ಬೆಂಗಳೂರು: ತಾಯಿ, ಮಗು ಸಜೀವ ದಹನ ಪ್ರಕರಣ: ಸ್ಪೇಷನ್​ ಬೇಲ್​ ಮೇಲೆ ಬೆಸ್ಕಾಂ ಅಧಿಕಾರಿಗಳ ಬಿಡುಗಡೆ

ಬೆಂಗಳೂರು ನಗರದ ವೈಟ್​ಫೀಲ್ಡ್​​​ನ ಕಾಡುಗೋಡಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್​ ತಂತಿ ತುಳಿದು ನಿನ್ನೆ (ನವೆಂಬರ್ 19) ಬಾಣಂತಿ ಹಾಗೂ 9 ತಿಂಗಳ ಹಸುಗೂಸು ಮೃತಪಟ್ಟಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಬೆಸ್ಕಾಂ ಅಧಿಕಾರಿಗಳು 24 ಗಂಟೆಗೊಳಗೆ ಬಿಡುಗಡೆಯಾಗಿದ್ದಾರೆ.

ಬೆಂಗಳೂರು: ತಾಯಿ, ಮಗು ಸಜೀವ ದಹನ ಪ್ರಕರಣ: ಸ್ಪೇಷನ್​ ಬೇಲ್​ ಮೇಲೆ ಬೆಸ್ಕಾಂ ಅಧಿಕಾರಿಗಳ ಬಿಡುಗಡೆ
ಮೃತ ತಾಯಿ, ಮಗು
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Nov 20, 2023 | 9:40 AM

ಬೆಂಗಳೂರು, (ನವೆಂಬರ್ 20): ಬೆಂಗಳೂರು ನಗರದ ವೈಟ್​ಫೀಲ್ಡ್​​​ನ ಕಾಡುಗೋಡಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್​ ತಂತಿ ತುಳಿದು ನಿನ್ನೆ (ನವೆಂಬರ್ 19) ಬಾಣಂತಿ ಹಾಗೂ 9 ತಿಂಗಳ ಹಸುಗೂಸು ಮೃತಪಟ್ಟಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಬೆಸ್ಕಾಂ ಅಧಿಕಾರಿಗಳು ಜಾಮೀನಿನ ಮೇಲೆ ಹೊರಬಂದಿದ್ದಾರೆ. ನಿರ್ಲಕ್ಷ್ಯದ ಆರೋಪದ ಮೇಲೆ ಬೆಸ್ಕಾಂ  ಎಇ ಚೇತನ್‌, ಜೆಇ ರಾಜಣ್ಣ, ಸ್ಟೇಷನ್ ಆಪರೇಟರ್ ಮಂಜು ಸೇರಿದಂತೆ ಐವರನ್ನು ಕಾಡುಗೋಡಿ ಪೊಲೀಸರು ಅರೆಸ್ಟ್ ಮಾಡಿದ್ದರು. ಆದ್ರೆ, ಇದೀಗ ಸ್ಟೇಷನ್ ಬೇಲ್​ ಮೇಲೆ ಬಿಡುಗಡೆ ಮಾಡಲಾಗಿದೆ.

ಕಾಡುಗೋಡಿಯ ಎ.ಕೆ.ಗೋಪಾಲ ಕಾಲೋನಿಯ ನಿವಾಸಿ ಸಂತೋಷ್, ಪತ್ನಿ ಜೊತೆ ತಮ್ಮೂರು ಚೆನ್ನೈಗೆ ಹೋಗಿದ್ದರು. ನಿನ್ನೆ (ನವೆಂಬರ್ 19) ಬೆಳಗ್ಗೆ 5 ಘಂಟೆ ಸುಮಾರಿಗೆ ವಾಪಸ್ಸು ಸಿಲ್ಕ್ ಬೋರ್ಡ್ ಬಳಿ ಇಳಿದು, ಬಿಎಂಟಿಸಿ ಬಸ್ ಹತ್ತಿ ಹೋಫ್​ ಫಾರಂ ಸಿಗ್ನಲ್​ವರೆಗೂ ಬಂದಿದ್ರು. ಮಹಿಳೆ ಸೌಂದರ್ಯ 9 ತಿಂಗಳ ಮಗುವನ್ನ ಎತ್ತಿಕೊಂಡು ಫುಟ್ಪಾತ್​ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಪತಿ ಸಂತೋಷ್ ಫುಟ್ಪಾತ್ ಕೆಳಗೆ ಬರುತ್ತಿದ್ದರು. ಆದ್ರೆ, ಫುಟ್ಪಾತ್​ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಬೆಳಗಿನ ಜಾವ ಮಬ್ಬುಕತ್ತಲಲ್ಲಿ ವಿದ್ಯುತ್ ತಂತಿ ಕಾಣದೆ ಅದರ ಮೇಲೆ ಸೌಂದರ್ಯ ಕಾಲಿಟ್ಟಿದ್ದರು. ಅಷ್ಟೇ, ಸೌಂದರ್ಯ ಮಗು ಜೊತೆಗೆ ಅಲ್ಲೇ ಕುಸಿದು ಬಿದ್ದಿದ್ರು. ಪಕ್ಕದಲ್ಲೇ ಬರುತ್ತಿದ್ದ ಪತಿ ಸಂತೋಷ್​ಗೂ ಶಾಕ್ ಹೊಡೆದಿತ್ತು.

ಇದನ್ನೂ ಓದಿ: ಬೆಂಗಳೂರು: ತಾಯಿ, ಮಗು ಸಜೀವ ದಹನ ಪ್ರಕರಣ, ಬೆಸ್ಕಾಂನ ಐವರು ಸಿಬ್ಬಂದಿ ಅರೆಸ್ಟ್

ದುರಂತ ನಡೆದು ಒಂದು ತಾಸೂ ಕಳೆದರೂ ಸ್ಥಳಕ್ಕೆ ಯಾವೊಬ್ಬ ಅಧಿಕಾರಿಯೂ ಬಂದಿಲ್ಲ. ಹೀಗಾಗಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಸ್ಫೋಟಗೊಂಡಿತು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಆಗಬೇಕು. ಮೃತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕಿಡಿಕಾರಿದ್ದರು.

ಕಳೆದ ವರ್ಷ ಟ್ರಾನ್ಸ್ ಫಾರ್ಮರ್ ಸ್ಫೋಟಕ್ಕೆ ಬೆಂಗಳೂರಿನಲ್ಲಿ ಯುವತಿಯೊಬ್ಬಳು ಧಗಧಗಿಸಿ ಹೊತ್ತಿ ಉರಿದಿದ್ದಳು. ಈ ಘೋರ ಘಟನೆ ಬೆಸ್ಕಾಂ ಹೊಣೆಗೇಡಿತನವನ್ನು ಬಯಲುಮಾಡಿತ್ತು. ಇದೀಗ ಮತ್ತೊಂದು ಭೀಕರ ದುರಂತವೇ ನಡೆದುಹೋಗಿದೆ. ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ, ಮಗು ಜೀವಂತವಾಗಿ ಬೆಂದುಹೋಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:34 am, Mon, 20 November 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್