ಗದಗ, ನವೆಂಬರ್ 23: ಬೆಂಗಳೂರಿನಲ್ಲಿ ವಿದ್ಯುತ್ (electric) ತಂತಿ ತಗುಲಿ ತಾಯಿ, ಮಗು ಬಲಿಯಾದ ದುರತಂತ ಘಟನೆ ನಡೆದಿದೆ. ಗದಗ ಜಿಲ್ಲೆಯಲ್ಲೂ ಇಂಥ ಅಪಾಯಕಾರಿ ಟಿಸಿಗಳು ರಸ್ತೆ ಪಕ್ಕದಲ್ಲೇ ಬೆಳಕು ನೀಡುವ ವಿದ್ಯುತ್ ಟಿಸಿಗಳು ಜನರ ಜೀವಕ್ಕೆ ಸಂಚಕಾರ ತರ್ತಾಯಿವೆ. ಜನನಿಬಿಡ ಪ್ರದೇಶದಲ್ಲಿ ವಿದ್ಯುತ್ ಟ್ರಾನ್ಸಫರ್ಮರ್, ಸ್ವಲ್ಪ ಯಾಮಾರಿದರು ಅಪಾಯ ಗ್ಯಾರಂಟಿ. ಹಾಳಾದ ವಿದ್ಯುತ್ ಕಂಬಗಳು. ಒಂದಾ ಎರೆಡಾ, ಹೆಸ್ಕಾಂ ಇಲಾಖೆ ದಿವ್ಯ ನಿರ್ಲಕ್ಷ್ಯದಿಂದ, ಜನರು ಅಪಾಯದಲ್ಲಿ ಜೀವನ ನಡೆಸುವಂತಹ ಸ್ಥಿತಿ ನಿರ್ಮಾಣವಾಗಿದೆ.
ಗದಗ ಬೆಟಗೇರಿ ಅವಳಿ ನಗರ, ಸೇರಿದಂತೆ ಜಿಲ್ಲೆಯ ಯಳವತ್ತಿ ಗ್ರಾಮದಲ್ಲಿ, ಜನರು ಆತಂಕದಲ್ಲಿ ಜೀವನ ನಡೆಸುವಂತ ಸ್ಥಿತಿ ನಿರ್ಮಾಣವಾಗಿದೆ. ನಗರದ ಹೃದಯ ಭಾಗದಲ್ಲಿಯೇ ವಿದ್ಯುತ್ ಟ್ರಾನ್ಸಫರ್ಮರ್ ಬಲಿಗಾಗಿ ಕಾದು ಕುಳಿತುಕೊಂಡಿದೆ. ಟಿಸಿಗೆ ಯಾವುದೆ ತಂತಿ ಬೇಲಿ ಅಥವಾ ಸುರಕ್ಷಿತ ಕ್ರಮಗಳನ್ನು ಕೈಗೊಂಡಿಲ್ಲಾ. ಹೀಗಾಗಿ ಮಕ್ಕಳಿಗೆ ಕೈಗಟ್ಟುವ ಮಟ್ಟದಲ್ಲಿ ಟಿಸಿಯನ್ನು ಅಳವಡಿಕೆ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರು: ತಾಯಿ, ಮಗು ಸಜೀವ ದಹನ ಪ್ರಕರಣ: ಸ್ಪೇಷನ್ ಬೇಲ್ ಮೇಲೆ ಬೆಸ್ಕಾಂ ಅಧಿಕಾರಿಗಳ ಬಿಡುಗಡೆ
ಹೀಗಾಗಿ ನಿತ್ಯ ಜನರು ಯಮನ ಪಕ್ಕದಲ್ಲೇ ಬದುಕುವಂತ ಸ್ಥಿತಿ ಇದ್ದರೂ ಹೆಸ್ಕಾಂ ಡೋಂಟ್ ಕೇರ್ ಅಂತಿದೆ. ಇದು ಗದಗ-ಬೆಟಗೇರಿ ಅವಳಿ ನಗರದ ಜನರು ಆಕ್ರೋಶಕ್ಕೆ ಕಾರಣವಾಗಿದೆ. ಹೆಸ್ಕಾಂ ಎಚ್ಚೆತ್ತುಕೊಂಡು ಜನರು ಜೀವಕ್ಕೆ ಕಾಯುತ್ತಿರೋ ಟಿಸಿಗಳಿಗೆ ತಂತಿ ಬೇಲಿ ಹಾಕುವ ಮೂಲಕ ಜನರನ್ನು ಕಾಪಾಡಬೇಕಿದೆ ಅಂತ ಹೋರಾಟಗಾರ ಸಯ್ಯದ್ ಕೊಪ್ಪಳ ಒತ್ತಾಯಿಸಿದ್ದಾರೆ.
