂ ಮಲಗಿದ್ದಾರೆ. ಪರಶುರಾಮ ಕುಟುಂಬ ಮೊದಲನೇ ಮಹಡಿಯ ಕೋಣೆಯಲ್ಲಿ ಮಲಗಿದ್ದರು.

ಇದನ್ನೂ ಓದಿ: ಮಗಳನ್ನು ಸಂಬಂಧಿಕರ ಮನೆಯಲ್ಲಿ ಇರಿಸಿದಕ್ಕೆ ಪಾಗಲ್​ ಪ್ರೇಮಿಯ ಕಿರಿಕ್​, ಪೋಷಕರ ಮೇಲೆ ಹಲ್ಲೆ

ಪರಶುರಾಮ ಕುಟುಂಬ ಮಲಗಿದ್ದ ಕೋಣೆಯ ಗಾಜಿನ ಕಿಟಕಿಯನ್ನು ಒಡೆದು ಒಳ ನುಗ್ಗಿದ ದುಷ್ಕರ್ಮಿಗಳು ಮೂವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಕಿಟಿಕಿ ಒಡೆದ ಮತ್ತು ಕಿರಿಚಾಟದ ಸದ್ದು ಕೇಳಿ ಏನಾಯಿತೆಂದು ಕೆಳಗಿನ ಕೋಣೆಯಲ್ಲಿ ಮಲಗಿದ್ದ ಕಾರ್ತಿಕ್​ ಬಾಕಳೆ ನೋಡಲು ಮೇಲೆ ಹೋಗಿದ್ದಾರೆ. ಆಗ ದುಷ್ಕರ್ಮಿಗಳು ಕಾರ್ತಿಕ್​ನನ್ನೂ ಕೊಲೆ ಮಾಡಿದ್ದರು. ಬಳಿಕ ದುಷ್ಕರ್ಮಿಗಳು ಮನೆಯ ಮಾಲಿಕ ಪ್ರಕಾಶ್ ಬಾಕಳೆ ಮತ್ತು ಪತ್ನಿ, ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರು ಮಲಗಿದ್ದ ಕೋಣೆಯ ಬಾಗಲಿ ತಟ್ಟಿದ್ದರು.

ಆದರೆ ದಂಪತಿ ಬಾಗಿಲು ತೆಗೆಯದೆ ಪೊಲೀಸರಿಗೆ ಫೋನ್ ಮಾಡಿದ್ದರು. ಪೊಲೀಸರಿಗೆ ಫೋನ್ ಮಾಡುತ್ತಿದ್ದಂತೆ ದುಷ್ಕರ್ಮಿಗಳು ಹಿಂಬಾಗಿಲಿನಿಂದ ಪರಾರಿಯಾಗಿದ್ದರು. ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳನ್ನು ದುಷ್ಕರ್ಮಿಗಳು ಚರಂಡಿಯಲ್ಲಿ ಬಿಸಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:06 am, Sun, 21 April 24