ನಗರದಲ್ಲಿ ಕೂಡ ವಿದ್ಯುತ್ ಟ್ರಾನ್ಸಫರ್ಮರ್ ಹಾಗೂ ವಿದ್ಯುತ್ ಕಂಬದಲ್ಲಿನ ತಂತಿ ಅವಘಡಕೆ ಆಹ್ವಾನ ನೀಡುತ್ತಿವೆ. ರಸ್ತೆ ಪಕ್ಕದಲ್ಲಿ ವಿದ್ಯುತ್ ಟ್ರಾನ್ಸಫರ್ಮರ್ ಅಳವಡಿಕೆ ಮಾಡಲಾಗಿದೆ. ಯಾವುದೇ ಸುರಕ್ಷಿತ ಕ್ರಮಗಳನ್ನು ಕೈಗೊಂಡಿಲ್ಲ. ಮಕ್ಕಳು ಹಾಗೂ ಮಹಿಳೆಯರು ಅದರ ಪಕ್ಕದಲ್ಲಿಯೇ ಓಡಾಡುತ್ತಾರೆ. ಜನನಿಬಿಡ ಪ್ರದೇಶದಲ್ಲಿಯೇ ವಿದ್ಯುತ್ ಕಂಬದಲ್ಲಿ ವೈಯರ್ ಡೇಜರಸ್ ಆಗಿದೆ. ಇದರ ಪಕ್ಕದಲ್ಲಿ ಶಾಲಾ, ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಹಾಗೂ ಮಹಿಳೆಯರು ನಡೆದುಕೊಂಡು ಹೋಗುತ್ತಾರೆ.
ಇದನ್ನೂ ಓದಿ: ಬೆಸ್ಕಾಂ ನಿರ್ಲಕ್ಷ್ಯಕ್ಕೆ ವಿದ್ಯುತ್ ತಂತಿ ತಗುಲಿ 70 ಜನರ ಸಾವು: ಇಲ್ಲಿದೆ ಸಂಪೂರ್ಣ ಡೀಟೈಲ್ಸ್
ಸ್ವಲ್ಪ ಹೆಚ್ಚು ಕಡಿಮೆಯಾದರೂ ಅಪಾಯ ಗ್ಯಾರಂಟಿ. ಹೆಸ್ಕಾಂ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ್ರು ಯಾವುದೇ ಪ್ರಯೋಜನವಾಗಿಲ್ಲಾ. ಕೂಡಲೇ ವಿದ್ಯುತ್ ಕಂಬವನ್ನು ಸ್ಥಳಾಂತರ ಮಾಡ್ಬೇಕು ಎಂದು ಸ್ಥಳೀಯ ನಿವಾಸಿ ಚಂದ್ರಕಾಂತ ಒತ್ತಾಯ ಮಾಡಿದ್ದಾರೆ.
ಜಿಲ್ಲೆಯಲ್ಲಿ ಸಾಕಷ್ಟು ಕಡೆ ವಿದ್ಯುತ್ ಟ್ರಾನ್ಸಫರ್ಮರ್ ಹಾಗೂ ವಿದ್ಯುತ್ ಕಂಬಗಳಲ್ಲಿನ ತಂತಿ ಸಾಕಷ್ಟು ಅಪಾಯಕ್ಕೆ ಅಹ್ವಾನ ನೀಡ್ತಾಯಿದೆ. ಅನಾಹುತ ಆಗುವ ಮಚ್ಚೆ ಹೆಸ್ಕಾಂ ಇಲಾಖೆ ಎಚ್ಚತ್ತುಕೊಂಡು ಆದಷ್ಟು ಬೇಗ ಜಿಲ್ಲೆಯ ಡೆಂಜರಸ್ ವಿದ್ಯುತ್ ಟ್ರಾನ್ಸಪರ್ಮರ್ ಹಾಗೂ ವಿದ್ಯುತ್ ವೈಯರ್ ಸ್ಥಳಾಂತರ ಮಾಡಿ, ಜನರ ಜೀವನವನ್ನು ಕಾಪಾಡಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:12 pm, Wed, 22 November 23